ಆಫ್ಘಾನಿಸ್ತಾನಕ್ಕೆ ತಾಲಿಬಾನ್ ಗಿಂತಲೂ ಇದ್ದ ಅತಿದೊಡ್ಡ ಬೆದರಿಕೆಯನ್ನು ನಿಯಂತ್ರಿಸಿದ್ದೇವೆ: ಅಮೆರಿಕ ಅಧ್ಯಕ್ಷ ಜೋ ಬೈಡನ್

ತಾಲಿಬಾನ್ ಗಿಂತ ಆಫ್ಘಾನಿಸ್ತಾನದ ಅತೀದೊಡ್ಡ ಬೆದರಿಕೆಯನ್ನು ನಿಯಂತ್ರಿಸಿದ್ದೇವೆ ನಾವು ಈಗಾಗಲೇ ನಿಯಂತ್ರಿಸಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಜೋ ಬೈಡನ್
ಜೋ ಬೈಡನ್

ವಾಷಿಂಗ್ಟನ್: ತಾಲಿಬಾನ್ ಗಿಂತ ಆಫ್ಘಾನಿಸ್ತಾನದ ಅತೀದೊಡ್ಡ ಬೆದರಿಕೆಯನ್ನು ನಿಯಂತ್ರಿಸಿದ್ದೇವೆ ನಾವು ಈಗಾಗಲೇ ನಿಯಂತ್ರಿಸಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಆಫ್ಘಾನಿಸ್ತಾನದ ಇತ್ತೀಚಿನ ಬೆಳವಣಿಗೆಗಳಿಗೆ ಅಮೆರಿಕ ಸರ್ಕಾರದ ಸೇನಾಪಡೆಗಳ ಹಿಂಪಡೆತ ನಿರ್ಧಾರವೇ ಕಾರಣ ಎಂದು ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಇದರ ನಡುವೆಯೇ ತಮ್ಮ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಮರ್ಥಿಸಿಕೊಂಡಿದ್ದಾರೆ.

'ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರದಲ್ಲಿದ್ದರೂ ಸಹ, ಆ ದೇಶದ ಅತೀ ದೊಡ್ಡ ಬೆದರಿಕೆಗಳಾಗಿದ್ದ ಉಗ್ರಗಾಮಿ ಸಂಘಟನೆಗಳನ್ನು ತೊಡೆದುಹಾಕಿದ್ದೇವೆ. ಪ್ರಮುಖವಾಗಿ ಅಲ್-ಖೈದಾ ಮತ್ತು ಇತರ ದೇಶಗಳಲ್ಲಿ ಅದರ ಸಂಬಂಧಿತ ಗುಂಪುಗಳಿಂದ ಹೆಚ್ಚಿನ ಬೆದರಿಕೆಯನ್ನು ನೋಡಲಾಗುತ್ತಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದ್ದು, ಅಲ್ಲಿ ಅಮೆರಿಕ ಮಿಲಿಟರಿ ಶಕ್ತಿಯನ್ನು ಕೇಂದ್ರೀಕರಿಸುವುದು ಇನ್ನು ಮುಂದೆ "ತರ್ಕಬದ್ಧವಲ್ಲ". "ಬೆದರಿಕೆ ಎಲ್ಲಿ ದೊಡ್ಡದು ಎಂಬುದರ ಮೇಲೆ ನಾವು ಗಮನ ಹರಿಸಬೇಕು ಎಂದು ಬೈಡನ್ ಹೇಳಿದ್ದಾರೆ.

ಈ ಕುರಿತಂತೆ ಎಬಿಸಿಯ "ಗುಡ್ ಮಾರ್ನಿಂಗ್ ಅಮೇರಿಕಾ" ದಲ್ಲಿ ಗುರುವಾರ ಪ್ರಸಾರವಾದ ಸಂದರ್ಶನದಲ್ಲಿ ಬೈಡೆನ್ ಮಾತನಾಡಿದ್ದು, ಅರಾಜಕತೆಯಿಲ್ಲದೆ ಅಫ್ಘಾನಿಸ್ತಾನವನ್ನು ತೊರೆಯಲು ಸಾಧ್ಯವೇ ಇರಲಿಲ್ಲ. ಅವ್ಯವಸ್ಥೆಗಳು ಉದ್ಭವಿಸದ ಸನ್ನಿವೇಶದಲ್ಲಿ ಅಲ್ಲಿಂದ ಹೊರ ಹೋಗಲು ನಾವು ನಿರ್ಧರಿಸಿದೆವು.  ಎಲ್ಲವನ್ನೂ ವ್ಯವಸ್ಥಿತ ಹಂತಕ್ಕೆ ತಂದು ಅಲ್ಲಿಂದ ನಿರ್ಗಮಿಸಲು ಸಾಧ್ಯವಿರಲಿಲ್ಲ. ಆದರೆ ಅಲ್ಲಿ ಈಗ ದಿಢೀರ್ ಬೆಳವಣಿಗೆ ನಮಗೆ ಆಘಾತವನ್ನು ಮತ್ತು ಅಚ್ಚರಿಯನ್ನುಂಟು ಮಾಡಿವೆ. ಅಲ್ಲಿ ಗೋಜಲು-ಗೊಂದಲ ಉಂಟಾಗಿದೆ. ಇಂತಹ ಸನ್ನಿವೇಶವಿಲ್ಲದೆ ಹೊರಹೋಗಲು ಬೇರೆ ದಾರಿಯೇ ಇರಲಿಲ್ಲ. ಅಮೆರಿಕ ಬೆಂಬಲಿತ  ಅಫ್ಘನ್ ಸರ್ಕಾರದ ಹಠಾತ್ ಕುಸಿತದ ಆಘಾತಗೊಂಡಿದ್ದೇವೆ. ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಜನರನ್ನು ಕರೆತರಲು ಸಾವಿರಾರು ಸೇನಾ ಪಡೆಗಳನ್ನು ಕಳುಹಿಸಲಾಗುವುದು. ಸ್ಥಳಾಂತರ ಪ್ರಕ್ರಿಯೆಯು ತಾವು ಯುದ್ಧ ಅಂತ್ಯಗೊಳಿಸಲು ನೀಡಿರುವ ಆಗಸ್ಟ್ 31ರ ಗಡುವಿನ ಒಳಗೆ ಪೂರ್ಣಗೊಳ್ಳಲಿದೆ. ಅಗತ್ಯವಿದ್ದರೆ ಈ ಅವಧಿಯನ್ನು ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.

ಯಾರನ್ನೂ ಬಿಡುವುದಿಲ್ಲ
ತಾಲಿಬಾನ್ ನಿಯಂತ್ರಿತ ಕಾಬೂಲ್‌ನಲ್ಲಿ ಒಪ್ಪಿಕೊಂಡಿದ್ದ ಸಮಯಕ್ಕಿಂತ ಹೆಚ್ಚು ಅವಧಿ ಇದ್ದರೂ, ಅಫ್ಘಾನಿಸ್ತಾನದಲ್ಲಿ ಒಬ್ಬರೇ ಒಬ್ಬ ಅಮೆರಿಕನ್ ಪ್ರಜೆಯನ್ನು ಉಳಿಯುವಂತೆ ಮಾಡುವುದಿಲ್ಲ ಎಂದು ಬೈಡನ್ ಹೇಳಿದ್ದಾರೆ. 'ಅಲ್ಲಿರುವ ಪ್ರತಿ ಅಮೆರಿಕನ್ ಪ್ರಜೆಯನ್ನೂ ಸ್ಥಳಾಂತರ ಮಾಡುವವರೆಗೂ ಅಮೆರಿಕನ್ ಪಡೆಗಳು  ಅಲ್ಲಿಯೇ ಇರಲಿವೆ. ನಮ್ಮ ಕಾರ್ಯಾಚರಣೆಗೆ ತಾಲಿಬಾನಿಗಳು ಕೂಡ ಸಹಕಾರ ನೀಡುತ್ತಿದ್ದಾರೆ. ಅಮೆರಿಕದ ನಾಗರಿಕರು ಹೊರಗೆ ಹೋಗಲು ಬಿಡುತ್ತಿದ್ದಾರೆ. ಸ್ಥಳಾಂತರ ಕಾರ್ಯಗಳನ್ನು ನಡೆಸುವುದಕ್ಕಾಗಿ ಕಾಬೂಲ್ ವಿಮಾನ ನಿಲ್ದಾಣವನ್ನು ಸಂಪೂರ್ಣ ಹಿಡಿತದಲ್ಲಿ ಇರಿಸಿಕೊಳ್ಳುವಂತೆ ತಮ್ಮ ಪಡೆಗಳಿಗೆ  ಆದೇಶಿಸಲಾಗಿದೆ. ನಾವು ಅಲ್ಲಿ ಇದ್ದ ಸಂದರ್ಭದಲ್ಲಿ ನಮಗೆ ಸಹಾಯ ಮಾಡಿದವರಿಗೆ ಹೆಚ್ಚು ಕಷ್ಟಗಳನ್ನು ನೀಡಲಾಗುತ್ತಿದೆ ಎಂದು ತಾಲಿಬಾನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಸಿರಿಯಾ ಮತ್ತು ಪೂರ್ವ ಆಫ್ರಿಕಾವನ್ನು ಇಸ್ಲಾಮಿಕ್ ಸ್ಟೇಟ್ ಗುಂಪು ಅಫ್ಘಾನಿಸ್ತಾನಕ್ಕಿಂತ "ಗಮನಾರ್ಹವಾಗಿ ದೊಡ್ಡ ಬೆದರಿಕೆಯನ್ನು" ಒಡ್ಡಿದ ಸ್ಥಳಗಳೆಂದು ಬೈಡನ್ ಹೆಸರಿಸಿದ್ದು, ಐಸಿಸ್ "ಮೆಟಾಸ್ಟಾಸೈಸ್ ಮಾಡಲಾಗಿದೆ" ಎಂದು ಹೇಳಿದರು. ಸಿರಿಯಾದಂತಹ ಸ್ಥಳದಲ್ಲಿ ಅಮೆರಿಕವು ಗಣನೀಯ ಮಿಲಿಟರಿ  ಉಪಸ್ಥಿತಿಯನ್ನು ಹೊಂದಿಲ್ಲವಾದರೂ, ಅದು ಉಗ್ರಗಾಮಿಗಳನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು.

ಮಿಲಿಟರಿ ಬಲದ ಮೂಲಕ ಮಹಿಳೆಯರ ಹಕ್ಕಗಳ ರಕ್ಷಣೆ ತರ್ಕಬದ್ಧವಲ್ಲ
ಇದೇ ವೇಳೆ ದೇಶದ ಮಹಿಳೆಯರು ಮತ್ತು ಹುಡುಗಿಯರ ಬಗ್ಗೆ ಕಾಳಜಿ ವಹಿಸುವುದರ ಕುರಿತು ಮಾತನಾಡಿದ ಬೈಡನ್, 'ಮಿಲಿಟರಿ ಬಲದ ಮೂಲಕ ಜಗತ್ತಿನಾದ್ಯಂತ ಮಹಿಳಾ ಹಕ್ಕುಗಳನ್ನು ರಕ್ಷಿಸಲು ಪ್ರಯತ್ನಿಸುವುದು "ತರ್ಕಬದ್ಧವಲ್ಲ". ಇದಕ್ಕೆ ಬದಲಾಗಿ ಮಾನವ ಹಕ್ಕುಗಳ ದುರುಪಯೋಗ ಮಾಡುವವರ ಮೇಲೆ  "ರಾಜತಾಂತ್ರಿಕ ಮತ್ತು ಅಂತಾರಾಷ್ಟ್ರೀಯ ಒತ್ತಡದ ಮೂಲಕ ತಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳುವಂತೆ ಮಾಡಬೇಕು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com