ಇಂಡೋನೇಷ್ಯಾದಲ್ಲಿ ಐಎಸ್ ನಂಟಿನ ಉಗ್ರರಿಂದ ನಾಲ್ವರು ಕ್ರಿಶ್ಚಿಯನ್ನರ ಕೊಲೆ- ಪೊಲೀಸರು

ಇಂಡೋನೇಷ್ಯಾದ ದ್ವೀಪ ಪ್ರದೇಶದಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ನಾಲ್ವರನ್ನು ಐಎಸ್ ನಂಟಿನ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಒಬ್ಬನ ಶಿರಚ್ಚೇದ ಮಾಡಲಾಗಿದ್ದು, ಇನ್ನೊಬ್ಬನನ್ನು ಸುಟ್ಟು ಹಾಕಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸುಲಾವೆಸಿ: ಇಂಡೋನೇಷ್ಯಾದ ದ್ವೀಪ ಪ್ರದೇಶದಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ನಾಲ್ವರನ್ನು ಐಎಸ್ ನಂಟಿನ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಈ ಪೈಕಿ ಒಬ್ಬನ ಶಿರಚ್ಚೇದ ಮಾಡಲಾಗಿದ್ದು, ಇನ್ನೊಬ್ಬನನ್ನು ಸುಟ್ಟು ಹಾಕಲಾಗಿದೆ.

ಶುಕ್ರವಾರ ಬೆಳಗ್ಗೆ ಸೆಂಟ್ರಲ್ ಸುಲಾವೆಸಿ ಪ್ರಾಂತ್ಯದ ಲೆಂಬಂಟೊಂಗೋವಾ ಗ್ರಾಮದಲ್ಲಿ ಕತ್ತಿ ಮತ್ತು ಬಂದೂಕಿನಿಂದ ದಾಳಿ ನಡೆಸಿದ ಉಗ್ರರು, ಹಲವು ಜನರನ್ನು ಕೊಂದು, ಧಾರ್ಮಿಕ ಕೇಂದ್ರ ಸೇರಿದಂತೆ  ಕೆಲವು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಯಾರನ್ನೂ ಬಂಧಿಸಿಲ್ಲ ಮತ್ತು ದಾಳಿಯ ಉದ್ದೇಶವು ತಕ್ಷಣ ಸ್ಪಷ್ಟವಾಗಿಲ್ಲ.

ಆದರೆ, ಆಗ್ನೇಯ ಏಷ್ಯಾದ ದ್ವೀಪದಲ್ಲಿರುವ ಧಾರ್ಮಿಕ ಅಂದತ್ವದ ಗುಂಪುಗಳಲ್ಲಿ ಒಂದಾದ ಸುಲಾವೆಸಿ ಮೂಲದ ಪೂರ್ವ ಇಂಡೋನೇಷ್ಯಾ ಮುಜಾಹಿದ್ದೀನ್ (ಎಂಐಟಿ) ಐಎಸ್‌ಗೆ ನಿಷ್ಠೆಯನ್ನು ಪ್ರತಿಜ್ಞೆ ಮಾಡಿದ್ದಾಗಿ ಭದ್ರತಾ ಸಂಸ್ಥೆಗಳು ಹೇಳಿವೆ.

ಇಂಡೋನೇಷ್ಯಾ ವಿಶ್ವದ ಅತಿದೊಡ್ಡ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾಗಿದ್ದು, ಇಸ್ಲಾಮಿಸ್ಟ್ ಉಗ್ರಗ್ರಾಮಿತ್ವ ಮತ್ತು ಭಯೋತ್ಪಾದಕ ದಾಳಿಯಿಂದ ಹಲವು ವರ್ಷಗಳಿಂದ ನಲುಗುತ್ತಿರುವಂತೆ, ಮಧ್ಯ ಸುಲಾವೆಸಿಯಲ್ಲಿ ದಶಕಗಳಿಂದಲೂ ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರ ನಡುವೆ ಹಿಂಸಾಚಾರ ನಡೆಯುತ್ತಲೇ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com