ಕೋವಿಡ್-19 ವೈರಸ್ ನ 'ಡೆಲ್ಟಾ' ರೂಪಾಂತರಿ ಬ್ರಿಟನ್ ಗೆ ಮಾರಕ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಏರಿಕೆ ಸಾಧ್ಯತೆ!

ಭಾರತದಲ್ಲಿ ಮೊದಲು ಪತ್ತೆಯಾದ ಕೋವಿಡ್-19 ವೈರಸ್ ಡೆಲ್ಟಾ ರೂಪಾಂತರಿ ಬ್ರಿಟನ್ ಗೆ ಮಾರಣಾಂತಿಕವಾಗಿ ಪರಿಣಮಿಸುತ್ತಿದ್ದು, ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಬ್ರಿಟನ್ ನಲ್ಲಿ ಕೋವಿಡ್ ಸೋಂಕು
ಬ್ರಿಟನ್ ನಲ್ಲಿ ಕೋವಿಡ್ ಸೋಂಕು

ಬ್ರಿಟನ್: ಭಾರತದಲ್ಲಿ ಮೊದಲು ಪತ್ತೆಯಾದ ಕೋವಿಡ್-19 ವೈರಸ್ ಡೆಲ್ಟಾ ರೂಪಾಂತರಿ ಬ್ರಿಟನ್ ಗೆ ಮಾರಣಾಂತಿಕವಾಗಿ ಪರಿಣಮಿಸುತ್ತಿದ್ದು, ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಬ್ರಿಟನ್ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದು, ಡೆಲ್ಟಾ ರೂಪಾಂತರ ವೈರಸ್ ಸೋಂಕಿನಿಂದಾಗಿ ಕಳೆದೊಂದು ವಾರದಲ್ಲಿ 5,472 ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆ ಮೂಲಕ ಈ ರೂಪಾಂತರಿ ವೈರಸ್ ಸೋಂಕಿಗೆ ತುತ್ತಾದವರ ಸಂಖ್ಯೆ 12,431 ಕ್ಕೆ ತಲುಪಿದೆ. ಈ ಬಗ್ಗೆ ಮಾಹಿತಿ ನೀಡಿರುವ  ಬ್ರಿಟನ್ ಆರೋಗ್ಯ ಭದ್ರತಾ ಏಜೆನ್ಸಿಯ ಮುಖ್ಯ ಕಾರ್ಯನಿರ್ವಾಹಕ ಡಾ. ಜೆನ್ನಿ ಹ್ಯಾರಿಸ್ ಅವರು, ಈ ರೂಪಾಂತರವು ಈಗ ಬ್ರಿಟನ್ ನಾದ್ಯಂತ ಪ್ರಬಲವಾಗಿ ಪ್ರಸರಣವಾಗುತ್ತಿದೆ. ನಾವೆಲ್ಲರೂ ಸಾಧ್ಯವಾದಷ್ಟು ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ ಎಂದು ಹೇಳಿದ್ದಾರೆ.

ಸಾಧ್ಯವಾದಷ್ಟೂ ಮನೆಯಿಂದಲೇ ಕೆಲಸ ಮಾಡಿ.. ಅತಿ ಅನಿವಾರ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ. ಎಲ್ಲ ಸಮಯದಲ್ಲೂ ಕೈ ಮುಖ ತೊಳೆಯುತ್ತಿರೆ. ಮನೆಯಲ್ಲಿ ಶುದ್ಧವಾದ ಗಾಳಿ ಬೆಳಕು ಬರುವಂತೆ ನೋಡಿಕೊಳ್ಳಿ.. ನಿಯಮಿತ ವ್ಯಾಯಾಮ ಮತ್ತು ಉತ್ತಮ ಆಹಾರವನ್ನು ಬಿಸಿಯಾಗಿ ತಿನ್ನಿ ಎಂದು  ಸಲಹೆ ನೀಡಿದ್ದಾರೆ. ಅಂತೆಯೇ ಅರ್ಹರು ಕೂಡಲೇ ಲಸಿಕೆ ಹಾಕಿಸಿಕೊಳ್ಳಿ. ಎರಡೂ ಡೋಸ್ ಲಸಿಕೆಯನ್ನು ಹಾಕಿಸಿಕೊಳ್ಳಿ. ಇದು ಜೀವಗಳನ್ನುಉಳಿಸುತ್ತದೆ ಎಂದು ಮನವಿ ಮಾಡಿದ್ದಾರೆ.

ಇನ್ನು ಡೆಲ್ಟಾ ರೂಪಂತರಿ ತಳಿಯಿಂದಾಗಿ ಒಂದೇ ವಾರದಲ್ಲಿ 278 ಮಂದಿ ಸೋಂಕಿತರು ಗಂಭೀರ ಸ್ಥಿತಿಗೆ ತಲುಪಿದ್ದಾರೆ. ಇದೇ ಸಂಖ್ಯೆ ಕಳೆದ ವಾರ 201ರಷ್ಟಿತ್ತು. ಎಂದು ಪಿಎಚ್ ಇ ಮಾಹಿತಿ ನೀಡಿದೆ. ಆದರೆ ಈ ಕುರಿತು ಈಗಲೇ ನಿರ್ಧಿಷ್ಠ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಇದಕ್ಕಾಗಿ ಹೆಚ್ಚಿನ ದತ್ತಾಂಶಗಳು  ಬೇಕಾಗುತ್ತದೆ. ಡೆಲ್ಟಾ ವಿರುದ್ಧದ ಹೋರಾಡಲು ಕೋವಿಡ್ ಲಸಿಕೆ ಎರಡೂ ಡೋಸ್ ಗಳನ್ನು ಹಾಕಿಸಿಕೊಳ್ಳುವುದು ಅನಿವಾರ್ಯ ಎಂದು ಹೇಳಲಾಗಿದೆ.   

ಡೆಲ್ಟಾ ಹಾಟ್ ಸ್ಪಾಟ್ ಆದ ಬೋಲ್ಟನ್
ಇನ್ನು ಡೆಲ್ಟಾ ರೂಪಂತರ ವೈರಸ್ ತಳಿಗೆ ಬ್ರಿಟನ್ ನ ಬೋಲ್ಟನ್ ಹಾಟ್ ಸ್ಪಾಟ್ ಪರಿಣಮಿಸಿದ್ದು, ಅಲ್ಲಿ ಡೆಲ್ಟೋ ಸೋಂಕು ಪ್ರಕರಣಗಳ ಸಂಖ್ಯೆ 795 ರಿಂದ 2149 ಕ್ಕೆ ಏರಿಕೆಯಾಗಿದೆ. ಅದಾಗ್ಯೂ ಬೋಲ್ಟನ್‌ನಲ್ಲಿ ಕೋವಿಡ್ ಸೋಂಕು ಪ್ರಸರಣ ದರ ಕುಸಿಯುತ್ತಿದ್ದು, ಸ್ಥಳೀಯ ಪ್ರಾಧಿಕಾರದ ತಂಡಗಳು ಕೈಗೊಂಡ  ಕ್ರಮಗಳು ಸೋಂಕು ಹರಡುವಿಕೆಯನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಪಿಎಚ್ ಇ ಹೇಳಿದೆ.

ಬೋಲ್ಟನ್‌ನಲ್ಲಿ, ಸ್ಥಳೀಯ ತಂಡಗಳು ಪರೀಕ್ಷೆಗಳನ್ನು ಹೆಚ್ಚಿಸಿದ್ದು, ಪರೀಕ್ಷಾ ಕಿಟ್ ಗಳನ್ನು ಕೂಡ ಹೆಚ್ಚಿನ ಪ್ರಮಾಣದಲ್ಲಿ ವಿತರಿಸಿದ್ದಾರೆ. ಮೊಬೈಲ್ ಪರೀಕ್ಷಾ ಘಟಕಗಳನ್ನು ನಿಯೋಜಿಸಲಾಗಿದ್ದು, ರೂಪಾಂತರದ ಹರಡುವಿಕೆಯನ್ನು ಪತ್ತೆಹಚ್ಚಲು ತ್ಯಾಜ್ಯನೀರಿನ ಮಾದರಿ ಪರೀಕ್ಷೆಗಳನ್ನು ಮುಂದುವರಿಸಲಾಗುತ್ತಿದೆ. ಪಿಎಚ್  ಇ ಮಾಹಿತಿ ನೀಡಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com