ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 720 ದಾಟಿದರು ದೇಶವನ್ನು ಬಂದ್ ಮಾಡಲ್ಲ ಎಂದ ಪಾಕ್ ಪ್ರಧಾನಿ!

ಜಗತ್ತಿನಾದ್ಯಂತ ಕೊರೋನಾ ವೈರಸ್ ರೌದ್ರತಾಂಡವವಾಡುತ್ತಿದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರಿಕೆಯಾಗುತ್ತಲೆ ಇದೆ. 200 ಗಡಿ ದಾಟುತ್ತಲೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನೇ ಲಾಕ್ ಡೌನ್ ಮಾಡುವ ನಿರ್ಧಾರ ಕೈಗೊಂಡಿದ್ದರು.
ಇಮ್ರಾನ್ ಖಾನ್
ಇಮ್ರಾನ್ ಖಾನ್

ಇಸ್ಲಾಮಾಬಾದ್: ಜಗತ್ತಿನಾದ್ಯಂತ ಕೊರೋನಾ ವೈರಸ್ ರೌದ್ರತಾಂಡವವಾಡುತ್ತಿದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರಿಕೆಯಾಗುತ್ತಲೆ ಇದೆ. 200 ಗಡಿ ದಾಟುತ್ತಲೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನೇ ಲಾಕ್ ಡೌನ್ ಮಾಡುವ ನಿರ್ಧಾರ ಕೈಗೊಂಡಿದ್ದರು. ಆದರೆ ಪಾಕ್ ನಲ್ಲಿ 720ಕ್ಕೂ ಹೆಚ್ಚು ಸೋಂಕಿತರ ಪತ್ತೆಯಾಗಿದ್ದರು. ಪಾಕ್ ಪ್ರಧಾನಿ ಮಾತ್ರ ತಾವು ಲಾಕ್ ಡೌನ್ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಲೆ ಇದೆ. ಇವತ್ತು ಒಂದೇ ದಿನ 219 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದೇ ಅಲ್ಲದೆ ದೇಶದಲ್ಲಿ 3 ಸೋಂಕಿನಿಂದ ಸಾವನ್ನಪ್ಪಿದ್ದಾರೆ. 

ಲಾಕ್ ಡೌನ್ ಮಾಡುವುದೆಂದರೆ ಕರ್ಫ್ಯೂ ಮಾಡಿದಂತೆ. ಸುಖಾಸುಮ್ಮನೆ ದೇಶದ ಜನರಲ್ಲಿ  ಭೀತಿಯನ್ನು ಹುಟ್ಟಿಸುವುದಿಲ್ಲ. ಇದರಿಂದ ಬಡವರನ್ನು ಇನ್ನಷ್ಟು ಭಯಭೀತರನ್ನಾಗಿ ಮಾಡಿದಂತೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. 

ಮಂಗಳವಾರ ಆರ್ಥಿಕ ಪ್ಯಾಕೇಜ್ ಅನ್ನು ಘೋಷಿಸಲಾಗುವುದು. ಅದಾಗಲೇ ಆರ್ಥಿಕ ಪ್ಯಾಕೇಜ್ ಗಳನ್ನು ಘೋಷಿಸಿರುವ ದೇಶಗಳ ಜೊತೆ ನಾವು ಕಾಂಪಿಟ್ ಮಾಡಲು ಸಾಧ್ಯವಿಲ್ಲ. ಕೊರೋನಾ ವೈರಸ್ ಹೋರಾಡಲು ಕನಿಷ್ಠ ಹಾಗೂ ಕಾರ್ಮಿಕ ವರ್ಗದ ಪ್ಯಾಕೇಜ್ ಘೋಷಿಸುತ್ತೇವೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com