ಇಸ್ಲಾಮಾಬಾದ್: ಪಾಕಿಸ್ತಾನ ಸ್ನೇಹಪೂರ್ವಕವಾಗಿ ಕಳುಹಿಸಿದ್ದ ಮಾವಿನ ಹಣ್ಣುಗಳನ್ನು ಅಮೆರಿಕಾ, ಚೀನಾ ಮತ್ತಿತರ ದೇಶಗಳು ತಿರಸ್ಕರಿಸಿವೆ. ಕೊರೊನಾ ಕ್ವಾರಂಟೈನ್ ನಿಬಂಧನೆಗಳ ನೆಪವೊಡ್ಡಿ ಈ ಹಣ್ಣುಗಳನ್ನು ಸ್ವೀಕರಿಸಲು ಈ ದೇಶಗಳು ನಿರಾಕರಿಸಿವೆ ಎಂದು ವರದಿಯಾಗಿದೆ.
ಪಾಕಿಸ್ತಾನ ಬುಧವಾರ 32 ದೇಶಗಳಿಗೆ ಮಾವಿನ ಹಣ್ಣುಗಳನ್ನು ಸ್ನೇಹ ಪೂರ್ವಕ ಕಾಣಿಕೆಯಾಗಿ ಕಳುಹಿಸಿತ್ತು. ಆದರೆ ಈ ದೇಶಗಳು ಹಣ್ಣುಗಳನ್ನು ಸ್ವೀಕರಿಸಲು ತಿರಸ್ಕರಿಸಿವೆ. ಈ ದೇಶಗಳಲ್ಲಿ ಅಮೆರಿಕಾ, ಚೀನಾ, ಕೆನಡಾ, ನೇಪಾಳ, ಈಜಿಪ್ಟ್, ಶ್ರೀಲಂಕಾ ಕೂಡ ಸೇರಿವೆ. ತಾವು ಅವುಗಳನ್ನು ಸ್ವೀಕರಿಸದಿರುವುದಕ್ಕೆ ವಿಷಾದ ವ್ಯಕ್ತಪಡಿಸಿವೆ. ಪಾಕಿಸ್ತಾನ ಅಧ್ಯಕ್ಷ ಡಾ ಅರೀಫ್ ಅಲ್ವಿ ಪರವಾಗಿ ಈ ಮಾವಿನ ಹಣ್ಣುಗಳನ್ನು ಕಳುಹಿಸಲಾಗಿತ್ತು.
2015ರಲ್ಲಿ ಅಂದಿನ ಪಾಕಿಸ್ತಾನ ಪ್ರಧಾನ ಮಂತ್ರಿ ನವಾಜ್ ಷರೀಫ್ ಇದೇ ರೀತಿಯಲ್ಲಿ ಮಾವಿನ ಹಣ್ಣುಗಳನ್ನು ಪ್ರಧಾನಿ ನರೇಂದ್ರ ಮೋದಿ, ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸ್ನೇಹ ಪೂರ್ವಕವಾಗಿ ಕಳುಹಿಸಿಕೊಟ್ಟಿದ್ದರು.
Advertisement