ಆಫ್ಘಾನಿಸ್ತಾನ ಕುರಿತು ವಿಶ್ವಸಂಸ್ಥೆ ವೇದಿಕೆಯಲ್ಲಿ ಮಾತನಾಡಲು ಭಾರತ ಅವಕಾಶ ನೀಡಲಿಲ್ಲ: ಪಾಕಿಸ್ತಾನ ಆರೋಪ

ವಿಶ್ವಸಂಸ್ಥೆ ವೇದಿಕೆಯನ್ನು ರಾಜಕೀಯ ದುರುದ್ದೇಶಕ್ಕೆ ಭಾರತ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಪಾಕಿಸ್ತಾನ, ಆಫ್ಘಾನಿಸ್ತಾನದ ಸಮಸ್ಯೆ ಬಗ್ಗೆ ಭದ್ರತಾ ಮಂಡಳಿ ತುರ್ತು ಸಭೆಯಲ್ಲಿ ಮಾತನಾಡಲು ಭಾರತ ಮತ್ತೊಮ್ಮೆ ಬಿಟ್ಟಿಲ್ಲ ಎಂದು ಟೀಕಿಸಿದೆ. 
ಪಾಕ್ ವಿದೇಶಾಂಗ ಸಚಿವ ಮಹಮ್ಮೂದ್ ಖುರೇಷಿ
ಪಾಕ್ ವಿದೇಶಾಂಗ ಸಚಿವ ಮಹಮ್ಮೂದ್ ಖುರೇಷಿ

ಇಸ್ಲಾಮಾಬಾದ್: ವಿಶ್ವಸಂಸ್ಥೆ ವೇದಿಕೆಯನ್ನು ರಾಜಕೀಯ ದುರುದ್ದೇಶಕ್ಕೆ ಭಾರತ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಪಾಕಿಸ್ತಾನ, ಆಫ್ಘಾನಿಸ್ತಾನದ ಸಮಸ್ಯೆ ಬಗ್ಗೆ ಭದ್ರತಾ ಮಂಡಳಿ ತುರ್ತು ಸಭೆಯಲ್ಲಿ ಮಾತನಾಡಲು ಭಾರತ ಮತ್ತೊಮ್ಮೆ ಬಿಟ್ಟಿಲ್ಲ ಎಂದು ಟೀಕಿಸಿದೆ. 

ಸಭೆಯ ಬಳಿಕ ಸರಣಿ ಟ್ವೀಟ್ ಮಾಡಿರುವ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮ್ಮೂದ್ ಖುರೇಷಿ, ಇಂದಿನ ಯುಎನ್ ಎಸ್ ಸಿ ಸಭೆಯಲ್ಲಿ ಆಫ್ಘಾನಿಸ್ತಾನ ಬಗ್ಗೆ ಮಾತನಾಡಲು ಮತ್ತೊಮ್ಮೆ ಪಾಕಿಸ್ತಾನಕ್ಕೆ ಅವಕಾಶ ನಿರಾಕರಿಸಲಾಗಿದೆ.

ಅಫ್ಘಾನಿಸ್ತಾನದ ನಂತರ, ಈ ಸಂಘರ್ಷದ ದಶಕಗಳಿಗೆ ಪಾಕಿಸ್ತಾನವು ಬಲಿಪಶುವಾಗಿದೆ, ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನವು ರಚನಾತ್ಮಕ ಪಾತ್ರವನ್ನು ಪ್ರದರ್ಶಿಸುತ್ತಲೇ ಇದೆ, ಆರ್ಥಿಕ ಮತ್ತು ಮಾನವೀಯ ಸಹಕಾರದ ನಿಟ್ಟಿನಲ್ಲಿ ಶಾಂತಿ ನೆಲೆಸಲು ಪಾಕಿಸ್ತಾನ ಸತತ ಪ್ರಯತ್ನ ಮಾಡುತ್ತಲೇ ಬಂದಿತ್ತು ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ರಚನಾತ್ಮಕ ರೀತಿಯಲ್ಲಿ ತೊಡಗಿಸಿಕೊಳ್ಳಲು ಅಂತರರಾಷ್ಟ್ರೀಯ ಸಮುದಾಯದ ಪ್ರಾಮುಖ್ಯತೆಯನ್ನು ಪಾಕಿಸ್ತಾನವು ಒತ್ತಿ ಹೇಳಲಾಗದು ಎಂದು ತಮ್ಮ ಅಸಹನೆ ವ್ಯಕ್ತಪಡಿಸಿದ್ದಾರೆ.

ಭಾರತವು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಅಧ್ಯಕ್ಷತೆ ವಹಿಸಿಕೊಂಡ ನಂತರ ಇದು ಎರಡನೇ ಬಾರಿಗೆ ಪಾಕಿಸ್ತಾನಕ್ಕೆ ಮಾತನಾಡಲು ನಿರಾಕರಿಸಲಾಗಿದೆ ಎಂಬುದು ಪಾಕಿಸ್ತಾನ ಆರೋಪವಾಗಿದೆ. ಕಳೆದ ವಾರ, ಅಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆದಿತ್ತು ಪಾಕಿಸ್ತಾನ ವಿನಂತಿಸಿಕೊಂಡಿದ್ದರೂ ಮಾತನಾಡಲು ಅವಕಾಶ ನಿರಾಕರಿಸಲಾಗಿತ್ತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com