ಕೊರೋನಾ ರೋಗಿಗಳು ಮೂರನೇ ದಿನಕ್ಕೇ ವಾಸನೆ ಗುರುತಿಸುವ ಸಮಸ್ಯೆ ಎದುರಿಸುತ್ತಾರೆ: ಅಧ್ಯಯನ ವರದಿ

ಕೊರೋನಾವೈರಸ್ ಸೋಂಕು ತಗುಲಿದ ಮೂರನೇ ದಿನದ ಹೊತ್ತಿಗೆ ರೋಗಿಯು ವಾಸನೆ ಗ್ರಹಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ ಎಂದು ಸಂಶೋಧನೆಯೊಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊರೋನಾವೈರಸ್ ಸೋಂಕು ತಗುಲಿದ ಮೂರನೇ ದಿನದ ಹೊತ್ತಿಗೆ ರೋಗಿಯು ವಾಸನೆ ಗ್ರಹಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ ಎಂದು ಸಂಶೋಧನೆಯೊಂದು ಹೇಳಿದೆ. 100 ಕ್ಕೂ ಹೆಚ್ಚು ಕೋವಿಡ್ 19 ರೋಗಿಗಳ ಅಧ್ಯಯನದ ಪ್ರಕಾರ ಕೊರೋನಾ ತಗುಲಿದ ಮೂರು ದಿನಗಳಲ್ಲಿ ರೋಗಿಯ ವಾಸನಾ ಗ್ರಹಿಕೆ ಶಕ್ತಿ ಕುಗ್ಗುತ್ತದೆ. ಈ ಸಂಶೋಧನೆ ಆರೋಗ್ಯ ತಜ್ಞರಿಗೆ ಸೋಂಕಿತರನ್ನು ಗುರುತಿಸಲು ಸುಲಭವಾಗಿ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.

Otolaryngology-Head and Neck Surgery ಜರ್ನಲ್ ನಲ್ಲಿ  ಪ್ರಕಟವಾದ ಟೆಲಿಫೋನಿಕ್ ಅಧ್ಯಯನ ವರದಿ ಇದಾಗಿದ್ದು  ಆರು ವಾರಗಳ ಅವಧಿಯಲ್ಲಿ ಕೋವಿಡ್ -19 ರೋಗನಿರ್ಣಯ ಮಾಡಿದ 103 ರೋಗಿಗಳ ಗುಣಲಕ್ಷಣಗಳು ಮತ್ತು ರೋಗಲಕ್ಷಣದ ಆಧಾರದಲ್ಲಿ ಇದನ್ನು ಗುರುತಿಸಲಾಗಿದೆ  ಸ್ವಿಟ್ಜರ್‌ಲ್ಯಾಂಡ್‌ನ ಆರಾವ್‌ನ ರೋಗಿಗಳು ತಮ್ಮಲ್ಲಿ ಕೋವಿಡ್ -19 ರೋಗಲಕ್ಷಣಗಳನ್ನು ಹೊಂದಿರುವ ದಿನಗಳು ಮತ್ತು ಅವರ ವಾಸನೆ ಗ್ರಹಿಕೆ ಇಲ್ಲದಿರುವುದರ ತೀವ್ರತೆಯ ಬಗ್ಗೆ ಮಾಹಿತಿ ನೀಡಿದರು ಎಂದು ಅಧ್ಯಯನ ತಂಡದ ಸದಸ್ಯ, ಸಂಶೋಧಕ ಯುಎಸ್‌ನ ಸಿನ್ಸಿನಾಟಿ ವಿಶ್ವವಿದ್ಯಾಲಯದ ಅಹ್ಮದ್ ಸೆದಘಾಟ್ ಹೇಳಿದ್ದಾರೆ. 103 ರೋಗಿಗಳಲ್ಲಿ, ಕನಿಷ್ಠ 61 ಪ್ರತಿಶತದಷ್ಟು ಜನರು ವಾಸನೆ ಗ್ರಹಿಕೆಯನ್ನು ಕಳೆದುಕೊಂಡಿದ್ದಾಗಿ ಅಥವಾ ಕಡಿಮೆಯಾಗಿದ್ದಾಗಿ ವರದಿ ಹೇಳಿದೆ.`ವಾಸನೆಯ ಗ್ರಹಿಕೆಯಲ್ಲಿನ ತೊಂದರೆ ಅಥವಾ ನಷ್ಟದ ಸರಾಸರಿ ಅವಧಿ ರೋಗ ತಗುಲಿದ ನಂತರದ 3-4 ದಿನಗಳಾಗಿರಲಿದೆ.

"ವಾಸನೆಯ ಗ್ರಹಿಕೆ ಇಲ್ಲದಿರುವಿಕೆಯ ತೀವ್ರತೆಯು ಕೋವಿಡ್ ನ ಇತರೆ ರೋಗಲಕ್ಷಣಗಳು ಎಷ್ಟು ಕೆಟ್ಟದಾಗಿರುತ್ತದೆ ಎಂಬುದರ ಮೇಲೆ ಅವಲಂಬಿಸಿದೆ. ವಾಸನೆಯ ನಷ್ಟ ಎಂದೂ ಕರೆಯಲ್ಪಡುವ ಅನೋಸ್ಮಿಯಾ ಕೆಟ್ಟದಾಗಿದ್ದರೆ, ರೋಗಿಗಳು ಉಸಿರಾಟದ ತೊಂದರೆ ಮತ್ತು ಹೆಚ್ಚು ತೀವ್ರವಾದ ಜ್ವರ ಮತ್ತು ಕೆಮ್ಮಿಗೆ ಒಳಗಾಗುತ್ತಾರೆ. ಯಾರಾದರೂಕೋವಿಡ್ -19 ರೋಗಿ ವಾಸನೆ ಗ್ರಹಿಕೆಯಲ್ಲಿ ಕೊರತೆಯಾಗಿದೆ ಎಂದರೆ ಅವರು ರೋಗ ಖಚಿತವಾಗಿರುವ ಮೊದಲ ವಾರದಲ್ಲಿದ್ದಾರೆ ಎಂದು ಅರಿಯಬೇಕು ಹಾಗೆಯೇ ನ್ನೂ ಒಂದು ವಾರ ಅಥವಾ ಎರಡು ವಾರಗಳ ನಿರೀಕ್ಷೆಯಲ್ಲಿ ಅವರನ್ನು ನಾವು ತೀವ್ರ ನಿಗಾದಲ್ಲಿರಿಸಬೇಕು.

"ನೀವು ಕೊರೋನಾ ಗಂಭೀರ ರೋಗಲಕ್ಷಣಗಳನ್ನು ಅನುಭವಿಸಲು ಪ್ರಾರಂಭಿಸಿದಾಗ ಅದು ಉಸಿರಾಟದ ತೊಂದರೆಯಾಗಿ ಮಾರ್ಪಡಲಿದೆ. ಆಗ ನೀವು ಗಾಬರಿಗೆ ಒಳಗಾಗುತ್ತೀರಿ. ಧ್ಯಯನದಲ್ಲಿ ಕಿರಿಯ ರೋಗಿಗಳು ಮತ್ತು ಮಹಿಳೆಯರನ್ನೂ ಒಳಗೊಂಡಿದ್ದು ಅವರಲ್ಲಿ ಸಹ ವಾಸನೆ ಗ್ರಹಿಕೆಯ ಕೊರತೆ ಅಥವಾ ಇಲ್ಲದಿರುವಿಕೆ ಕಂಡುಬಂದಿದೆ ಎಂದು ಅಧ್ಯಯನವು ತಿಳಿಸಿದೆ.. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com