
ಟೆಲ್ ಅವಿವ್
ಜೆರುಸಲೆಂ: ವಿಶ್ವದ ಅತಿ ದುಬಾರಿ ನಗರ ಎನ್ನುವ ಖ್ಯಾತಿಗೆ ಇಸ್ರೇಲಿನ ಟೆಲ್ ಅವಿವ್ ನಗರ ಪಾತ್ರವಾಗಿದೆ. ಜೆರುಸಲೆಂ ಇಸ್ರೇಲಿನ ರಾಜಧಾನಿಯಾಗಿದ್ದರೂ, ದೇಶದ ಆರ್ಥಿಕ ಮತ್ತು ತಂತ್ರಜ್ನಾನ ಕೇಂದ್ರ ಟೆಲ್ ಅವಿವ್ ಆಗಿದೆ.
ಇದನ್ನೂ ಓದಿ: ಪಾಕ್ ಸಿಖ್ ವ್ಯಕ್ತಿಯಿಂದ ಸಿಖ್ ಧರ್ಮಕ್ಕೆ ಅಪಚಾರ, ಭಾರತೀಯ ಪತ್ರಕರ್ತ ದೂರು: ತನಿಖೆಗೆ ಇಮ್ರಾನ್ ಖಾನ್ ಸರ್ಕಾರ ಆದೇಶ
ಇದೇ ಮೊದಲ ಬಾರಿಗೆ ಈ ಹೆಸರಿಗೆ ಇಸ್ರೇಲ್ ಪಾತ್ರವಾಗಿದೆ. ಹಣದುಬ್ಬರ ಏರಿಕೆ ಅದಕ್ಕೆ ಕಾರಣ ಎನ್ನಲಾಗುತ್ತಿದೆ. ಟೆಲ್ ಅವಿವ್ ನಂತರದ ಸ್ಥಾನಗಳಲ್ಲಿ ಪ್ಯಾರಿಸ್, ಸಿಂಗಪೂರ್ ಇದೆ. ಅಮೆರಿಕದ ನ್ಯೂಯಾರ್ಕ್ 6ನೇ ಸ್ಥಾನ ಪಡೆದಿದೆ.
ಇದನ್ನೂ ಓದಿ: ಆನ್ ಲೈನ್ ಟ್ರಾಲಿಂಗ್ ವಿರುದ್ಧ ಕಾನೂನು: ಆಸ್ಟ್ರೇಲಿಯ ಸರ್ಕಾರ ಮಹತ್ವದ ನಿರ್ಧಾರ
ಕಳೆದ ವರ್ಷ ಪ್ಯಾರಿಸ್ ಮೊದಲ ಸ್ಥಾನ ಪಡೆದಿತ್ತು. ಇದೇ ವೇಳೆ ಯುದ್ಧಪೀಡಿತ ರಾಷ್ಟ್ರವಾದ ಸಿರಿಯ, ಡಮಸ್ಕಸ್, ವಾಸಿಸಲು ಅತಿ ಅಗ್ಗದ ನಗರ ಎನ್ನುವ ಹೆಸರಿಗೆ ಪಾತ್ರವಾಗಿದೆ. Economist Intelligence Unit ಸಂಸ್ಥೆ ನಡೆಸಿದ ಜಾಗತಿಕ ಸಮೀಕ್ಷೆಯಿಂದ ಈ ಮಾಹಿತಿ ಹೊರಬಂದಿದೆ.
ಇದನ್ನೂ ಓದಿ: ಆಸ್ಪತ್ರೆಗೆ ಸೈಕಲ್ನಲ್ಲಿ ಬಂದು ಮಗುವಿಗೆ ಜನ್ಮ ನೀಡಿದ ನ್ಯೂಜಿಲೆಂಡ್ ಸಂಸದೆ!