ತಾಲಿಬಾನಿಗಳು ಕೂಡ ಸಾಮಾನ್ಯ ನಾಗರೀಕರೇ, ಉಗ್ರರಲ್ಲ: ಪಾಕ್ ಪ್ರಧಾನಿ ಇಮ್ರಾನ್ ಖಾನ್

ತಾಲಿಬಾನಿಗಳೂ ಕೂಡ ಸಾಮಾನ್ಯ ನಾಗರೀಕರೇ, ಅವರೇನು ಉಗ್ರರಲ್ಲ ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಬುಧವಾರ ಹೇಳಿದ್ದಾರೆ.
ಇಮ್ರಾನ್ ಖಾನ್
ಇಮ್ರಾನ್ ಖಾನ್
Updated on

ಇಸ್ಲಾಮಾಬಾದ್: ತಾಲಿಬಾನಿಗಳೂ ಕೂಡ ಸಾಮಾನ್ಯ ನಾಗರೀಕರೇ, ಅವರೇನು ಉಗ್ರರಲ್ಲ ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಬುಧವಾರ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿನ ಹಿಂಸಾಚಾರಕ್ಕೆ ಪಾಕಿಸ್ತಾನ ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂಬ ಆರೋಪಕ್ಕೆ ಇಮ್ರಾನ್​ಖಾನ್ ಅವರು ಮೊದಲ ಬಾರಿಗೆ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. 

ತಾಲಿಬಾನ್​ ಎಂದು ಗುರುತಿಸಲಾಗಿರುವವರಲ್ಲಿ ಹೆಚ್ಚಿನವರು ಜನಸಾಮಾನ್ಯರು. ಗಡಿಯಲ್ಲಿ ಮೂರು ಮಿಲಿಯನ್​ ಆಫ್ಘನ್​ ನಿರಾಶ್ರಿತರಿದ್ದಾರೆ. ಅವರನ್ನು ಹೇಗೆ ಕೊಲ್ಲೋಕೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಪಾಕಿಸ್ತಾನವು 30 ಲಕ್ಷ ಆಫ್ಘನ್​ ನಿರಾಶ್ರಿತರಿಗೆ ಆಶ್ರಯ ನೀಡುತ್ತಿದೆ. ಅದರಲ್ಲಿ ಹೆಚ್ಚಿನವರು ಪಶ್ತೂನ್​ ಹಾಗೂ ತಾಲಿಬಾನ್​ ಹೋರಾಟಗಾರರ ಜನಾಂಗದವರೇ ಆಗಿದ್ದಾರೆ. ಸದ್ಯ 5 ಲಕ್ಷ ಶಿಬಿರಗಳಿದ್ದು, ಅವುಗಳಲ್ಲಿ ಕೆಲವು ಉಗ್ರ ಸಂಘಟನೆಗೆ ಸೇರಿದವರಾಗಿಲ್ಲ. ಜನಸಾಮಾನ್ಯರೂ ಇದ್ದಾರೆ. ಅವರನ್ನು ನಾವು ಹೇಗೆ ಹತ್ಯೆಗೈಯ್ಯುವುದಕ್ಕೆ ಸಾಧ್ಯ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ಪಾಕಿಸ್ತಾನದಲ್ಲಿನ ತಾಲಿಬಾನ್ ಸುರಕ್ಷಿತ ತಾಣಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಸುರಕ್ಷಿತ ತಾಣಗಳು ಎಲ್ಲಿವೆ? ಪಾಕಿಸ್ತಾನದಲ್ಲಿ ಮೂರು ದಶಲಕ್ಷ ನಿರಾಶ್ರಿತರು ಇದ್ದಾರೆ, ಅವರು ತಾಲಿಬಾನ್‌ನಂತೆಯೇ ಒಂದೇ ಜನಾಂಗದವರಾಗಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ. 

ಅಫ್ಘಾನಿಸ್ತಾನ ಸರ್ಕಾರದ ವಿರುದ್ಧದ ಹೋರಾಟದಲ್ಲಿ ತಾಲಿಬಾನ್‌ಗಳಿಗೆ ಮಿಲಿಟರಿ, ಆರ್ಥಿಕವಾಗಿ ಮತ್ತು ಗುಪ್ತಚರ ಮಾಹಿತಿಯೊಂದಿಗೆ ಪಾಕಿಸ್ತಾನ ಸಹಾಯ ಮಾಡಿದೆ ಎಂದು ಬಹಳ ಹಿಂದಿನಿಂದಲೂ ಆರೋಪಿಸಲಾಗಿದೆ, ಆದರೆ, ಇಮ್ರಾನ್ ಖಾನ್ ಈ ಆರೋಪಗಳನ್ನು ತಳ್ಳಿ ಹಾಕಿದ್ದು, ಇದೊಂದು ಅನ್ಯಾಯದ ಆರೋಪ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com