ಭಾರತೀಯ ಮೂಲದ ಉದ್ಯಮಿ ಯೂಸುಫಾಲಿಗೆ ಅಬುಧಾಬಿಯ ಅತ್ಯುನ್ನತ ನಾಗರಿಕ ಪ್ರಶಸ್ತಿ 

ಅಬುಧಾಬಿ ದೊರೆ  ಮತ್ತು ಯುಎಇ ಸಶಸ್ತ್ರ ಪಡೆಗಳ ಉಪ ಸುಪ್ರೀಂ ಕಮಾಂಡರ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್,  ಭಾರತೀಯ ಮೂಲದ ಉದ್ಯಮಿ ಯೂಸುಫಾಲಿ ಎಂಎ ಮತ್ತು ಇತರ 11 ವ್ಯಕ್ತಿಗಳಿಗೆ ಸಮುದಾಯಕ್ಕೆ ನೀಡಿದ ಉದಾತ್ತ ಮತ್ತು ದತ್ತಿ ಕೊಡುಗೆಗಳಿಗಾಗಿ ಅಬುಧಾಬಿಯ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಅಬುದಾಬಿ ದೊರೆ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಯೂಸುಫಾಲಿ
ಅಬುದಾಬಿ ದೊರೆ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಯೂಸುಫಾಲಿ

ದುಬೈ: ಅಬುಧಾಬಿ ದೊರೆ  ಮತ್ತು ಯುಎಇ ಸಶಸ್ತ್ರ ಪಡೆಗಳ ಉಪ ಸುಪ್ರೀಂ ಕಮಾಂಡರ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್,  ಭಾರತೀಯ ಮೂಲದ ಉದ್ಯಮಿ ಯೂಸುಫಾಲಿ ಎಂಎ ಮತ್ತು ಇತರ 11 ವ್ಯಕ್ತಿಗಳಿಗೆ ಸಮುದಾಯಕ್ಕೆ ನೀಡಿದ ಉದಾತ್ತ ಮತ್ತು ದತ್ತಿ ಕೊಡುಗೆಗಳಿಗಾಗಿ ಅಬುಧಾಬಿಯ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಅನೇಕ ದೇಶಗಳಲ್ಲಿ ಹೈಪರ್‌ ಮಾರ್ಕೆಟ್‌ ಮತ್ತು ಚಿಲ್ಲರೆ ಕಂಪನಿಗಳನ್ನು ನಡೆಸುತ್ತಿರುವ ಅಬುಧಾಬಿ ಮೂಲದ ಲುಲು ಗ್ರೂಪ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಯೂಸುಫಾಲಿ (65) ಅವರನ್ನು ಶುಕ್ರವಾರ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರಧಾನ ಮಾಡುವ ಮೂಲಕ ಗೌರವಿಸಲಾಯಿತು.

ಯುಎಇಯ ಮೌಲ್ಯಗಳು ನಮ್ಮ ಸಂಸ್ಥಾಪಕ ತಂದೆ ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಆಳವಾದ ನಂಬಿಕೆಯನ್ನು ಪ್ರತಿಬಿಂಬಿಸುತ್ತಲೇ ಇರುತ್ತವೆ, ಅವರು ಜನರ ದಯೆ, ಮಾನವೀಯತೆ ಮತ್ತು  ಔದಾರ್ಯದಲ್ಲಿ ನಂಬಿಕೆ ಹೊಂದಿದ್ದರು. ಇಂದು, ನಾವು ಈ ಅಸಾಧಾರಣ ವ್ಯಕ್ತಿಗಳನ್ನು  ಆಯ್ಕೆ ಮಾಡಿಕೊಂಡು ನಮ್ಮ ದೇಶ ಮತ್ತು ಸಮುದಾಯಗಳನ್ನು ಬಲಪಡಿಸುತ್ತೇವೆ ಎಂದು ಶೇಖ್ ಮೊಹಮ್ಮದ್ ಹೇಳಿದರು. 

ಅಬುಧಾಬಿಯ ವ್ಯವಹಾರ, ಉದ್ಯಮ ಮತ್ತು ವಿವಿಧ ಲೋಕೋಪಕಾರಿ ಕಾರ್ಯಕ್ರಮಗಳಿಗೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಕೇರಳದಲ್ಲಿ ಜನಿಸಿದ ಯೂಸುಫಾಲಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಲುಲು ಗ್ರೂಪ್ ಪ್ರಕಟಣೆಯಲ್ಲಿ ತಿಳಿಸಿದೆ.

"ನನ್ನ ಜೀವನದಲ್ಲಿ ಬಹಳ ಹೆಮ್ಮೆ ಮತ್ತು ಭಾವನಾತ್ಮಕ ಕ್ಷಣ. ಕಳೆದ 47 ವರ್ಷಗಳಿಂದ ವಾಸಿಸುತ್ತಿರುವ ಅಬುಧಾಬಿಯಿಂದ ಅಂತಹ ದೊಡ್ಡ ಗೌರವವನ್ನು ಸ್ವೀಕರಿಸಲು ತುಂಬಾ ಸಂತೋಷವಾಗುತ್ತಿದೆ ಎಂದು ಪ್ರಶಸ್ತಿ ಪಡೆದ ನಂತರ ಯೂಸುಫಾಲಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com