ತಾಲಿಬಾನ್ ಕಮಾಂಡರ್ ಅಫ್ಘಾನಿಸ್ತಾನದ ನೂತನ ಅಧ್ಯಕ್ಷ: ಶಾಂತಿಯುತವಾಗಿ ಅಧಿಕಾರ ಬಿಟ್ಟುಕೊಟ್ಟ ಅಶ್ರಫ್ ಘನಿ

ತಾಲಿಬಾನ್ ಕಮಾಂಡರ್ ಮುಲ್ಲಾ ಅಬ್ದುಲ್ ಘನಿ ಮುಂದಿನ ಅಫ್ಘಾನಿಸ್ತಾನದ ನೂತನ ಅಧ್ಯಕ್ಷರಾಗಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.  ಅಧ್ಯಕ್ಷ ಅಶ್ರಫ್ ಘನಿ ತಮ್ಮ ಸ್ಥಾನವನ್ನು ಕೆಲ ಕ್ಷಣಗಳ ಹಿಂದಷ್ಟೇ ಅಧಿಕಾರ ತ್ಯಜಿಸಿದರೆಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾಬೂಲ್: ತಾಲಿಬಾನ್ ಕಮಾಂಡರ್ ಮುಲ್ಲಾ ಅಬ್ದುಲ್ ಘನಿ ಮುಂದಿನ ಅಫ್ಘಾನಿಸ್ತಾನದ ನೂತನ ಅಧ್ಯಕ್ಷರಾಗಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.  ಅಧ್ಯಕ್ಷ ಅಶ್ರಫ್ ಘನಿ ತಮ್ಮ ಸ್ಥಾನವನ್ನು ಕೆಲ ಕ್ಷಣಗಳ ಹಿಂದಷ್ಟೇ ಅಧಿಕಾರ ತ್ಯಜಿಸಿದರೆಂದು ತಿಳಿದುಬಂದಿದೆ. 

ಇದೇ ವೇಳೆ ಶಸ್ತ್ರಸಜ್ಜಿತ ತಾಲಿಬಾನ್ ಬಂಡುಕೋರರು ಕಾಬೂಲಿನ ಹೊರವಲಯದಲ್ಲೇ ಇರುವಂತೆ ಅವರಿಗೆ ಸೂಚನೆ ನೀಡಿರುವುದಾಗಿ ತಾಲಿಬಾನ್ ವಕ್ತಾರರು ತಿಳಿಸಿದ್ದಾರೆ. ಆದರೆ ಕೆಲ ತಾಲಿಬಾನಿ ಬಂಡುಕೋರರು ಕಾಬೂಲ್ ನಗರವನ್ನು ಶಾಂತಿಯುತವಾಗಿ ಪ್ರವೇಶಿಸಿದರು ಎಂದು ನಿವಾಸಿಗಳು ತಿಳಿಸಿದ್ದಾರೆ.

ಅಫ್ಘಾನಿಸ್ತಾನದ ಗೃಹಸಚಿವ ಅಬ್ದುಲ್ ಸತ್ತಾರ್ ಅವರು ತಾಲಿಬಾನ್ ಗೆ ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಮಾಡುವುದಾಗಿ ತಿಳಿಸಿದ್ದಾರೆ. ತಾಲಿಬಾನ್ ಬಂಡುಕೋರರು ಅಫ್ಘಾನಿಸ್ತಾನ ರಾಜಧಾನಿ ಕಾಬೂಲಿಗೆ ನುಗ್ಗಿ ದಾಳಿ ನಡೆಸುವರೆಂಬ ಭೀತಿ ಎದುರಾಗಿತ್ತು. ಆ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು. ಅದನ್ನು ಮನಗಂಡು ಅಬ್ದುಲ್ ಸತ್ತಾರ್ ಅವರು ತಾಲಿಬಾನ್ ಕಾಬೂಲ್ ಪ್ರವೇಶಿಸಿದಲ್ಲಿ ಆಫ್ಘನ್ ಭದ್ರತಾ ಪಡೆಗಳು ಕಾದಾತ ನಡೆಸುವುದಿಲ್ಲ ಎನ್ನುವ ಸುಳಿವನ್ನು ನೀಡಿದ್ದರು.

ದೇಶದ ಚುಕ್ಕಾಣಿ ಹಿಡಿಯಲು ತಾಲಿಬಾನ್ ಸಂಧಾನಕಾರರು ಮತ್ತು ನಾಯಕರು ಅಧ್ಯಕ್ಷರ ನಿವಾಸಕ್ಕೆ ತೆರಳಿರುವುದಾಗಿ ತಿಳಿದುಬಂದಿದೆ. 

ಅಮೆರಿಕ ತನ್ನ ರಾಜತಾಂತ್ರಿಕ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕಾಬೂಲಿನಿಂದ ಹಿಂದಕ್ಕೆ ಕರೆಸಿಕೊಂಡಿದೆ. ರಷ್ಯಾ ಕಾಬೂಲಿನಲ್ಲಿನ ತನ್ನ ರಾಜತಾಂತ್ರಿಕ ಅಧಿಕಾರಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದಿಲ್ಲ ಎಂದು ತಿಳಿಸಿದೆ.

ಕಳೆದ 2 ದಶಕಗಳಿಂದ ಅಮೆರಿಕ ಸೇನೆಯಿಂದ ತರಬೇತುಗೊಂಡಿದ್ದ ಆಫ್ಘನ್ ಭದ್ರತಾಪಡೆಗಳು ತಾಲಿಬಾನ್ ಎದುರು ಸೋತು ಸುಣ್ಣವಾಗಿರುವುದು ಅಚ್ಚರಿಗೆ ಕಾರಣವಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com