ಗೃಹ ಕಾರ್ಮಿಕರ ನೇಮಕಾತಿ ಸಹಕಾರ ಒಪ್ಪಂದಕ್ಕೆ ಭಾರತ, ಕುವೈತ್ ಸಹಿ

ಗಲ್ಫ್ ರಾಷ್ಟ್ರಗಳಲ್ಲಿ ಭಾರತೀಯ ಗೃಹ ಕಾರ್ಮಿಕರ ನೇಮಕಾತಿಯನ್ನು ಸುಗಮಗೊಳಿಸುವ ಮತ್ತು ಕಾನೂನಿನ ರಕ್ಷಣೆಯನ್ನು ಒದಗಿಸುವ ಒಪ್ಪಂದಕ್ಕೆ ಭಾರತ ಮತ್ತು ಕುವೈತ್ ಸಹಿ ಹಾಕಿವೆ.
ಜೈ ಶಂಕರ್
ಜೈ ಶಂಕರ್
Updated on

ಕುವೈತ್: ಗಲ್ಫ್ ರಾಷ್ಟ್ರಗಳಲ್ಲಿ ಭಾರತೀಯ ಗೃಹ ಕಾರ್ಮಿಕರ ನೇಮಕಾತಿಯನ್ನು ಸುಗಮಗೊಳಿಸುವ ಮತ್ತು ಕಾನೂನಿನ ರಕ್ಷಣೆಯನ್ನು ಒದಗಿಸುವ ಒಪ್ಪಂದಕ್ಕೆ ಭಾರತ ಮತ್ತು ಕುವೈತ್ ಸಹಿ ಹಾಕಿವೆ.

ಭಾರತೀಯ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಕುವೈತ್ ಪ್ರಧಾನಿ ಶೇಖ್ ಅಹ್ಮದ್ ನಾಸರ್ ಅಲ್-ಮೊಹಮ್ಮದ್ ಅಲ್-ಸಬಾ ಅವರ ಸಮ್ಮುಖದಲ್ಲಿ ಭಾರತೀಯ ರಾಯಭಾರಿ ಸಿಬಿ ಜಾರ್ಜ್ ಮತ್ತು ಕುವೈತ್ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಮಜ್ದಿ ಅಹ್ಮದ್ ಅಲ್-ಧಾಫಿರಿ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು.

ಜೈಶಂಕರ್ ಅವರು ಕೊಲ್ಲಿ ರಾಷ್ಟ್ರಕ್ಕೆ ತಮ್ಮ ಮೊದಲ ದ್ವಿಪಕ್ಷೀಯ ಭೇಟಿಗೆ ತೆರಳಿದ್ದಾರೆ. ಕುವೈತ್‌ನಲ್ಲಿರುವ ಭಾರತೀಯ ಗೃಹ ಕಾರ್ಮಿಕರನ್ನು ತಮ್ಮ ನೇಮಕಾತಿಯನ್ನು ಸುಗಮಗೊಳಿಸುತ್ತದೆ ಮತ್ತು ಅವರಿಗೆ ಕಾನೂನಿನ ರಕ್ಷಣೆಯನ್ನು ಒದಗಿಸುವ ಕಾನೂನು ಚೌಕಟ್ಟಿನ ವ್ಯಾಪ್ತಿಗೆ ತರುವ ಒಪ್ಪಂದವನ್ನು ಉಭಯ ದೇಶಗಳ ಮಂತ್ರಿಗಳು ಸ್ವಾಗತಿಸಿದರು. 

ಕುವೈತ್ ನಲ್ಲಿ ಸುಮಾರು ಒಂದು ಮಿಲಿಯನ್(10 ಲಕ್ಷ) ಭಾರತೀಯರು ವಾಸಿಸುತ್ತಿದ್ದಾರೆ. ಭಾರತವು ಕುವೈತ್‌ನ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶಗಳಲ್ಲಿ ಒಂದಾಗಿದೆ. ಕೊಲ್ಲಿ ರಾಷ್ಟ್ರವು ಭಾರತಕ್ಕೆ ತೈಲವನ್ನು ಪೂರೈಸುವ ಪ್ರಮುಖ ರಾಷ್ಟ್ರವಾಗಿದೆ.

ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಅಲ್-ಹಮದ್ ಅಲ್-ಸಬಾರನ್ನು ಉದ್ದೇಶಿಸಿ ಬರೆದ ಪತ್ರವನ್ನು ಜೈಶಂಕರ್ ಹಸ್ತಾಂತರಿಸಿದರು. ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ವಿರುದ್ಧ ಹೋರಾಡಲು ಕುವೈತ್ ಭಾರತಕ್ಕೆ ದ್ರವ ವೈದ್ಯಕೀಯ ಆಮ್ಲಜನಕ ಮತ್ತು ಇತರ ಆಮ್ಲಜನಕ ಸಂಬಂಧಿತ ಸರಬರಾಜುಗಳನ್ನು ತ್ವರಿತವಾಗಿ ಪೂರೈಸಿದ್ದಕ್ಕಾಗಿ ಭೇಟಿ ನೀಡಿದ ಸಚಿವರು ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದರು.

ಜೈಶಂಕರ್ ಅವರು ಗಲ್ಫ್ ಕೋಆಪರೇಷನ್ ಕೌನ್ಸಿಲ್ ದೇಶಗಳು ಮತ್ತು ಇರಾನ್‌ನ ಭಾರತೀಯ ರಾಯಭಾರಿಗಳೊಂದಿಗೆ ರೌಂಡ್-ಟೇಬಲ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಸೌದಿ ಅರೇಬಿಯಾ, ಕುವೈತ್, ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಬಹ್ರೇನ್ ಮತ್ತು ಓಮನ್ ಎಂಬ ಆರು ದೇಶಗಳ ಜಿಸಿಸಿ ರಾಜಕೀಯ ಮತ್ತು ಆರ್ಥಿಕ ಮೈತ್ರಿಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com