ಜಾರ್ಜ್‌ ಫ್ಲಾಯ್ಡ್‌ ಹತ್ಯೆ ಪ್ರಕರಣ: ಮಾಜಿ ಪೊಲೀಸ್ ಅಧಿಕಾರಿಗೆ 22.5 ವರ್ಷ ಜೈಲು ಶಿಕ್ಷೆ

ಅಮೆರಿಕಾದಲ್ಲಿ ಭಾರೀ ಜನಾಕ್ರೋಶಕ್ಕೆ ಕಾರಣವಾಗಿದ್ದ ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಗೆ 22.5 ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲಾಗಿದೆ.
ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್
ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್

ನ್ಯೂಯಾರ್ಕ್: ಅಮೆರಿಕಾದಲ್ಲಿ ಭಾರೀ ಜನಾಕ್ರೋಶಕ್ಕೆ ಕಾರಣವಾಗಿದ್ದ ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಗೆ 22.5 ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲಾಗಿದೆ.

ಮಿನ್ನಿಯಾಪೋಲಿಸ್ ಕೋರ್ಟ್‌ನ ನ್ಯಾಯಮೂರ್ತಿ ಪೀಟರ್ ಕಾಹಿಲ್, ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ ದೋಷಿ ಚೌವಿನ್‌ ಮೃತ ಫ್ಲಾಯ್ಡ್ ಕುಟುಂಬಕ್ಕೆ ತಮ್ಮ ಸಂತಾಪವನ್ನು ಸೂಚಿಸಿದರು. ಆದರೆ ಆರೋಪಿ ಕ್ಷಮೆ ಯಾಚಿಸಲಿಲ್ಲ. ನ್ಯಾಯಾಧೀಶ ಪೀಟರ್ ಕಾಹಿಲ್, ಆರೋಪಿ ಅಧಿಕಾರಿಗೆ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿದರು.

ಈ ಶಿಕ್ಷೆಯು ವಿಶ್ವಾಸದ ಹುದ್ದೆ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವುದಕ್ಕೆ ಮತ್ತು ಜಾರ್ಜ್ ಫ್ಲಾಯ್ಡ್ ಅವರಿಗೆ ತೋರಿಸಿದ ಕ್ರೌರ್ಯಕ್ಕಾಗಿ" ಎಂದು ನ್ಯಾಯಾಧೀಶ ಪೀಟರ್ ಹೇಳಿದರು.

ಶಿಕ್ಷೆ ಕುರಿತು ಪ್ರತಿಕ್ರಿಯೆ ನೀಡಿರುವ ಜಾರ್ಜ್ ಫ್ಲಾಯ್ಡ್ ಕುಟುಂಬದ ವಕೀಲ ಬೆನ್ ಕ್ರಂಪ್ ಅವರು, ಈ ಶಿಕ್ಷೆ ಅಮೆರಿಕದಲ್ಲಿ ಜನಾಂಗೀಯ ಸಾಮರಸ್ಯದ ನಿಟ್ಟಿನಲ್ಲಿ ಐತಿಹಾಸಿಕ ಹೆಜ್ಜೆ ಎಂದು ಬಣ್ಣಿಸಿದ್ದಾರೆ.

ಕಳೆದ ವರ್ಷ ಮೇ 25 ರಂದು ಫ್ಲಾಯ್ಡ್‌ ಅವರನ್ನು ಪೊಲೀಸ್‌ ಅಧಿಕಾರಿ ಡೆರೆಕ್‌ ಚೌವಿನ್‌ 9 ನಿಮಿಷ ಮೊಣಕಾಲಿನಿಂದ ತುಳಿದು ಅಮಾನವೀಯವಾಗಿ ವರ್ತಿಸಿದ್ದರು. ಈ ಮೂಲಕ ಕಪ್ಪುವರ್ಣೀಯ ವ್ಯಕ್ತಿಯ ಹತ್ಯೆಗೆ ಕಾರಣರಾಗಿದ್ದರು.

ಪ್ಲಾಯ್ಡ್‌ ಸಾವು ಅಮೆರಿಕಾದೆಲ್ಲೆಡೆ ವ್ಯಾಪಕ ಪ್ರತಿಭಟನೆ, ಹಿಂಸಾಚಾರಕ್ಕೆ ಕಾರಣವಾಗಿತ್ತು. ಮಾತ್ರವಲ್ಲದೆ, ಜನಾಂಗೀಯ ಭೇದಭಾವದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com