ಕೊರೋನಾ ವೈರಸ್ ಹೆಡೆಮುರಿ ಕಟ್ಟಲು ಶ್ರೀಲಂಕಾ ಪಣ: ದೇಶಾದ್ಯಂತ ಕರ್ಫ್ಯೂ ಹೇರಿಕೆ

ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಹೆಡೆಮುರಿ ಕಟ್ಟಲು ಪಣತೊಟ್ಟಿ ನಿಂತಿರುವ ಶ್ರೀಲಂಕಾ ಸರ್ಕಾರ ಶುಕ್ರವಾರದಿಂದಲೇ ದೇಶಾದ್ಯಂತ ಕರ್ಫ್ಯೂ ಹೇರಿಕೆ ಮಾಡಿದೆ.
ಶ್ರೀಲಂಕಾದಲ್ಲಿ ಸ್ವಚ್ಛತಾ ಕಾರ್ಯ
ಶ್ರೀಲಂಕಾದಲ್ಲಿ ಸ್ವಚ್ಛತಾ ಕಾರ್ಯ

ಕೊಲಂಬೋ: ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಹೆಡೆಮುರಿ ಕಟ್ಟಲು ಪಣತೊಟ್ಟಿ ನಿಂತಿರುವ ಶ್ರೀಲಂಕಾ ಸರ್ಕಾರ ಶುಕ್ರವಾರದಿಂದಲೇ ದೇಶಾದ್ಯಂತ ಕರ್ಫ್ಯೂ ಹೇರಿಕೆ ಮಾಡಿದೆ.

ಶ್ರೀಲಂಕಾದಲ್ಲಿ ಶುಕ್ರವಾರ ಒಂದೇ ದಿನ ಲಂಕಾದಲ್ಲಿ ಆರು ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈ ವರೆಗೂ 65 ಮಂದಿಯಲ್ಲಿ ಕೋವಿದ್ 19 ಅಥವಾ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದೆ. ಅಂತೆಯೇ ಶಂಕಿತ ಸೋಂಕಿತರ ಸಂಖ್ಯೆ 218ಕ್ಕೆ ಏರಿಕೆಯಾಗಿದೆ. ಇದಲ್ಲದೇ ಲಂಕಾದಲ್ಲಿ ಈವರೆಗೂ 27 ವಿದೇಶಿಗರು ಸೇರಿದಂತೆ ಒಟ್ಟು 2400 ಮಂದಿಯನ್ನು ವಿವಿಧ ಆಸ್ಪತ್ರೆ ಮತ್ತು ಪ್ರದೇಶಗಳಲ್ಲಿ ನಿರ್ಬಂಧಕ್ಕೊಳಪಡಿಸಲಾಗಿದೆ. 

ಇದೇ ಕಾರಣಕ್ಕೆ ಶ್ರೀಲಂಕಾ ಸರ್ಕಾರ ತನ್ನ ದೇಶದಲ್ಲಿ ಕಠಿಣ ನಿಯಮ ಜಾರಿಗೆ ತಂದಿದೆ. ಇಂದಿನಿಂದ ಅಂದರೆ ಶುಕ್ರವಾರದಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೂ ಶ್ರೀಲಂಕಾ ಸರ್ಕಾರ ಕರ್ಫ್ಯೂ ಹೇರಿಕೆ ಮಾಡಿದ್ದು, ಯಾವುದೇ ಕಾರಣಕ್ಕೂ ಸಾರ್ವಜನಿಕರು ಓಡಾಡದಂತೆ ಮನವಿ ಮಾಡಿದೆ. ಅಲ್ಲದೆ ಲಂಕಾದಲ್ಲಿ ತುರ್ತು ಸೇವೆಗಳನ್ನು ಹೊರತು ಪಡಿಸಿ, ಉಳಿದೆಲ್ಲಾ ಸೇವೆಗಳನ್ನು ಬಂದ್ ಮಾಡಲು ಸರ್ಕಾರ ನಿರ್ಧರಿಸಿದೆ. 

ಅಂತೆಯೇ ಈಗಾಗಲೇ ಲಂಕಾ ಸರ್ಕಾರ ಎಲ್ಲ ರೀತಿಯ ವಿಮಾನಯಾನ ಸೇವೆಗಳನ್ನು ರದ್ದು ಮಾಡಿದ್ದು, ವಿಮಾನಯಾನ ಸೇವೆ ರದ್ಧತಿ ಮುಂದುವರೆಸಲಾಗಿದೆ. ಕೊರೋನಾ ವೈರಸ್ ಭೀತಿ ಭಾರತದಂತೆಯೇ ಶ್ರೀಲಂಕಾ ಷೇರುಮಾರುಕಟ್ಟೆ ಮೇಲೂ ಗಂಭೀರ ಪರಿಣಾಮ ಬೀರಿದ್ದು, ಕೊಲಂಬೋ ಷೇರುಮಾರುಕಟ್ಟೆ ಬರೊಬ್ಬರಿ ಶೇ.5.33ರಷ್ಟು ಕುಸಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com