ಕದನ ವಿರಾಮ: ಗಾಜಾ ದಾಳಿಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 240ಕ್ಕೆ ಏರಿಕೆ

ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವೆ ಗಾಜಾ ಪಟ್ಟಿಯಲ್ಲಿ ನಡೆದ ಇತ್ತೀಚಿನ ಕದನಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 243ಕ್ಕೆ ಏರಿಕೆಯಾಗಿದ್ದು, ಇವರಲ್ಲಿ ಅನೇಕ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಗಾಜಾ ಆರೋಗ್ಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಗಾಜಾಪಟ್ಟಿ ಮೇಲೆ ಇಸ್ರೇಲ್ ನಿಂದ ಮಿಸೈಲ್ ಸ್ಟ್ರೈಕ್
ಗಾಜಾಪಟ್ಟಿ ಮೇಲೆ ಇಸ್ರೇಲ್ ನಿಂದ ಮಿಸೈಲ್ ಸ್ಟ್ರೈಕ್

ಗಾಜಾ ನಗರ: ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವೆ ಗಾಜಾ ಪಟ್ಟಿಯಲ್ಲಿ ನಡೆದ ಇತ್ತೀಚಿನ ಕದನಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 243ಕ್ಕೆ ಏರಿಕೆಯಾಗಿದ್ದು, ಇವರಲ್ಲಿ ಅನೇಕ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಗಾಜಾ ಆರೋಗ್ಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

‘ಈ ತಿಂಗಳ 10ರಂದು ಸಂಘರ್ಷ ಭುಗಿಲೆದ್ದಾಗಿನಿಂದ ಗಾಜಾ ಪಟ್ಟಿಯಲ್ಲಿ ಇಸ್ರೇಲ್‍ ನಡೆಸಿದ ವೈಮಾನಿಕ ದಾಳಿ ನಡೆಸಿತ್ತು. ಅಲ್ಲದೆ ಪಾಲೆಸ್ತೇನ್ ಬೆಂಬಲಿತ ಹಮಾಸ್ ಬಂಡುಕೋರರು ಕೂಡ ರಾಕೆಟ್ ದಾಳಿ ನಡೆಸಿದ್ದರು. ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ನಡೆಸಿದ ಈ ರಾಕೆಟ್ ದಾಳಿಯಲ್ಲಿ ಹಲವು ರಾಕೆಟ್ ಗಳು ಗಾಜಾಪಟ್ಟಿಯಲ್ಲಿ ಬಿದ್ದಿತ್ತು. ಹೀಗಾಗಿ ಇಲ್ಲಿ ಸಂಭವಿಸಿದ ದುರಂತಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 243ಕ್ಕೆ ಏರಿದೆ. ಈ ಪೈಕಿ 66 ಮಕ್ಕಳು ಮತ್ತು 39 ಮಹಿಳೆಯರು ಸೇರಿದ್ದಾರೆ. 1,910 ಜನರು ಗಾಯಗೊಂಡಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.

ಗುರುವಾರ ಗಾಜಾ ದಕ್ಷಿಣ ಭಾಗದ ಸುರಂಗವೊಂದರಿಂದ ಇಸ್ರೇಲ್‍ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ 9 ಪ್ಯಾಲೆಸ್ತೇನಿಯರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಪೂರ್ವ ಜೆರುಸಲೇಮ್‍ ನಲ್ಲಿ ಭುಗಿಲೆದ್ದ ಘರ್ಷಣೆಗಳು ಇಸ್ರೇಲ್ ಮತ್ತು ಪ್ಯಾಲೆಸ್ತೇನೀಯರ ನಡುವೆ ಗಾಜಾ ಪಟ್ಟಿಯಲ್ಲಿ ನಡೆದ ಭೀಕರ  ಹಿಂಸಾಚಾರಕ್ಕೆ ಕಾರಣವಾಗಿವೆ. ಪ್ಯಾಲೆಸ್ತೇನ್ ಉಗ್ರರು ಇಸ್ರೇಲ್‍ ಕಡೆಗೆ ಸಾವಿರಾರು ರಾಕೆಟ್‍ ಗಳನ್ನು ಹಾರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಗಾಜಾ ವಿರುದ್ಧ ಇಸ್ರೇಲ್‍ ದಾಳಿಗಳನ್ನು ನಡೆಸಿದೆ. ಇಸ್ರೇಲ್ ಕಡೆ 12 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಈ ಮಧ್ಯೆ, ಇಸ್ರೇಲ್ ಮತ್ತು ಹಮಾಸ್ ಇಸ್ಲಾಮಿಕ್‍ ಸಂಘಟನೆಯು ಈಜಿಪ್ಟ್ ಮಧ್ಯಸ್ಥಿಕೆಯಲ್ಲಿ ಕದನ ವಿರಾಮಕ್ಕೆ ಒಪ್ಪಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com