ಬೆಲಾರಸ್‌ನಾದ್ಯಂತ ಪ್ರತಿಭಟನೆ, ಸಾವಿರಕ್ಕೂ ಹೆಚ್ಚು ಜನರ ಬಂಧನ

 ಬೆಲಾರಸ್ ನಾದ್ಯಂತ  ಭಾನುವಾರ ನಡೆದ ಅನಧಿಕೃತ ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ ಸಾವಿರಕ್ಕೂ ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು  ವಿಯಾಸ್ನಾ ಮಾನವ ಹಕ್ಕು ಕೇಂದ್ರ ತಿಳಿಸಿದೆ.
ಪ್ರತಿಭಟನಾಕಾರರನ್ನು ಬಂಧಿಸಿರುವ ಪೊಲೀಸರು
ಪ್ರತಿಭಟನಾಕಾರರನ್ನು ಬಂಧಿಸಿರುವ ಪೊಲೀಸರು

ಮಿನ್ಸ್ಕ್ :  ಬೆಲಾರಸ್ ನಾದ್ಯಂತ  ಭಾನುವಾರ ನಡೆದ ಅನಧಿಕೃತ ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ ಸಾವಿರಕ್ಕೂ ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು  ವಿಯಾಸ್ನಾ ಮಾನವ ಹಕ್ಕು ಕೇಂದ್ರ ತಿಳಿಸಿದೆ.

ಸರ್ಕಾರಿ ವಿರೋಧಿ ಹೋರಾಟಗಾರನೊಬ್ಬ ಮೃತಪಟ್ಟಿರುವುದಕ್ಕೆ ತೀವ್ರ ಆಕ್ರೋಶ ಭುಗಿಲೆದ್ದಿರುವ ಬೆನ್ನಲ್ಲೆ, ರಾಜಧಾನಿ  ಮಿನ್ಸ್ಕ್‌ನನಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಭದ್ರತಾ ಪಡೆಗಳ ಹಲ್ಲೆಯಿಂದ ಹೋರಾಟಗಾರ ಮೃತಪಟ್ಟಿರುವುದಾಗಿ ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಆದರೆ, ಇದನ್ನು ಸರ್ಕಾರ ನಿರಾಕರಿಸಿದೆ. 

ಮಿನ್ಸ್  ಹಾಗೂ ಇತರಡೆಗಳಲ್ಲಿ  ಪೊಲೀಸರು ಹಲವು  ಸರ್ಕಾರಿ ವಿರೋಧಿ ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಬಳಸಿದ್ದಾರೆ.

ಆಗಸ್ಟ್ ನಲ್ಲಿ ನಡೆದ ವಿವಾದಿತ ಚುನಾವಣೆಯಿಂದಾಗಿ ಬೆಲಾರಸ್ ನಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದೆ.  26 ವರ್ಷದಿಂದ ಆಳ್ವಿಕೆ ನಡೆಸುತ್ತಿರುವ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಬೆಂಬಲಿತ ಲುಕಾಶೆನ್ ಕೊ, ರಾಜೀನಾಮೆ ನೀಡಲು ನಿರಾಕರಿಸಿದ್ದು,  ಚುನಾವಣೆಯಲ್ಲಿ ತಾವೇ ಗೆಲುವು ಸಾಧಿಸಿರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. 

ಶೇ. 60ರಿಂದ 70 ರಷ್ಟು ಮತಗಳನ್ನು ಪಡೆದಿದ್ದರೂ ಚುನಾವಣೆಯ ನಂತರ ತಮ್ಮನ್ನು  ನೆರೆಯ ರಾಷ್ಟ್ರ ಲಿಥುಯಾನಿಕಾಕ್ಕೆ  ಗಡಿ ಪಾರು ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕಿ ಸ್ವೆಟ್ಲಾ ಟಿಖಾನೋವ್ಸ್ಕಯಾ ಹೇಳಿದ್ದು, ಚುನಾವಣೆ ಆದಾಗಿನಿಂದಲೂ ಪ್ರತಿ ಭಾನುವಾರ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಾ ಬಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com