ಪಾಕ್ ಸಿಖ್ ವ್ಯಕ್ತಿಯಿಂದಲೇ ಸಿಖ್ ಧರ್ಮಕ್ಕೆ ಅಪಚಾರ, ಭಾರತೀಯ ಪತ್ರಕರ್ತ ದೂರು: ತನಿಖೆಗೆ ಇಮ್ರಾನ್ ಖಾನ್ ಸರ್ಕಾರ ಆದೇಶ

ವಿವಾದಾತ್ಮಕ ಫೋಟೋಶೂಟ್ ಅನ್ನು ಪಾಕಿಸ್ತಾನದ ಕರ್ತಾರ್ ಪುರದ ಗುರುದ್ವಾರದಲ್ಲಿ ನಡೆಸಲಾಗಿತ್ತು.
ಪಾಕಿಸ್ತಾನದ ಕರ್ತಾರ್ ಪುರದಲ್ಲಿನ ಗುರುದ್ವಾರ
ಪಾಕಿಸ್ತಾನದ ಕರ್ತಾರ್ ಪುರದಲ್ಲಿನ ಗುರುದ್ವಾರ
Updated on

ಕರಾಚಿ: ಪಾಕಿಸ್ತಾನದ ಮಾಡೆಲ್ ಆಗಿರುವ ಸಿಖ್ ಧರ್ಮೀಯ ವ್ಯಕ್ತಿಯೋರ್ವ ವಸ್ತ್ರ ಜಾಹೀರಾತಿಗಾಗಿ ಪೇಟಾ ತ್ಯಜಿಸಿ, ತಲೆಗೂದಲನ್ನು ಪ್ರದರ್ಶನ ಮಾಡಿ ಫೋಟೋಶೂಟ್ ನಲ್ಲಿ ಭಾಗವಹಿಸಿದ್ದರು. ಆನ್ ಲೈನಿನಲ್ಲಿ ಈ ಫೋಟೋಗಳು ಹರಿದಾಡಿದ್ದವು. 

ಈ ಫೋಟೋಗಳು ಭಾರತೀಯ ಪತ್ರಕರ್ತ ರವೀಂದರ್ ಸಿಂಗ್ ಎಂಬುವವರ ಕಣ್ಣಿಗೆ ಬಿದ್ದಿತ್ತು. ಅವರು ಆ ಫೋಟೋಗಳನ್ನು ಶೇರ್ ಮಾಡಿ ಆ ವ್ಯಕ್ತಿಯಿಂದ ಸಿಖ್ ಧರ್ಮಕ್ಕೆ ಅಪಚಾರವಾಗಿದೆ ಎಂದು ಟ್ವಿಟರ್ ನಲ್ಲಿ ಸಂದೇಶ ಶೇರ್ ಮಾಡಿದ್ದರು. ಆ ಸಂದೇಶದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನೂ ಟ್ಯಾಗ್ ಮಾಡಿದ್ದರು.

ಈ ಘಟನೆ ಇಮ್ರಾನ್ ಖಾನ್ ಗಮನಕ್ಕೆ ಬಂದಿದ್ದು ತನಿಖೆಗೆ ಆದೇಶಿಸಿದ್ದಾರೆ. ವಿವಾದಾತ್ಮಕ ಫೋಟೋಶೂಟ್ ಅನ್ನು ಪಾಕಿಸ್ತಾನದ ಕರ್ತಾರ್ ಪುರದ ಗುರುದ್ವಾರದಲ್ಲಿ ನಡೆಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com