ಪಾಕಿಸ್ತಾನದ ವಸೀಂ ಅಕ್ರಂ ದಾಖಲೆ ಮುರಿದ ಆರ್ ಅಶ್ವಿನ್, ಭಜ್ಜಿ ದಾಖಲೆ ಸರಿಗಟ್ಟಲು ಸಮಯ ಸನ್ನಿಹಿತ!
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ 3 ವಿಕೆಟ್ ಪಡೆದ ಆರ್ ಅಶ್ವಿನ್ ಪಾಕಿಸ್ತಾನದ ಕ್ರಿಕೆಟ್ ದಂತಕಥೆ ವಸೀಂ ಅಕ್ರಂ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.
Published: 27th November 2021 05:39 PM | Last Updated: 27th November 2021 05:41 PM | A+A A-

ಆರ್ ಅಶ್ವಿನ್
ಕಾನ್ಪುರ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ 3 ವಿಕೆಟ್ ಪಡೆದ ಆರ್ ಅಶ್ವಿನ್ ಪಾಕಿಸ್ತಾನದ ಕ್ರಿಕೆಟ್ ದಂತಕಥೆ ವಸೀಂ ಅಕ್ರಂ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಇದನ್ನೂ ಓದಿ: ಮೊದಲ ಟೆಸ್ಟ್, 3ನೇ ದಿನದಾಟ ಅಂತ್ಯ: ಭಾರತ 14/1, ಕಿವೀಸ್ ವಿರುದ್ಧ 63ರನ್ ಮುನ್ನಡೆ
ಕಾನ್ಪುರದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೂರು ವಿಕೆಟ್ ಪಡೆದ ಅಶ್ವಿನ್ ತಮ್ಮ ವಿಕೆಟ್ ಗಳಿಕೆಯನ್ನು 416ಕ್ಕೆ ಏರಿಸಿಕೊಂಡಿದ್ದು, ಆ ಮೂಲಕ 414 ವಿಕೆಟ್ ಗಳಿಸಿದ್ದ ಪಾಕಿಸ್ತಾನ ಕ್ರಿಕೆಟ್ ದಂತಕಥೆ ವಸೀಂ ಅಕ್ರಂ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಅಂತೆಯೇ ಅಶ್ವಿನ್ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ ದಾಖಲೆಯನ್ನು ಸರಿಗಟ್ಟಲು ಇನ್ನೊಂದು ವಿಕೆಟ್ ಬೇಕಿದ್ದು, ಭಜ್ಜಿ 417 ವಿಕೆಟ್ ಗಳಿಸಿದ್ದಾರೆ. 416 ವಿಕೆಟ್ ಕಳಿಸಿರುವ ಅಶ್ವಿನ್ ಇನ್ನೊಂದು ವಿಕೆಟ್ ಗಳಿಸಿದರೆ ಭಜ್ಜಿ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ಇದನ್ನೂ ಓದಿ: ಮೊದಲ ಟೆಸ್ಟ್, ಮೊದಲ ಇನ್ನಿಂಗ್ಸ್, 3ನೇ ದಿನ: 296 ರನ್ ಗೆ ನ್ಯೂಜಿಲೆಂಡ್ ಆಲೌಟ್, ಭಾರತಕ್ಕೆ 49 ರನ್ ಮುನ್ನಡೆ
ಇನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧಕರ ಪಟ್ಟಿಯಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅಗ್ರಸ್ಥಾನದಲ್ಲಿದ್ದು, ಅವರು 800 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಅವರ ಬಳಿಕದ ಸ್ಥಾನದಲ್ಲಿ ಆಸ್ಚ್ರೇಲಿಯಾದ ಶೇನ್ ವಾರ್ನ್ ಇದ್ದು ಅವರು 708 ವಿಕೆಟ್ ಪಡೆದಿದ್ದಾರೆ. ಭಾರತದ ಅನಿಲ್ ಕುಂಬ್ಳೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಕುಂಬ್ಳೆ ಒಟ್ಟು 619 ವಿಕೆಟ್ ಪಡೆದಿದ್ದಾರೆ. ಈ ಪಟ್ಟಿಯಲ್ಲಿ 416 ವಿಕೆಟ್ ಪಡೆದಿರುವ ಅಶ್ವಿನ್ 14ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಮೊದಲ ಟೆಸ್ಟ್: ಭಾರತಕ್ಕೆ ಆಘಾತ, ಕುತ್ತಿಗೆ ನೋವಿನಿಂದ ಕಣಕ್ಕಿಳಿಯದ ವೃದ್ದಿಮಾನ್ ಸಾಹಾ, ಕೆಎಸ್ ಭರತ್ ವಿಕೆಟ್ ಕೀಪಿಂಗ್
ಭಾರತದ ಪರ ಒಟ್ಟು 81ಟೆಸ್ಟ್ ಪಂದ್ಯಗಳನ್ನಾಡಿರುವ ಅಶ್ವಿನ್ 416 ವಿಕೆಟ್ ಗಳಿಸಿದ್ದು, ಈ ಪೈಕಿ 59 ರನ್ ನೀಡಿ 7 ವಿಕೆಟ್ ಗಳಿಸಿದ್ದು ಅವರ ವೃತ್ತಿಜೀವನದ ಶ್ರೇಷ್ಠ ಬೌಲಿಂಗ್ ಆಗಿದೆ.