ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತೊಮ್ಮೆ ಮದುವೆ?: ಪ್ರೇಯಸಿ ಕ್ಯಾರಿ ಸೈಮಂಡ್ಸ್ ವರಿಸಿರುವ ಬಗ್ಗೆ ಮಾಧ್ಯಮಗಳು ವರದಿ 

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಪ್ರೇಯಸಿ ಕ್ಯಾರಿ ಸೈಮಂಡ್ಸ್ ಅವರನ್ನು ವೆಸ್ಟ್ ಮಿನ್ಟರ್ ಕ್ಯಾಥಡ್ರಲ್ ನಲ್ಲಿ ನಡೆದ ಗೌಪ್ಯ ಸಮಾರಂಭದಲ್ಲಿ ಮದುವೆಯಾಗಿದ್ದಾರೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಪ್ರೇಯಸಿಯೊಂದಿಗೆ
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಪ್ರೇಯಸಿಯೊಂದಿಗೆ
Updated on

ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಪ್ರೇಯಸಿ ಕ್ಯಾರಿ ಸೈಮಂಡ್ಸ್ ಅವರನ್ನು ವೆಸ್ಟ್ ಮಿನ್ಟರ್ ಕ್ಯಾಥಡ್ರಲ್ ನಲ್ಲಿ ನಡೆದ ಗೌಪ್ಯ ಸಮಾರಂಭದಲ್ಲಿ ಮದುವೆಯಾಗಿದ್ದಾರೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ದೇಶದ ಪ್ರಧಾನಿಯ ಈ ಸರಳ ಗೌಪ್ಯ ವಿವಾಹ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಕೊನೆಯ ಕ್ಷಣದಲ್ಲಿ ಆಹ್ವಾನಿಸಲಾಯಿತು ಎಂದು ಹೇಳಲಾಗುತ್ತಿದೆ. ಆದರೆ ಪ್ರಧಾನಿಯ ಮದುವೆ ಬಗ್ಗೆ ಅವರ ಕಚೇರಿಯ ಹಿರಿಯ ಅಧಿಕಾರಿಗಳಿಗೇ ಗೊತ್ತಿರಲಿಲ್ಲವಂತೆ. ಬೋರಿಸ್ ಜಾನ್ಸನ್ ಅವರ ಲಂಡನ್ ನ ಡೌನಿಂಗ್ ಸ್ಟ್ರೀಟ್ ಕಚೇರಿಯ ವಕ್ತಾರೆಯಲ್ಲಿ ಈ ಕುರಿತು ಮಾಧ್ಯಮಗಳು ಕೇಳಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಇಂಗ್ಲೆಂಡ್ ನಲ್ಲಿ ಸದ್ಯ ಕೋವಿಡ್ ನಿರ್ಬಂಧ ಹಿನ್ನೆಲೆಯಲ್ಲಿ ವಿವಾಹ ಕಾರ್ಯಕ್ರಮದಲ್ಲಿ ಕೇವಲ 30 ಮಂದಿ ಭಾಗವಹಿಸಲು ಮಾತ್ರ ಅವಕಾಶವಿದೆ. ನಿನ್ನೆ ಶನಿವಾರ ಲಂಡನ್ ನ ಸ್ಥಳೀಯ ಕಾಲಮಾನ 1.30ರ ಮಧ್ಯಾಹ್ನ ಹೊತ್ತಿಗೆ ಕ್ಯಾಥೊಲಿಕ್ ಕ್ಯಾಥಡ್ರಲ್ ಚರ್ಚ್ ನ್ನು ಹಠಾತ್ ಆಗಿ ಮುಚ್ಚಲಾಗಿತ್ತು.

ಆಗ ಬೋರಿಸ್ ಜಾನ್ಸನ್ ಅವರ ಪ್ರೇಯಸಿ 33 ವರ್ಷದ ಸೈಮಂಡ್ಸ್ ಉದ್ದದ ಬಿಳಿ ಬಣ್ಣದ ಲಿಮೊ ಧಿರಿಸಿನಲ್ಲಿ ಶಾಲು ಧರಿಸದೆ 30 ನಿಮಿಷ ಕಳೆದು ಆಗಮಿಸಿದರು. 56 ವರ್ಷದ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು 33 ವರ್ಷದ ಸೈಮಂಡ್ಸ್ 2019ರಲ್ಲಿ ಬೊರಿಸ್ ಪ್ರಧಾನಿಯಾದ ಬಳಿಕ ಲಂಡನ್ ನ ಡೌನಿಂಗ್ ಸ್ಟ್ರೀಟ್ ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ.

ಕಳೆದ ವರ್ಷ ತಾವು ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ ಎಂದು ಘೋಷಿಸಿಕೊಂಡಿದ್ದ ಜೋಡಿಗೆ ಕಳೆದ ವರ್ಷ ಏಪ್ರಿಲ್ ನಲ್ಲಿ ಗಂಡು ಮಗು ಜನಿಸಿತ್ತು. ಅದಕ್ಕೆ ವಿಲ್ಫ್ರೆಡ್ ಲಾರಿ ನಿಕೋಲಸ್ ಜಾನ್ಸನ್ ಎಂದು ಹೆಸರಿಟ್ಟಿದ್ದರು.

ವೈಯಕ್ತಿಕ ಬದುಕಿನಲ್ಲಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಸರಿಯಿಲ್ಲವೆಂದು ಬ್ರಿಟನ್ ನ ಟ್ಯಾಬ್ಲ್ಯಾಡ್ ಮಾಧ್ಯಮ ಅವರನ್ನು ಬಾಂಕಿಂಗ್ ಬೊರಿಸ್ ಎಂದು ಕರೆದಿತ್ತು. ಅವರ ವಿವಾಹೇತರ ಸಂಬಂಧಗಳನ್ನು ವಿರೋಧಿಸಿ ಸಾಂಪ್ರದಾಯಿಕ ಪಕ್ಷದ ನೀತಿ ತಂಡ ಬೊರಿಸ್ ಅವರನ್ನು ಒಂದು ಬಾರಿ ಹೊರದಬ್ಬಿತ್ತು.

ಇದಕ್ಕೂ ಮುನ್ನ ಎರಡು ಬಾರಿ ವಿಚ್ಛೇದನ ಪಡೆದಿದ್ದ ಬೊರಿಸ್ ತಮಗೆ ಎಷ್ಟು ಮಕ್ಕಳು ಎಂದು ಎಲ್ಲಿಯೂ ಸರಿಯಾಗಿ ಹೇಳಿಕೊಂಡಿಲ್ಲ. ಕಳೆದ ಬಾರಿ ವಿವಾಹವಾಗಿದ್ದ ಮರಿನಾ ವೀಲರ್ ಎಂಬ ವಕೀಲೆಯಿಂದ ಬೋರಿಸ್ ನಾಲ್ಕು ಮಕ್ಕಳನ್ನು ಪಡೆದಿದ್ದರು. ಕೊನೆಗೆ 2018ರ ಸೆಪ್ಟೆಂಬರ್ ನಲ್ಲಿ ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com