ಪಶ್ಚಿಮ ಡಾರ್ಫರ್ ಹಿಂಸಾಚಾರ: ಸಾವಿನ ಸಂಖ್ಯೆ 132 ಕ್ಕೆ ಏರಿಕೆ

ಸುಡಾನ್‌ನ ಪಶ್ಚಿಮ ಡಾರ್‌ಫರ್ ರಾಜ್ಯದಲ್ಲಿ ಬುಡಕಟ್ಟು ಜನಾಂಗದವರ ಘರ್ಷಣೆಯಲ್ಲಿ 132 ಜನರು ಸಾವನ್ನಪ್ಪಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಖಾರ್ಟೂಮ್: ಸುಡಾನ್‌ನ ಪಶ್ಚಿಮ ಡಾರ್‌ಫರ್ ರಾಜ್ಯದಲ್ಲಿ ಬುಡಕಟ್ಟು ಜನಾಂಗದವರ ಘರ್ಷಣೆಯಲ್ಲಿ 132 ಜನರು ಸಾವನ್ನಪ್ಪಿದ್ದಾರೆ.

ಈ ಘಟನೆ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜ್ಯದ ರಾಜ್ಯಪಾಲ ಮೊಹಮ್ಮದ್ ಅಲ್-ದೋಮಾ, ಸಾವಿರಾರು ಜನರು ತಮ್ಮ ಮನೆಗಳಿಂದ ಪಲಾಯನ ಮಾಡಿದ್ದಾರೆ ಎಂದು ಅವರು ಹೇಳಿದರು.

ಅಲ್ ಜುನಯಾನಾ ಪಟ್ಟಣದಲ್ಲಿ ಅರಬ್ ಮತ್ತು ಮಸಾಲಿಟ್ ಬುಡಕಟ್ಟು ಜನಾಂಗದವರ ನಡುವಿನ ಐದು ದಿನಗಳ ಹೋರಾಟದಲ್ಲಿ ಸುಮಾರು 208 ಜನರು ಗಾಯಗೊಂಡಿದ್ದಾರೆ. ಪಟ್ಟಣಕ್ಕೆ ಬರುತ್ತಿದ್ದ ಮಸಾಲಿಟ್ ಬುಡಕಟ್ಟು ಜನಾಂಗದವರಿಗೆ ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿದಾಗ ಹಿಂಸಾಚಾರ ಭುಗಿಲೆದ್ದಿತು. ಇಬ್ಬರು ಮಸಾಲಿಟ್ ಬುಡಕಟ್ಟು ಜನಾಂಗದವರ ಸಾವಿನ ನಂತರ ಹಿಂಸಾಚಾರ ಹೆಚ್ಚಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com