ಕಮಲಾ ಹ್ಯಾರಿಸ್ ರನ್ನು 'ರಾಕ್ಷಸಿ' ಎಂದು ಕರೆದ ಡೊನಾಲ್ಡ್ ಟ್ರಂಪ್!

ಅಮೆರಿಕಾದ ಮೊದಲ ಕಪ್ಪು ಮಹಿಳಾ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಅಮೆರಿಕದಲ್ಲಿ ಇತಿಹಾಸ ನಿರ್ಮಿಸುತ್ತಿರುವ ಕಮಲಾ ಹ್ಯಾರಿಸ್ ಅವರನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 'ರಾಕ್ಷಸಿ' ಎಂದು ಕರೆದಿದ್ದಾರೆ. 

Published: 08th October 2020 10:47 PM  |   Last Updated: 08th October 2020 10:47 PM   |  A+A-


Trump-Kamala

ಟ್ರಂಪ್-ಕಮಲಾ ಹ್ಯಾರಿಸ್

Posted By : Vishwanath S
Source : AFP

ವಾಷಿಂಗ್ಟನ್: ಅಮೆರಿಕಾದ ಮೊದಲ ಕಪ್ಪು ಮಹಿಳಾ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಅಮೆರಿಕದಲ್ಲಿ ಇತಿಹಾಸ ನಿರ್ಮಿಸುತ್ತಿರುವ ಕಮಲಾ ಹ್ಯಾರಿಸ್ ಅವರನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 'ರಾಕ್ಷಸಿ' ಎಂದು ಕರೆದಿದ್ದಾರೆ. 

ನವೆಂಬರ್ 3ರಂದು ಅಮೆರಿಕಾದ ಅಧ್ಯಕ್ಷಿಯ ಚುನಾವಣೆಯ ನಡೆಯಲಿದ್ದು ಈ ಸಂಬಂಧ ನಡೆದ ಉಪಾಧ್ಯಕ್ಷರ ಚರ್ಚೆಯನ್ನುದ್ದೇಶಿಸಿ ಟ್ರಂಪ್ ಈ ಕೆಟ್ಟದ್ದನ್ನು ಬಳಸಿದ್ದಾರೆ. ಅವರು ಈ ಪದವನ್ನು ಎರಡು ಬಾರಿ ಬಳಸಿದ್ದಾರೆ.

ಕೊರೋನಾ ವೈರಸ್‌ನಿಂದ ಅನಾರೋಗ್ಯಕ್ಕೆ ಒಳಗಾದ ನಂತರ ತನ್ನ ಮೊದಲ ಸಂದರ್ಶನದಲ್ಲಿ ಸುಮಾರು ಒಂದು ಗಂಟೆ ಫಾಕ್ಸ್ ಬಿಸಿನೆಸ್ ನ್ಯೂಸ್‌ನೊಂದಿಗೆ ಮಾತನಾಡಿದ ಟ್ರಂಪ್, ಉಪಾಧ್ಯಕ್ಷೆ ಮೈಕ್ ಪೆನ್ಸ್ ಅವರು ತಮ್ಮ ಚರ್ಚೆಯಲ್ಲಿ ಹ್ಯಾರಿಸ್ ಅವರನ್ನು 'ಸೋಲಿಸಿದ್ದಾರೆ' ಎಂದು ಹೇಳಿದರು. ಇನ್ನು ಕಮಲಾ ಹ್ಯಾರಿಸ್ ಹೇಳುವುದೆಲ್ಲಾವೂ ಸುಳ್ಳು ಎಂದು ಟ್ರಂಪ್ ಹೇಳಿದ್ದಾರೆ.

ಶ್ವೇತಭವನದ ಟಿಕೆಟ್‌ ಪಡೆದಿರುವ ಭಾರತೀಯ ಮೂಲದ ಮೊದಲ ವ್ಯಕ್ತಿ ಕೂಡ ಆಗಿರುವ ಹ್ಯಾರಿಸ್, ಕೋವಿಡ್ 19 ಕುರಿತು "ನಮ್ಮ ದೇಶದ ಇತಿಹಾಸದಲ್ಲಿ ಯಾವುದೇ ಅಧ್ಯಕ್ಷರ ಆಡಳಿತದ ಅತ್ಯಂತ ದೊಡ್ಡ ವೈಫಲ್ಯ" ಅದು ಟ್ರಂಪ್‌ ಸರ್ಕಾರದ್ದು ಎಂದು ಹಾರಿಹಾಯ್ದಿದ್ದರು.

Stay up to date on all the latest ಅಂತಾರಾಷ್ಟ್ರೀಯ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp