ಭಾರತ-ಚೀನಾ ಗಡಿ ತಂಟೆ: ಉದ್ವಿಗ್ನತೆಯನ್ನು ಹೆಚ್ಚಿಸುವ ಕ್ರಮ ಕೈಬಿಡಿ - ವಿಶ್ವಸಂಸ್ಥೆ ಒತ್ತಾಯ

ಭಾರತ ಹಾಗೂ ಚೀನಾ ನಡುವೆ ಗಡಿ ವಿವಾದ ಮತ್ತೆ ಕೆದಕಿರುವ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು "ಮಧ್ಯಸ್ಥಿಕೆ ವಹಿಸಲು" ಸಿದ್ದವೆಂದು ಟ್ವೀಟ್ ಮಾಡಿದ್ದರು. ಇದಕ್ಕೀಗ ವಿಶ್ವಸಂಸ್ಥೆ ಖಾರವಾಗಿ ಪ್ರತಿಕ್ರಯಿಸಿದ್ದು ಈ ಪರಿಸ್ಥಿತಿಯಲ್ಲಿ ಮಧ್ಯಸ್ಥಿಕೆ ವಹಿಸುವುದು ಮುಖ್ಯವಾಗುವುದಿಲ್ಲ. ಆದರೆ ಎರಡೂ ರಾಷ್ಟ್ರಗಳು ಉದ್ವಿಗ್ನತೆಯನ್ನು ಹೆಚ್ಚಿಸುವ ಯಾವುದೇ
ಅಂಟೊನಿಯೊ ಗುಟೆರಸ್
ಅಂಟೊನಿಯೊ ಗುಟೆರಸ್

ವಿಶ್ವಸಂಸ್ಥೆ: ಭಾರತ ಹಾಗೂ ಚೀನಾ ನಡುವೆ ಗಡಿ ವಿವಾದ ಮತ್ತೆ ಕೆದಕಿರುವ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು "ಮಧ್ಯಸ್ಥಿಕೆ ವಹಿಸಲು" ಸಿದ್ದವೆಂದು ಟ್ವೀಟ್ ಮಾಡಿದ್ದರು. ಇದಕ್ಕೀಗ ವಿಶ್ವಸಂಸ್ಥೆ ಖಾರವಾಗಿ ಪ್ರತಿಕ್ರಯಿಸಿದ್ದು ಈ ಪರಿಸ್ಥಿತಿಯಲ್ಲಿ ಮಧ್ಯಸ್ಥಿಕೆ ವಹಿಸುವುದು ಮುಖ್ಯವಾಗುವುದಿಲ್ಲ. ಆದರೆ ಎರಡೂ ರಾಷ್ಟ್ರಗಳು ಉದ್ವಿಗ್ನತೆಯನ್ನು ಹೆಚ್ಚಿಸುವ ಯಾವುದೇ ಕ್ರಮವನ್ನು ತೆಗೆದುಕೊಳ್ಲದಂತೆ ಮುಂಜಾಗ್ರತೆ ವಹಿಸಬೇಕು ಎಂದಿದೆ.

ಅಚ್ಚರಿಯ ಬೆಳವಣಿಗೆಯಲ್ಲಿ  ಯುಎಸ್ ಅಧ್ಯಕ್ಷ ಟ್ರಂಪ್ ಬುಧವಾರ ಭಾರತ ಮತ್ತು ಚೀನಾ ನಡುವಿನ ಗಡಿ ಬಿಕ್ಕಟ್ಟಿನ ಬಗೆಗೆ ಮಾತನಾಡಿ ವಿವಾದ ಪರಿಹಾರಕ್ಕೆ "ಮಧ್ಯಸ್ಥಿಕೆ ವಹಿಸಲು" ಸಿದ್ದವೆಂದಿದ್ದರು. ತಾವು ಈ ಗಡಿ  ಉದ್ವಿಗ್ನತೆಯನ್ನು ಕಡಿಮೆ ಮಾಡಲು "ಸಿದ್ಧ, ಹಾಗೂ ಸಮರ್ಥ" ಆಗಿದ್ದೇನೆ ಎಂದು ಅವರು ಟ್ವಿಟ್ ಮಾಡಿದ್ದಾರೆ.

ಆದರೆ ವಿಶ್ವಸಂಸ್ಥೆ ವಕ್ತಾರರು ಹೇಳಿದಂತೆ "ಯಾವುದಕ್ಕೆ  ಮಧ್ಯಸ್ಥಿಕೆ ವಹಿಸಬೇಕೆಂದು ಅವರು ನಿರ್ಧರಿಸುತ್ತಾರೆ, ಆದರೆ ನಾವು  ಅದರ ಬಗ್ಗೆ ಚಿಂತಿಸಬೇಕಿಲ್ಲ. ನಾವು ಸ್ಪಷ್ಟವಾಗಿ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ ಮತ್ತು ಯಾವ ರೀತಿಯ ಆತಂಕ ಉಂಟುಮಾಡುವ ಕ್ರ್ಮ ತಪ್ಪಿಸಲು ಎರಡೂ ರಾಷ್ಟ್ರಗಳಿಗೆ ನಾವು ಒತ್ತಾಯಿಸುತ್ತೇವೆ." ಎಂದಿದ್ದಾರೆ. ಇಂತಹಾ ಪರಿಸ್ಥಿತಿಯೇ ಮುಂದುವರಿದರೆ ಭವಿಷ್ಯದಲ್ಲಿ ಇನ್ನಷ್ಟು ಉದ್ವಿಗ್ನತೆ ಹೆಚ್ಚಲಿದೆ. ಎಂದು ಪ್ರಧಾನ ಕಾರ್ಯದರ್ಶಿ ವಕ್ತಾರ ಸ್ಟೀಫನ್ ಡುಜಾರಿಕ್ ಬುಧವಾರ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸುಮಾರು 3,500 ಕಿ.ಮೀ ಉದ್ದದಲೈನ್ ಆಫ್ ಆಕ್ಚುಯಲ್ ಕಂಟ್ರೋಲ್ (ಎಲ್ಎಸಿ) ಭಾರತ ಹಾಗೂ ಚೀನಾ ನಡುವಿನ  ವಾಸ್ತವಿಕ ಗಡಿಯಾಗಿದೆ. ಲಡಾಖ್ ಮತ್ತು ಉತ್ತರ ಸಿಕ್ಕಿಂನ ಎಲ್‌ಎಸಿಯ ಉದ್ದಕ್ಕೂ ಹಲವಾರು ಪ್ರದೇಶಗಳು ಇತ್ತೀಚೆಗೆ ಭಾರತೀಯ ಮತ್ತು ಚೀನೀ ಸೇನೆಗಳ ಪ್ರಮುಖ ಮಿಲಿಟರಿ ಕಾರ್ಯಾಚರಣೆಗೆ ಸಾಕ್ಷಿಯಾಗಿವೆ. ಎರಡು ವಾರಗಳಿಂದ ಗಡಿಯಲ್ಲಿ ಉದ್ವಿಗ್ನ ವಾತಾವರಣವಿದ್ದು ಎರಡೂ ಬಾಗಗಳಲ್ಲಿ ಗಡಿಯಲ್ಲಿನ ಭದ್ರತೆ ಬಲಪಡಿಸುವಿಕೆ ಕೆಲಸ ನಡೆಯುತ್ತಿದೆ. ಲಡಾಖ್ ಮತ್ತು ಸಿಕ್ಕಿಂನಲ್ಲಿನ ಎಲ್‌ಎಸಿ ಉದ್ದಕ್ಕೂ ಚೀನಾದ ಮಿಲಿಟರಿ ಸೈನ್ಯದವರು ಸಾಮಾನ್ಯ ಗಸ್ತು ತಿರುಗಲು ಪ್ರಾರಂಭಿಸಿದ್ದು ಇದಕ್ಕೆ ಭಾರತ ಆಕ್ಷೇಪಿಸಿದೆ.  ಚೀನಾದ ಕಡೆಯಿಂದ ಭಾರತೀಯ ಪಡೆಗಳನ್ನು ಅತಿಕ್ರಮಣ ಮಾಡುವುದರ ಮೂಲಕ ಎರಡು ಸೇನೆಗಳ ನಡುವೆ ಸಂಘರ್ಷ ಉಲ್ಬಣಗೊಳ್ಳಲು ಇದು ಕಾರಣವಾಗಲಿದೆಎಂಬ ಬೀಜಿಂಗ್ ವಾದವನ್ನು ಭಾರತ ಬಲವಾಗಿ ಅಲ್ಲಗಳೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com