ಅಕ್ಟೋಬರ್ 12ರಂದು ಫ್ಲೋರಿಡಾದಲ್ಲಿ ಮೊದಲ ಚುನಾವಣಾ ಪ್ರಚಾರ ಸಭೆಯಲ್ಲಿ ಟ್ರಂಪ್ ‍ಭಾಗಿ

ಕೊರೊನವೈರಸ್ ಸೋಂಕು ತಗುಲಿದ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ ಮುಂದಿನ ಸೋಮವಾರ ಫ್ಲೋರಿಡಾದಲ್ಲಿ ಮೊದಲ ಚುನಾವಣಾ ಪ್ರಚಾರ ಸಭೆಯನ್ನು ನಡೆಸಲಿದ್ದಾರೆ ಎಂದು ಅವರ ಚುನಾವಣಾ ಪ್ರಚಾರ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.
ಡೊನಾಲ್ಡ್ ಟ್ರಂಪ್‍
ಡೊನಾಲ್ಡ್ ಟ್ರಂಪ್‍

ವಾಷಿಂಗ್ಟನ್: ಕೊರೋನಾ ವೈರಸ್ ಸೋಂಕು ತಗುಲಿದ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ ಮುಂದಿನ ಸೋಮವಾರ ಫ್ಲೋರಿಡಾದಲ್ಲಿ ಮೊದಲ ಚುನಾವಣಾ ಪ್ರಚಾರ ಸಭೆಯನ್ನು ನಡೆಸಲಿದ್ದಾರೆ ಎಂದು ಅವರ ಚುನಾವಣಾ ಪ್ರಚಾರ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

ಟ್ರಂಪ್ ಅವರು ಅಕ್ಟೋಬರ್ 12 ರಂದು ಸೋಮವಾರ ಸ್ಥಳೀಯ ಕಾಲಮಾನ ರಾತ್ರಿ 7 ಗಂಟೆಗೆ ಫ್ಲೋರಿಡಾದ ಸ್ಯಾನ್‍ಫೋರ್ಡ್ ನಲ್ಲಿ ‘ಮೇಕ್‍ ಅಮೆರಿಕ-ಗ್ರೇಟ್ ಎಗೈನ್’ ಹೆಸರಿನ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ ಎಂದು ಶುಕ್ರವಾರ ಪ್ರಕಟಣೆ ತಿಳಿಸಿದೆ.

ಇದಕ್ಕೂ ಮುನ್ನ, ಕೊರೋನವೈರಸ್ ಸೋಂಕಿನ ನಂತರ ಟ್ರಂಪ್ ಶನಿವಾರ ತಮ್ಮ ಮೊದಲ ಸಾರ್ವಜನಿಕ ಕಾರ್ಯಕ್ರಮವನ್ನು ಶ್ವೇತಭವನದಲ್ಲಿ ನಡೆಸಲಿದ್ದಾರೆ ಎಂದು ಶುಕ್ರವಾರ ಎಬಿಸಿ ನ್ಯೂಸ್ ವರದಿ ಮಾಡಿತ್ತು.

ಅಧ್ಯಕ್ಷರು ಶನಿವಾರದೊಳಗೆ ಮತ್ತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹಾದಿಯಲ್ಲಿದ್ದಾರೆ ಎಂದು ಶ್ವೇತಭವನದ ವೈದ್ಯ ಸೀನ್ ಕಾನ್ಲೆ ಹೇಳಿದ್ದಾರೆ.

ಕೊರೊನಾವೈರಸ್ ದೃಢಪಟ್ಟ ನಂತರ ಚಿಕಿತ್ಸೆ ಪಡೆಯಲು ಟ್ರಂಪ್ ವಾರದ ಹಿಂದೆ ವಾಲ್ಟರ್ ರೀಡ್ ವೈದ್ಯಕೀಯ ಕೇಂದ್ರಕ್ಕೆ ದಾಖಲಾಗಿದ್ದರು. ವೈದ್ಯರು ಸೋಮವಾರ ಟ್ರಂಪ್‌ರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದರು. ನಂತರ ಟ್ರಂಪ್‍ ಎಂದಿನಂತೆ ಕೆಲಸವನ್ನು ಮುಂದುವರೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com