ಕೋವಿಡ್ ಸಂಬಂಧ ಡಬ್ಲ್ಯೂಹೆಚ್‌ಓ ಶ್ವೇತಪತ್ರ ಹೊರಡಿಸಲಿ: ಐಸಿಜೆ

ಕಾನೂನು ತಜ್ಞರ ಪ್ರಮುಖ ಸಂಘಟನೆಯಾದ ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ಜ್ಯೂರಿಸ್ಟ್ಸ್(ಐಸಿಜೆ) ಕೊರೋನ ಸಂಬಂಧ ಶ್ವೇತಪತ್ರವನ್ನು ಹೊರಡಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಗೆ(ಡಬ್ಲ್ಯುಹೆಚ್ಒ) ಮನವಿ ಮಾಡಿದೆ.
ಅದಿಶ್ ಸಿ ಅಗರವಾಲ್
ಅದಿಶ್ ಸಿ ಅಗರವಾಲ್

ನವದೆಹಲಿ: ಕಾನೂನು ತಜ್ಞರ ಪ್ರಮುಖ ಸಂಘಟನೆಯಾದ ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ಜ್ಯೂರಿಸ್ಟ್ಸ್ (ಐಸಿಜೆ) ಕೊರೋನ ಸಂಬಂಧ ಶ್ವೇತಪತ್ರವನ್ನು ಹೊರಡಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಗೆ(ಡಬ್ಲ್ಯುಹೆಚ್ಒ) ಮನವಿ ಮಾಡಿದೆ.

ಕೊರೋನಾ ವೈರಸ್ ನ ಹುಟ್ಟು,ಹರಡುವಿಕೆ ಸಂಬಂಧ ಶ್ವೇತಪತ್ರವನ್ನು ಹೊರಡಿಸುವ ಮೂಲಕ ವಿಶ್ವದಾದ್ಯಂತ ಉದ್ಭವಿಸುವ ಅನುಮಾನಗಳಿಗೆ ಮತ್ತು ಪ್ರಶ್ನೆಗಳಿಗೆ ಉತ್ತರಿಸಲು ಐಸಿಜೆ ಡಬ್ಲ್ಯುಹೆಚ್ಒ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದು,ಕೊರೋನಾಗೆ ಸಂಬಂಧಿಸಿದ ಎಲ್ಲಾ ವೈಜ್ಞಾನಿಕ ಮತ್ತು ವೈದ್ಯಕೀಯ ಮಾಹಿತಿ ಬಿಡುಗಡೆ ಮಾಡುವಂತೆ ಐಸಿಜೆ ಒತ್ತಾಯಿಸಿದೆ.

ಐಸಿಜೆ ಅಧ್ಯಕ್ಷ ಮತ್ತು ಹಿರಿಯ ವಕೀಲ ಆದಿಶ್ ಸಿ ಅಗರ್ವಾಲ್ ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೈರಸ್ ಮೂಲದ ಬಗ್ಗೆ ಹಲವು ಅನುಮಾನಗಳಿವೆ. ಇದು ಮಾತ್ರವಲ್ಲ, ಇದರ ಹರಡುವಿಕೆಯ ಬಗ್ಗೆ ವಿವಿಧ ವೈಜ್ಞಾನಿಕ, ವೈದ್ಯಕೀಯ ಮತ್ತು ಮಾಧ್ಯಮ ವರದಿಗಳು ಸಹ ಇಂತಹ ಭಯ ಮತ್ತು ಕಳವಳಗಳಿಗೆ ಕಾರಣವಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಡಬ್ಲ್ಯುಹೆಚ್ಒಗೆ ಮೇಲ್ಮನವಿ ಸಲ್ಲಿಸುವ ಐಸಿಜೆ ನಿರ್ಧಾರವು ವುಹಾನ್ ನ ಪ್ರಯೋಗಾಲಯದಲ್ಲಿ ಕೊರೋನಾ ಹುಟ್ಟಿಕೊಂಡಿದೆ ಎಂದು ವರದಿಯಾಗಿದೆ. ಕೊರೋನಾ ವೈರಸ್ ನ ಉಗಮದ ಬಗ್ಗೆ ವಿಶ್ವದಾದ್ಯಂತ ಉದ್ಭವಿಸುವ ಅನುಮಾನಗಳು ಮತ್ತು ಪ್ರಶ್ನೆಗಳಿಗೆ ಉತ್ತರಿಸಲು ಶ್ವೇತಪತ್ರವನ್ನು ನೀಡುವಂತೆ ಐಸಿಜೆ ಡಬ್ಲ್ಯುಎಚ್ಒಗೆ ಮನವಿ ಮಾಡಿದೆ. ಹೀಗಾಗಿ ಆ ಎಲ್ಲಾ ಮಾಹಿತಿಯನ್ನು ಶ್ವೇತಪತ್ರದಲ್ಲಿ ಬಿಡುಗಡೆ ಮಾಡಿದರೆ, ಅದು ಡಬ್ಲ್ಯೂಹೆಚ್ಒನ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ ಎಂದು ಅಗರ್ ವಾಲ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com