ತೆರಿಗೆ ಪಾವತಿ: ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಆದಾಯ ಇಳಿಕೆ!

ಅಮೆರಿಕಾ ಅಧ್ಯಕ್ಷ ಜೋ ಬೈಡನ್‌ ಅವರ ಆದಾಯದಲ್ಲಿ ಗಣನೀಯ ಇಳಿಕೆಯಾಗಿದೆ ಎಂದು ಹೇಳಲಾಗಿದೆ.
ಅಧ್ಯಕ್ಷ ಜೊ ಬೈಡನ್
ಅಧ್ಯಕ್ಷ ಜೊ ಬೈಡನ್
Updated on

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಜೋ ಬೈಡನ್‌ ಅವರ ಆದಾಯದಲ್ಲಿ ಗಣನೀಯ ಇಳಿಕೆಯಾಗಿದೆ ಎಂದು ಹೇಳಲಾಗಿದೆ.

ಅಮೆರಿಕಾ ಅಧ್ಯಕ್ಷ ಜೋಸೆಫ್ ಬೈಡೆನ್ ತಮ್ಮ ಆದಾಯ ವಿವರವನ್ನು ಬಹಿರಂಗ ಪಡಿಸಿದ್ದು, ಈ ವಿವರಗಳನ್ನು ಶ್ವೇತಭವನ ಬಿಡುಗಡೆ ಮಾಡಿದೆ. ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಮತ್ತು ಅವರ ಪತ್ನಿ ಜಿಲ್ ಬೈಡೆನ್ ಅವರ ಆದಾಯ ಕಳೆದ ವರ್ಷ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದಾಯ ತೆರಿಗೆ ಇಲಾಖೆಗೆ  ಸಲ್ಲಿಸಿದ ವಿವರಗಳಲ್ಲಿ ಈ ಅಂಶ ದೃಢಪಟ್ಟಿದೆ. ಬೈಡನ್‌ ದಂಪತಿಗಳು 2020 ವರ್ಷದಲ್ಲಿ 6 ಲಕ್ಷ ಡಾಲರ್‌ಗಳಿಸಿರುವುದಾಗಿ ಘೋಷಿಸಿಕೊಂಡಿದ್ದು, ಆದರೆ, ಅವರು ಮತ್ತೆ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ, 1 ಲಕ್ಷದ 57,000 ಡಾಲರ್‌ ಪಾವತಿಸಿದ್ದಾರೆ. ಶೇ. 25.9 ರಷ್ಟು ಆದಾಯ ತೆರಿಗೆ ಪಾವತಿಸಿದ್ದಾರೆ. ಬೈಡನ್‌  ಅವರ ಆದಾಯ ವಿವರ ಪ್ರಕಟಿಸಿರುವ ಶ್ವೇತ ಭವನ, ಅಮೆರಿಕಾ ಅಧ್ಯಕ್ಷರ ಸಂಪ್ರದಾಯವನ್ನು ಬೈಡನ್‌ ಮತ್ತೆ ಆಚರಣೆಗೆ ತಂದಿದ್ದಾರೆ ಎಂದು ಹೇಳಿದೆ.

ಬೈಡನ್‌ ದಂಪತಿಗಳ ಆದಾಯದಲ್ಲಿ ಕಳೆದ ವರ್ಷ ತೀವ್ರ ಕುಸಿತ ಕಂಡುಬಂದಿದೆ. 2019 ರಲ್ಲಿ ಇಬ್ಬರೂ ಸುಮಾರು ಹತ್ತು ಲಕ್ಷ ಡಾಲರ್ ಗಳಿಸಿದ್ದರು. ಭಾಷಣಗಳು, ಪುಸ್ತಕ ಮಾರಾಟದ ಮೂಲಕ ಅವರಿಗೆ ಆ ಆದಾಯ ಲಭಿಸಿತು. 2020 ರಲ್ಲಿ ಚುನಾವಣಾ ಪ್ರಚಾರಕ್ಕಾಗಿ ಹೆಚ್ಚಿನ ಸಮಯ ವಿನಿಯೋಗಿಸಿದ್ದರಿಂದ  ಅವರ ಆದಾಯ ಕುಸಿದಿದೆ. ಚುನಾವಣೆಯ ಸಮಯದಲ್ಲಿ, ಬೈಡನ್‌ 22 ವರ್ಷಗಳ ತಮ್ಮ ತೆರಿಗೆ ಸಲ್ಲಿಕೆ ವಿವರ ಬಿಡುಗಡೆ ಮಾಡಿದ್ದರು. 2020 ವರ್ಷದಲ್ಲಿ ಹತ್ತು ಚಾರಿಟಿಗಳಿಗೆ ಸುಮಾರು 30,000 ಡಾಲರ್‌ದೇಣಿಗೆ ನೀಡಿದ್ದರು. ದಂಪತಿಗಳಿಬ್ಬರೂ ಕಳೆದ 20 ವರ್ಷಗಳಲ್ಲಿ 70,000 ಡಾಲರ್‌ ದೇಣಿಗೆ ನೀಡಿದ್ದಾರೆ.

ಬೈಡನ್‌ 1.2 ಮಿಲಿಯನ್ ಡಾಲರ್‌, ಜಿಲ್ ಬೈಡನ್‌ 2.88 ಮಿಲಿಯನ್ ಡಾಲರ್‌ ಆದಾಯ ಘೋಷಿಸಿಕೊಂಡಿದ್ದಾರೆ. ಬೈಡೆನ್ ಅಮೆರಿಕಾ ಅಧ್ಯಕ್ಷರಾಗಿ 4 ಲಕ್ಷ ಡಾಲರ್‌ ವೇತನ ರೂಪದಲ್ಲಿ ಪಡೆಯುತ್ತಿದ್ದಾರೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಐದು ವರ್ಷಗಳ ಆಳ್ವಿಕೆಯಲ್ಲಿ ಆದಾಯ ತೆರಿಗೆ ವಿವರಗಳನ್ನು  ಎಂದೂ ಬಹಿರಂಗಪಡಿಸಿರಲಿಲ್ಲ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com