ಚೀನಾ: ಕೊರೋನಾ ಪೀಡಿತರು ಗುಣವಾಗುತ್ತಿದ್ದಾರೆ ಎಂದುಕೊಳ್ಳುತ್ತಿರುವಾಗಲೇ ಬಯಲಾಯ್ತು ಹೊಸ ಅಘಾತಕಾರಿ ಅಂಶ!  

ಕೊರೋನಾ ವೈರಾಣು ಸೋಂಕಿತರು ಗುಣಮುಖರಾಗುತ್ತಿರುವ ಪ್ರಕರಣಗಳು ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭರವಸೆ ಮೂಡಿಸುತ್ತಿವೆ. ಆದರೆ ಚೀನಾದಲ್ಲಿ ಕೊರೋನಾಗೆ ಸಂಬಂಧಪಟ್ಟಂತೆ ಮತ್ತೊಂದು ಅಘಾತಕಾರಿ ಸುದ್ದಿ ಬಹಿರಂಗವಾಗಿದೆ. 
ಕೊರೋನಾ
ಕೊರೋನಾ

ಬೀಜಿಂಗ್: ಕೊರೋನಾ ವೈರಾಣು ಸೋಂಕಿತರು ಗುಣಮುಖರಾಗುತ್ತಿರುವ ಪ್ರಕರಣಗಳು ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭರವಸೆ ಮೂಡಿಸುತ್ತಿವೆ. ಆದರೆ ಚೀನಾದಲ್ಲಿ ಕೊರೋನಾಗೆ ಸಂಬಂಧಪಟ್ಟಂತೆ ಮತ್ತೊಂದು ಅಘಾತಕಾರಿ ಸುದ್ದಿ ಬಹಿರಂಗವಾಗಿದೆ. 

ಕೊರೋನಾದಿಂದ ಗುಣಮುಖರಾದವರ ಮಲ ಹಾಗೂ ಉಗುಳಿನಲ್ಲಿ ಜೀವಂತ ಕೊರೋನಾ ವೈರಾಣುಗಳನ್ನು ಚೀನಾ ವೈದ್ಯರು ಪತ್ತೆ ಮಾಡಿದ್ದಾರೆ. 

ಚೀನಾದ ಜರ್ನಲ್ ಒಂದರಲ್ಲಿ ಈ ಕುರಿತು ವರದಿ ಪ್ರಕಟವಾಗಿದ್ದು, ಕೊರೋನಾದಿಂದ ಗುಣಮುಖರಾಗುತ್ತಿರುವ ರೋಗಿಗಳ ಗಂಟಲು ದ್ರವ ಪರೀಕ್ಷೆಯಲ್ಲಿ ನೆಗೆಟೀವ್ ಬಂದರೂ ಸಹ ಮಲ, ಉಗುಳಿನಲ್ಲಿ ಕೊರೋನಾ ವೈರಾಣು ಇರುವುದು ಪತ್ತೆಯಾಗಿದೆ.

ಈ ವರೆಗೂ ಕೊರೋನಾ ಪೀಡಿತರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲು ಗಂಟಲು ದ್ರವವನ್ನು ಪರೀಕ್ಷಿಸಲಾಗುತ್ತಿತ್ತು. ಈ ಪರೀಕ್ಷೆಯಲ್ಲಿ ನೆಗೆಟೀವ್ ಬಂದವರನ್ನು ಮಾತ್ರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತಿದೆ. ಆದರೆ ಬೀಜಿಂಗ್ ನ ಡಿಟಾನ್ ಆಸ್ಪತ್ರೆ, ಕ್ಯಾಪಿಟಲ್ ವೈದ್ಯಕೀತ ವಿಶ್ವವಿದ್ಯಾಲಯದಲ್ಲಿ ಕಂಡುಬಂದಿರುವ ಹೊಸ ಅಂಶಗಳಾ ಪ್ರಕಾರ ಗಂಟಲು ದ್ರವ ಪರೀಕ್ಷೆಯಲ್ಲಿ ನೆಗೆಟೀವ್ ಬಂದರೂ ಆ ವ್ಯಕ್ತಿಯ ಉಗು, ಮಲಗಳಲ್ಲಿ  ಜೀವಂತ ಕೊರೋನಾ ವೈರಸ್ ಪತ್ತೆಯಾಗಿರುವುದು ಈಗ ಚೀನಿಯರ ಆತಂಕಕ್ಕೆ ಕಾರಣವಾಗಿದ್ದು ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯಬೇಕೆನ್ನುತ್ತಿದ್ದಾರೆ ಸಂಶೋಧಕರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com