ಎರಿಕ್ ಜೆಮ್ಮೊರ್
ವಿದೇಶ
ಫ್ರೆಂಚ್ ಪತ್ರಕರ್ತ, ಸುದ್ದಿವಾಹಿನಿ ನಿರೂಪಕ ಅಧ್ಯಕ್ಷೀಯ ಅಭ್ಯರ್ಥಿ: ಪ್ಯಾರಿಸ್ ನಲ್ಲಿ ಪ್ರಚಾರ ಶುರು
ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮೆಕ್ರಾನ್ ಎರಡನೇ ಅವಧಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದರೂ, ಅವರಿನ್ನೂ ಅಧಿಕೃತವಾಗಿ ಘೋಷಿಸಿಲ್ಲ.
ಪ್ಯಾರಿಸ್: ಬಲಪಂಥೀಯ ನಿಲುವನ್ನು ಹೊಂದಿರುವ ಫ್ರೆಂಚ್ ಪತ್ರಕರ್ತ, ಸುದ್ದಿವಾಹಿನಿ ನಿರೂಪಕ ಎರಿಕ್ ಜೆಮ್ಮೊರ್ ಅಧ್ಯಕ್ಷೀಯ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಇತ್ತೀಚಿಗಷ್ಟೆ ಅವರು ಮುಂಬರಲಿರುವ ಅಧ್ಯಕ್ಷೀಯ ಚುನಾವಣಾ ಕಣದಲ್ಲಿ ತಾವೂ ಸ್ಪರ್ಧಿಸುವುದಾಗಿ ಘೋಷಿಸಿದ್ದರು.
63 ವರ್ಷದ ಎಇಕ್ ಅವರು ಕಟ್ಟರ್ ಬಲಪಂಥೀಯವಾದಿಯಾಗಿದ್ದು, ವಿದೇಶಿ ವಲಸೆಯನ್ನು ಖಂಡಿಸುತ್ತಾರೆ. ಅವರ ಚುನಾವಣಾ ಪ್ರಚಾರ ದಿನದಂದೇ ಅವರ ವಿರೋಧಿಗಳು ಪ್ರತಿಭಟನೆ ನಡೆಸಿದ್ದು ವಿಶೇಷ.
ಬಲಪಂಥೀಯವಾದವನ್ನು ಫ್ರೆಂಚರು ತಿರಸ್ಕರಿಸುತಾರೆ ಎನ್ನುವ ಫಲಕಗಳನ್ನು ಎರಿಕ್ ವಿರೋಧಿಗಳು ಪ್ರದರ್ಶನ ಮಾಡಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮೆಕ್ರಾನ್ ಎರಡನೇ ಅವಧಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದರೂ, ಅವರಿನ್ನೂ ಅಧಿಕೃತವಾಗಿ ಘೋಷಿಸಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ