ಬಿಡೆನ್, ಕಮಲಾ ಹ್ಯಾರಿಸ್ ಪರ ಒಬಾಮಾ ಪ್ರಚಾರ

ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮುಂದಿನ ವಾರ ಪೆನ್ಸಿಲ್ ವಾನಿಯಾದಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಪರ ಪ್ರಚಾರ ನಡೆಸಲಿದ್ದಾರೆ.

Published: 17th October 2020 12:00 PM  |   Last Updated: 17th October 2020 12:00 PM   |  A+A-


Obama_Biden1

ಬರಾಕ್ ಒಬಾಮಾ, ಜೋ ಬಿಡೆನ್

Posted By : Nagaraja AB
Source : ANI

ವಾಷಿಂಗ್ಟನ್: ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮುಂದಿನ ವಾರ ಪೆನ್ಸಿಲ್ ವಾನಿಯಾದಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಪರ ಪ್ರಚಾರ ನಡೆಸಲಿದ್ದಾರೆ.

77 ವರ್ಷದ ಬಿಡೆನ್ ಒಬಾಮಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಉಪ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಬಿಡೆನ್ ಹಾಗೂ ಭಾರತೀಯ ಮೂಲದ ಸೆನೆಟರ್ ಕಮಲಾ ಹ್ಯಾರಿಸ್ ಪರ ಆನ್ ಲೌನ್ ಪ್ರಚಾರ ನಡೆಸಲು ಒಬಮಾ ಅನುಮತಿ ನೀಡಿದ್ದಾರೆ.ವೈಯುಕ್ತಿಕವಾಗಿ ಇದೇ ಮೊದಲ ಬಾರಿಗೆ ಮಾಜಿ ಅಧ್ಯಕ್ಷರು ಪ್ರಚಾರ ನಡೆಸಲಿದ್ದಾರೆ.

ಆದಾಗ್ಯೂ, ಒಬಾಮಾ ಪರಿಣಾಮಕಾರಿಯಲ್ಲದ ಪ್ರಚಾರಕ. 2016ರಲ್ಲಿ ಅವರು ಕೆಟ್ಟ ಕೆಲಸ ಮಾಡಿದ್ದರಿಂದ ನಾನೀಗ ಅಧ್ಯಕ್ಷರಾಗಿರುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಧ್ಯಕ್ಷ ಸ್ಥಾನ ತೊರೆದು ನಾಲ್ಕು ವರ್ಷಗಳಾದರೂ ಒಬಾಮಾ ಅವರ ಭಾಷಣ ಕೌಶಲ ಪ್ರತಿಪಕ್ಷ ಡೆಮಾಕ್ರಟಿಕ್ ನತ್ತ ಹೆಚ್ಚಿನ ಸಂಖ್ಯೆಯ ಜನರನ್ನು ಆಕರ್ಷಿಸುತ್ತಿದೆ. ಬರುವ ಬುಧವಾರ ಒಬಾಮಾ ಫಿಲಡೆಲ್ಫಿಯಾ,ಪೆನ್ಸಿಲ್ ವಾನಿಯಾಕ್ಕೆ ತೆರಳಲಿದ್ದು, ಜೋ ಬಿಡೆನ್ ಮತ್ತು ಕಮಲಾ ಹ್ಯಾರಿಸ್ ಪರ ಪ್ರಚಾರ ನಡೆಸಲಿದ್ದಾರೆ ಎಂದು ಬಿಡೆನ್ ಪರ ಪ್ರಚಾರಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Stay up to date on all the latest ಅಂತಾರಾಷ್ಟ್ರೀಯ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp