ನೇಪಾಳ ಪ್ರಧಾನಿ ಕುರ್ಚಿ ಗಡಗಡ: ನನ್ನ ಪದಚ್ಯುತಿಗೆ ಭಾರತ ಷಡ್ಯಂತ್ರ, ಪ್ರಧಾನಿ ಕೆಪಿ ಒಲಿ ಆರೋಪ

ಭಾರತದ ವಿರುದ್ಧ ಎದೆಯುಬ್ಬಿಸಿ ನಿಂತ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಇದೀಗ ತಮ್ಮ ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.
ಮೋದಿ-ಕೆಪಿ ಒಲಿ
ಮೋದಿ-ಕೆಪಿ ಒಲಿ

ಕಠ್ಮಂಡು: ಭಾರತದ ವಿರುದ್ಧ ಎದೆಯುಬ್ಬಿಸಿ ನಿಂತ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಇದೀಗ ತಮ್ಮ ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. 

ಸದ್ಯಕ್ಕೆ ಕೆಪಿ ಒಲಿ ಸರ್ಕಾರದ ಸ್ಥಿತಿ ಡೋಲಾಯಮಾನವಾಗಿದೆ. ಇದಕ್ಕೆ ಕಾರಣ ನೇಪಾಳದ ಓಲಿ ನಾಯಕತ್ವದ ವಿರುದ್ಧ ಪುಷ್ಪ ಕಮಲ್ ದೊಹಲ್ ಅಲಿಯಾಸ್ ಪ್ರಚಂಡ ಬಂಡಾಯದ ಸಾರಿರುವುದು.

ಹೌದು ಕೆಪಿ ಒಲಿ ಅವರ ಏಕಪಕ್ಷೀಯ ನಿರ್ಧಾರಗಳಿಂದಾಗಿ ದೇಶ ಸಂಕಷ್ಟಕ್ಕೆ ಸಿಲುಕಿದೆ ಎಂದು ಪ್ರಚಂಡ ಆರೋಪಿಸಿದ್ದಾರೆ. ಹೀಗಾಗಿ ಯಾವುದೇ ಕ್ಷಣದಲ್ಲೂ ಸರ್ಕಾರ ಪತನವಾಗುವ ಸಂಭವ ಹೆಚ್ಚು. 

ನೇಪಾಳದ ರಾಜಕೀಯ ಬೆಳವಣಿಗೆಗಳಿಗೆ ಇದೀಗ ಕೆಪಿ ಒಲಿ ಭಾರತದತ್ತ ಬೊಟ್ಟು ಮಾಡಿದ್ದು ತಮ್ಮ ಸರ್ಕಾರದ ವಿರುದ್ಧ ಎದ್ದಿರುವ ಬಂಡಾಯಕ್ಕೆ ಭಾರತ ನೆರವು ನೀಡುತ್ತಿದೆ ಎಂದು ಆರೋಪಿಸಿದ್ದಾರೆ. 

ಗಡಿ ನಕ್ಷೆಯನ್ನು ನವೀಕರಣಗೊಳಿಸಿರುವುದು ಭಾರತಕ್ಕೆ ನುಂಗಲಾರದ ತುತ್ತಾಗಿದೆ. ಹೀಗಾಗಿ ತಮ್ಮ ಪದಚ್ಯುತಿಗೆ ಭಾರತ ಷಡ್ಯಂತ್ರ ಹೂಡಿದೆ ಎಂದು ಕಿಡಿಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com