ಆನ್ ಲೈನ್ ಟ್ರಾಲಿಂಗ್ ವಿರುದ್ಧ ಕಾನೂನು: ಆಸ್ಟ್ರೇಲಿಯ ಸರ್ಕಾರ ಮಹತ್ವದ ನಿರ್ಧಾರ

ವಾಸ್ತವ ಜಗತಿನಲ್ಲಿ ಯಾವೆಲ್ಲಾ ಕಾನೂನುಗಳಿವೆಯೋ ಅವೇ ನಿಯಮಗಳು ಡಿಜಿಟಲ್ ಪ್ರಪಂಚದಲ್ಲೂ ಅನ್ವಯವಾಗಬೇಕು. ಆ ನಿಟ್ಟಿನಲ್ಲಿ ತಮ್ಮ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಪ್ರಧಾನಿ ಸ್ಕಾಟ್ ಮೋರಿಸನ್ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕ್ಯಾನ್ ಬೆರ್ರಾ: ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಮನೋಭಾವ ಮತ್ತು ಟ್ರಾಲಿಂಗ್ ಅನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಆಸ್ಟ್ರೇಲಿಯ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. 

ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೋರಿಸನ್ ಟ್ರಾಲಿಂಗ್ ನಿಗ್ರಹ ಶಾಸನವನ್ನು ಬಹಿರಂಗಗೊಳಿಸಿದ್ದಾರೆ. ಈ ಶಾಸನವನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು.

ಈ ಮಸೂದೆಯಡಿ ಸಾಮಾಜಿಕ ಜಾಲತಾಣಗಳನ್ನು ಪಬ್ಲಿಷರ್ ಎಂದು ಪರಿಗಣಿಸಲಾಗುವುದು. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಳ್ಳುವ ಅವಹೇಳನಕಾರಿ ಸಂದೇಶ ಮತ್ತು ಟ್ರಾಲ್ ಗಳಿಗೆ ಆ ಸಂಸ್ಥೆಗಳನ್ನು ಹೊಣೆಗಾರರನ್ನಾಗಿಸಬಹುದಾಗಿದೆ.  

ವಾಸ್ತವ ಜಗತಿನಲ್ಲಿ ಯಾವೆಲ್ಲಾ ಕಾನೂನುಗಳಿವೆಯೋ ಅವೇ ನಿಯಮಗಳು ಡಿಜಿಟಲ್ ಪ್ರಪಂಚದಲ್ಲೂ ಅನ್ವಯವಾಗಬೇಕು. ಆ ನಿಟ್ಟಿನಲ್ಲಿ ತಮ್ಮ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಪ್ರಧಾನಿ ಸ್ಕಾಟ್ ಮೋರಿಸನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com