ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಸಹಕರಿಸುವಂತೆ ಭಾರತಕ್ಕೆ ಪಾಕಿಸ್ತಾನ ಕೋರ್ಟ್ ಸೂಚನೆ!

ಮರಣದಂಡನೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಇಸ್ಲಾಮಾಬಾದ್ ಹೈಕೋರ್ಟ್, ಕುಲಭೂಷಣ್ ಜಾಧವ್ಅವರ ಕಾನೂನು ಪ್ರಕ್ರಿಯೆಗಳಿಗೆ ಸಹಕರಿಸುವಂತೆ ಭಾರತಕ್ಕೆ ಸೂಚಿಸಿದೆ ಮತ್ತು ಪ್ರಕರಣದ ವಿಚಾರಣೆಗೆ ಹಾಜರಾಗುವುದರಿಂದಸಾರ್ವಭೌಮತ್ವಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಹೇಳಿದೆ.
ಕುಲಭೂಷಣ್ ಜಾಧವ್
ಕುಲಭೂಷಣ್ ಜಾಧವ್
Updated on

ಇಸ್ಲಾಮಾಬಾದ್: ಮರಣದಂಡನೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಇಸ್ಲಾಮಾಬಾದ್ ಹೈಕೋರ್ಟ್, ಕುಲಭೂಷಣ್ ಜಾಧವ್
ಅವರ ಕಾನೂನು ಪ್ರಕ್ರಿಯೆಗಳಿಗೆ ಸಹಕರಿಸುವಂತೆ ಭಾರತಕ್ಕೆ ಸೂಚಿಸಿದೆ ಮತ್ತು ಪ್ರಕರಣದ ವಿಚಾರಣೆಗೆ ಹಾಜರಾಗುವುದರಿಂದ
ಸಾರ್ವಭೌಮತ್ವಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಅಥರ್ ಮಿನಾಲಾ, ನ್ಯಾಯಮೂರ್ತಿ ಆಮರ್ ಫಾರೂಕ್ ಮತ್ತು ನ್ಯಾಯಮೂರ್ತಿ ಮಿಯಾಂಗುಲ್ ಹಸನ್ ಔರಂಗಜೇಬ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಜಾಧವ್ ಪರ ವಕೀಲರನ್ನು ನೇಮಕ ಕೋರಿ ಪಾಕಿಸ್ತಾನದ ಕಾನೂನು ಮತ್ತು ನ್ಯಾಯ ಸಚಿವಾಲಯದ ಅರ್ಜಿಯ ವಿಚಾರಣೆಯನ್ನು ಪುನರಾರಂಭಿಸಿದೆ.

ಕಳೆದ ವರ್ಷ ‌ಅಂತರರಾಷ್ಟ್ರೀಯ ನ್ಯಾಯಾಲಯ(ಐಸಿಜೆ) ನೀಡಿರುವ ತೀರ್ಪನ್ನು ಗಮನದಲ್ಲಿಟ್ಟುಕೊಂಡು ಜಾಧವ್‌ಗೆ ಕಾನೂನುಬದ್ಧ ಪರಿಹಾರವನ್ನು ಪಡೆಯಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪಾಕಿಸ್ತಾನವು ಸುಗ್ರೀವಾಜ್ಞೆ ಹೊರಡಿಸಿತ್ತು ಎಂದು ಪಾಕಿಸ್ತಾನ ಅಟಾರ್ನಿ ಜನರಲ್‌ ಖಾಲೀದ್‌ ಜಾವೇದ್‌ ಖಾನ್‌ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಭಾರತ ಸರ್ಕಾರವು ಉದ್ದೇಶಪೂರ್ವಕವಾಗಿ ನ್ಯಾಯಾಲಯದ ವಿಚಾರಣೆಯಲ್ಲಿ ಭಾಗವಹಿಸುವುದರಿಂದ ತಪ್ಪಿಸಿಕೊಳ್ಳುತ್ತಿದೆ, ಪಾಕಿಸ್ತಾನದ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗಲು ಆಕ್ಷೇಪ ವ್ಯಕ್ತಪಡಿಸುತ್ತಿದೆ ಮತ್ತು ವಕೀಲರ ನೇಮಕಕ್ಕೂ ನಿರಾಕರಿಸಿದೆ ಎಂದು ಜಾವೇದ್ ಖಾನ್ ವಾದಿಸಿದರು ಎಂದು ಡೌನ್‌ ಪತ್ರಿಕೆಯು ವರದಿ ಮಾಡಿದೆ.

ಕುಲಭೂಷಣ್‌ ಜಾಧವ್‌ ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ಕ್ರಮಗಳಲ್ಲಿ ಭಾಗಿಯಾಗಲು ಭಾರತ ಸರ್ಕಾರ ಹಿಂದೇಟು ಹಾಕುತ್ತಿದೆ. ಪಾಕಿಸ್ತಾನದಲ್ಲಿ ವಿಚಾರಣೆಗೆ ಹಾಜರಾಗುವುದು ದೇಶದ ಸಾರ್ವಭೌಮತೆಯನ್ನು ತ್ಯಜಿಸುವುದಕ್ಕೆ ಸಮಾನವಾಗಿದೆ ಎಂಬ ಕಾರಣ ನೀಡಿರುವ ಭಾರತ, ಐಎಚ್‌ಸಿ ಪ್ರಕ್ರಿಯೆಗಳಿಗಾಗಿ ವಕೀಲರನ್ನು ನೇಮಕ ಮಾಡಲು ನಿರಾಕರಿಸಿದೆ ಎಂದು ಜಾವೇದ್‌ ಖಾನ್‌ ಪೀಠಕ್ಕೆ ತಿಳಿಸಿದ್ದಾರೆ.

ಈ ರೀತಿ ವಿರೋಧ ವ್ಯಕ್ತಪಡಿಸುವ ಮೂಲಕ ಭಾರತವು ಈ ಪ್ರಕರಣವನ್ನು ಐಸಿಜೆಗೆ ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತಿದೆ ಎಂದು ಅವರು ದೂರಿದ್ದಾರೆ.

ನಾವು ಭಾರತದ ಸಾರ್ವಭೌಮತೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿಲ್ಲ. ಆದರೆ ಐಸಿಜೆ ನಿರ್ಧಾರವನ್ನು ಪಾಲಿಸಲು ನಾವು ಯಾವ ರೀತಿಯ ಪ್ರಕ್ರಿಯೆಯನ್ನು ನಡೆಸಬೇಕು ಎಂಬುದನ್ನು ಭಾರತವೇ ಹೇಳಲಿ ಎಂದು ಹೇಳಿ, ಕೋರ್ಟ್ ವಿಚಾರಣೆಯನ್ನು ಜೂನ್‌ 15ಕ್ಕೆ ಮುಂದೂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com