ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ಬರುವ ಏಪ್ರಿಲ್ ನಿಂದ ಅಮೆರಿಕನ್ನರಿಗೆ ಕೋವಿಡ್-19 ಲಸಿಕೆ ಲಭ್ಯ: ಡೊನಾಲ್ಡ್ ಟ್ರಂಪ್

ಮೊನ್ನೆ ಅಧ್ಯಕ್ಷೀಯ ಚುನಾವಣೆ ನಡೆದ ನಂತರ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರ್ವಜನಿಕ ಭಾಷಣ ಮಾಡಿದ್ದಾರೆ. ಪಿಫೈಝರ್ ಕೋವಿಡ್-19 ಲಸಿಕೆ ಬಗ್ಗೆ ಮಾಹಿತಿ ನೀಡಿದ ಅವರು, ಮುಂದಿನ ವರ್ಷ ಏಪ್ರಿಲ್ ಹೊತ್ತಿಗೆ ಇಡೀ ದೇಶದ ಜನರಿಗೆ ಲಸಿಕೆ ಲಭ್ಯವಾಗಲಿದೆ ಎಂದು ಹೇಳಿದರು.

ವಾಷಿಂಗ್ಟನ್: ಮೊನ್ನೆ ಅಧ್ಯಕ್ಷೀಯ ಚುನಾವಣೆ ನಡೆದ ನಂತರ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರ್ವಜನಿಕ ಭಾಷಣ ಮಾಡಿದ್ದಾರೆ. ಪಿಫೈಝರ್ ಕೋವಿಡ್-19 ಲಸಿಕೆ ಬಗ್ಗೆ ಮಾಹಿತಿ ನೀಡಿದ ಅವರು, ಮುಂದಿನ ವರ್ಷ ಏಪ್ರಿಲ್ ಹೊತ್ತಿಗೆ ಇಡೀ ದೇಶದ ಜನರಿಗೆ ಲಸಿಕೆ ಲಭ್ಯವಾಗಲಿದೆ ಎಂದು ಹೇಳಿದರು.

ಆರಂಭದಲ್ಲಿ ಕೋವಿಡ್-19 ಮುಂಚೂಣಿ ಕಾರ್ಯಕರ್ತರಿಗೆ, ಹಿರಿಯರಿಗೆ ಮತ್ತು ಅತಿ ಅಪಾಯದಲ್ಲಿರುವವರಿಗೆ ನೀಡಲಾಗುತ್ತದೆ. ಅದು ಒಂದು ವಾರಗಳಲ್ಲಿ ಲಸಿಕೆ ಆರಂಭ ಹಂತದಲ್ಲಿ ನೀಡುವ ಕೆಲಸ ಮುಗಿಯಲಿದೆ ಎಂದು ಶ್ವೇತಭವನದ ರೋಸ್ ಗಾರ್ಡನ್ ನಿಂದ ಮಾತನಾಡಿದರು.

ಪಿಫೈಝರ್ ನ್ನು ಜನತೆಗೆ ಉಚಿತವಾಗಿ ನೀಡಲು ನಾವು ಹೂಡಿಕೆ ಮಾಡುತ್ತಿದ್ದೇವೆ.ನಿನ್ನೆ ಡೆಮಾಕ್ರಟ್ ಪಕ್ಷದಿಂದ ಅಧ್ಯಕ್ಷರಾಗಿ ಚುನಾಯಿತರಾದ ಜೊ ಬೈಡನ್ ಅರಿಜೋನಾ ಮತ್ತು ಜಾರ್ಜಿಯಾ ರಾಜ್ಯಗಳಲ್ಲಿ ಸಹ ಗೆದ್ದಿದ್ದು ಈ ಮೂಲಕ ಡೆಮಾಕ್ರಟ್ ಪಕ್ಷಕ್ಕೆ ಒಟ್ಟು 306 ಎಲೆಕ್ಟೊರಲ್ ಮತಗಳು ರಿಪಬ್ಲಿಕನ್ ಪಕ್ಷಕ್ಕೆ 323 ಮತಗಳು ಬಂದಿವೆ. ಡೊನಾಲ್ಡ್ ಟ್ರಂಪ್ ಅವರು ನಾರ್ತ್ ಕ್ಯಾರೊಲಿನಾದಲ್ಲಿ ಗೆದ್ದಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com