ಕೊರೋನಾ ಏರಿಕೆ: ಸ್ಪೇನ್ ನಲ್ಲಿ ಎರಡನೇ ಬಾರಿಗೆ ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆ

ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದಂತೆಯೇ ಸ್ಪೇನ್ ನಲ್ಲಿ ಎರಡನೇ ಬಾರಿಗೆ ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆಯಾಗಿದೆ. 
ಕೊರೋನಾ ವೈರಾಣು
ಕೊರೋನಾ ವೈರಾಣು

ಮ್ಯಾಡ್ರಿಡ್: ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದಂತೆಯೇ ಸ್ಪೇನ್ ನಲ್ಲಿ ಎರಡನೇ ಬಾರಿಗೆ ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆಯಾಗಿದೆ. 

ಸ್ಪ್ಯಾನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದು, ಸೋಂಕು ಕಡಿಮೆ ಮಾಡುವುದು ಹಾಗೂ ರಾತ್ರಿ ವೇಳೆ ಕರ್ಫ್ಯೂ ಹೇರಿಕೆ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. 

ರಾತ್ರಿ ವೇಳೆಯ ಸಂಚಾರ ಹಾಗೂ 6 ಜನಕ್ಕಿಂತ ಹೆಚ್ಚು ಭೇಟಿ ಮಾಡಬಾರದು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. 

ನಾವು ವಿಪರೀತವಾದ ಸ್ಥಿತಿಯಲ್ಲಿದ್ದೇವೆ, ಕಳೆದ ಶತಮಾನದಲ್ಲೇ ಇದು ಗಂಭೀರವಾದ ಆರೋಗ್ಯ ಬಿಕ್ಕಟ್ಟಾಗಿದೆ ಎಂದು ಸ್ಪೇನ್ ಪ್ರಧಾನಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com