ಶೀಘ್ರದಲ್ಲೇ ಕೋವಿಡ್-19 ಸೋಂಕು ಕೂಡ ಜ್ವರ, ಶೀತದಂತೆ ಮಕ್ಕಳಲ್ಲಿ ಸಾಮಾನ್ಯವಾಗಲಿದೆ: ತಜ್ಞರ ವರದಿ

ಶೀಘ್ರದಲ್ಲೇ ಕೋವಿಡ್-19 ಸೋಂಕು ಕೂಡ ಜ್ವರ, ಶೀತ, ಕೆಮ್ಮು ನೆಗಡಿಯಂತೆ ಮಕ್ಕಳಲ್ಲಿ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿ ಕಾಡಲಿದೆ ಎಂದು ಸಂಶೋಧಕರು ಆಘಾತಕಾರಿ ಮಾಹಿತಿ ಹೊರ ಹಾಕಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ಶೀಘ್ರದಲ್ಲೇ ಕೋವಿಡ್-19 ಸೋಂಕು ಕೂಡ ಜ್ವರ, ಶೀತ, ಕೆಮ್ಮು ನೆಗಡಿಯಂತೆ ಮಕ್ಕಳಲ್ಲಿ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿ ಕಾಡಲಿದೆ ಎಂದು ಸಂಶೋಧಕರು ಆಘಾತಕಾರಿ ಮಾಹಿತಿ ಹೊರ ಹಾಕಿದ್ದಾರೆ.

ಅಮೆರಿಕಾ ಮತ್ತು ನೈಜೀರಿಯಾದ ಸಂಶೋಧಕರು ಜಂಟಿಯಾಗಿ ನಡೆಸಿದ ಸಂಶೋಧನೆಯ ಮಾಹಿತಿ ಇದೀಗ ಹೊರಬಿದ್ದಿದ್ದು, 'ಮುಂದಿನ ಕೆಲವು ವರ್ಷಗಳಲ್ಲಿ ಮಕ್ಕಳಲ್ಲಿ ಕೋವಿಡ್ ಸೋಂಕು ಸಾಮಾನ್ಯವಾಗಿ ಕಂಡುಬರುವ ಸೋಂಕಿನ ರೋಗ ಲಕ್ಷಣ ಆಗಲಿದೆ. ಪ್ರಸ್ತುತ ಮಕ್ಕಳಲ್ಲಿ ಹೇಗೆ ಶೀತ, ನೆಗಡಿ, ಕೆಮ್ಮು ಸೇರಿದಂತೆ ಇನ್ನಿತರೆ ಸೋಂಕಿನ ಲಕ್ಷಣಗಳು ಮಕ್ಕಳನ್ನು ಬಾಧಿಸುತ್ತಿರುತವೆಯೋ ಅಂತೆಯೇ ಕೋವಿಡ್-19 ಸೋಂಕು ಕೂಡ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರಲಿದೆ ಎಂದು ಹೇಳಿದ್ದಾರೆ.

ನಾರ್ವೆಯ ಓಸ್ಲೋ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಒಟ್ಟರ್ ಬೋಜರ್ ಸ್ಟಾಂಡ್ ಮತ್ತು ಅವರ ಸಂಶೋಧಕ ತಂಡ ನಡೆಸಿದ ಅಧ್ಯಯನದಲ್ಲಿ ವಿಷಯವನ್ನು ತಿಳಿಸಿದ್ದು, ಮುಂದಿನ ಕೆಲವು ವರ್ಷಗಳಲ್ಲಿ ಮಕ್ಕಳು ಮತ್ತು ಹದಿ ಹರೆಯದ ವಯೋಮಾನದ ಮಕ್ಕಳಲ್ಲಿ ಸೋಂಕಿನ ಲಕ್ಷಣಗಳು ಸಾಮಾನ್ಯವಾಗಿ ಕಂಡು ಬರಲಿದೆ ಎಂದು ಹೇಳಿದೆ.

ಸಂಶೋಧಕ ತಂಡ ತಾವು ನಡೆಸಿದ ಅಧ್ಯಯನದ ಮಾಹಿತಿಯನ್ನು ವಿಜ್ಞಾನಕ್ಕೆ ಸಂಬಂಧಿಸಿದ ನಿಯತಕಾಲಿಕದಲ್ಲಿ ಈ ವಿಷಯವನ್ನು ಬಹಿರಂಗ ಪಡಿಸಿದ್ದು, ಕೊರೊನಾ ಸೋಂಕು ಮುಂದಿನ ದಿನಗಳಲ್ಲಿ ಕಡಿಮೆಯಾದರೂ ಮಕ್ಕಳು ಮತ್ತು ಹದಿಹರೆಯದ ಜನರಲ್ಲಿ ಸಾಮಾನ್ಯವಾಗಿ ಕಂಡುಬರುವ ರೋಗಲಕ್ಷಣಗಳ ಆಗಲಿದೆ. ಅದರಲ್ಲೂ 7 ರಿಂದ 12 ತಿಂಗಳ ವಯೋಮಾನದ ಮಕ್ಕಳು ಮತ್ತು 70 ವರ್ಷ ದಾಟಿದವರ ವಿಚಾರದಲ್ಲಿ ಈ ರೀತಿಯ ಸಮಸ್ಯೆಗಳು ಕಂಡು ಬರಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಲಸಿಕೆಯೊಂದೇ ದಾರಿ
ಇನ್ನು ಮಕ್ಕಳಲ್ಲಿ ಕಂಡುಬರುವ ಕೋವಿಡ್ ಸೋಂಕಿಗೆ ಲಸಿಕೆಯೊಂದೇ ದಾರಿ ಎಂದೂ ಹೇಳಿರುವ ತಜ್ಞರು ನಿಯಮಿತವಾಗಿ ಮಕ್ಕಳಗಿ ಲಸಿಕೆ ಹಾಕಿಸುವುದರಿಂದ ಸೋಂಕನ್ನು ನಿಯಂತ್ರಿಸಬಹುದು ಎಂದು ಹೇಳಿದ್ದಾರೆ. 

ಸಂಶೋಧಕರು ಕ್ರಮವಾಗಿ 1, 10 ಮತ್ತು 20 ವರ್ಷಗಳ ಮಾದರಿಯಲ್ಲಿ ತಕ್ಷಣ, ಮಧ್ಯಮ ಮತ್ತು ದೀರ್ಘಾವಧಿಯಲ್ಲಿ ರೋಗದ ಹೊರೆಯನ್ನು ವಿಶ್ಲೇಷಿಸಿದ್ದಾರೆ. ಇದಕ್ಕಾಗಿ ವಿಜ್ಞಾನಿಗಳು ಚೀನಾ, ಜಪಾನ್, ದಕ್ಷಿಣ ಕೊರಿಯಾ, ಸ್ಪೇನ್, ಯುಕೆ, ಫ್ರಾನ್ಸ್, ಜರ್ಮನಿ, ಇಟಲಿ, ಅಮೆರಿಕ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ 11 ವಿವಿಧ ದೇಶಗಳಿಲ್ಲಿನ ರೋಗದ ಹೊರೆ (ಡಿಸೀಸ್ ಬರ್ಡನ್-disease burden)ಗಳನ್ನು ಪರೀಕ್ಷಿಸಿದ್ದಾರೆ.  
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com