ಆಫ್ಘನ್ ಸೈನಕ್ಕೆ ಶತಕೋಟಿ ಖರ್ಚು ಮಾಡಿದ್ದರೂ ತಾಲಿಬಾನ್ ಗೆ ಅಂತಿಮ ಲಾಭ!

ಎರಡು ದಶಕಗಳಲ್ಲಿ ಸುಮಾರು 83 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚದಲ್ಲಿ ಅಭಿವೃದ್ಧಿ ಮತ್ತು ತರಬೇತಿ ಪಡೆದಿದ್ದ ಆಫ್ಘನ್ ಭದ್ರತಾ ಪಡೆಗಳು ಅಂತಿಮವಾಗಿ ಕುಸಿದವು. ಪರಿಣಾಮ ಅಮೆರಿಕ ಹೂಡಿಕೆಯ ಲಾಭ ತಾಲಿಬಾನ್ ಪಾಲಾಯಿತು.
ತಾಲಿಬಾನ್ ಉಗ್ರರು
ತಾಲಿಬಾನ್ ಉಗ್ರರು

ವಾಷಿಂಗ್ಟನ್: ಎರಡು ದಶಕಗಳಲ್ಲಿ ಸುಮಾರು 83 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚದಲ್ಲಿ ಅಭಿವೃದ್ಧಿ ಮತ್ತು ತರಬೇತಿ ಪಡೆದಿದ್ದ ಆಫ್ಘನ್ ಭದ್ರತಾ ಪಡೆಗಳು ಅಂತಿಮವಾಗಿ ಕುಸಿದವು. ಪರಿಣಾಮ ಅಮೆರಿಕ ಹೂಡಿಕೆಯ ಲಾಭ ತಾಲಿಬಾನ್ ಪಾಲಾಯಿತು. ತಾಲಿಬಾನ್ ರಾಜಕೀಯ ಅಧಿಕಾರವನ್ನು ಮಾತ್ರ ಪಡೆದಿದಿಲ್ಲ, ಅಮೆರಿಕ ಪೂರೈಸಿದ್ದ ಪ್ರಬಲ ಶಕ್ತಿಯುತವಾದ ಗನ್ ಗಳು, ಮದ್ದುಗುಂಡುಗಳು, ಹೆಲಿಕಾಪ್ಟರ್ ಗಳು ಮತ್ತು ಇನ್ನೂ ಹೆಚ್ಚಿನವೂ ಸೇರಿವೆ.

ಆಘ್ಫಾನ್ ಗೆ ಅಮೆರಿಕ ಪೂರೈಸಿದ್ದ ಯುದ್ದೋಪಕರಣಗಳು ಹಠಾತ್ತನೇ ತಾಲಿಬಾನ್ ಕೈ ಸೇರಿದೆ ಎಂದು ಅಮೆರಿಕದ ರಕ್ಷಣಾ ಅಧಿಕಾರಿ ಸೋಮವಾರ ಖಚಿತಪಡಿಸಿದ್ದಾರೆ. ಈ ವಿಚಾರವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳದ ಅಧಿಕಾರಿ, ಅನಾಮಧೇಯತೆಯ ಸ್ಥಿತಿಯಲ್ಲಿ ಮಾತನಾಡಿದ್ದಾರೆ. ಅಮೆರಿಕದ ಮಿಲಿಟರಿ ಪಡೆಗಳಿಂದ ಪೂರೈಸಲಾಗಿದ್ದ ವಾಹನಗಳು, ಯುದ್ದೋಪಕರಣಗಳನ್ನು ಅಫ್ಘಾನ್ ಸರ್ಕಾರ ತಾಲಿಬಾನ್ ಗೆ ವಶಕ್ಕೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ. 

ಸುಸ್ಥಿರ ಅಫ್ಘಾನ್ ಸೇನೆ ಮತ್ತು ಪೋಲೀಸ್ ಪಡೆ ರೂಪಿಸುವಲ್ಲಿ ಯುಎಸ್ ವೈಫಲ್ಯ ಮತ್ತು ಅವರ ಪತನದ ಕಾರಣಗಳನ್ನು ಮಿಲಿಟರಿ ವಿಶ್ಲೇಷಕರು ವರ್ಷಗಳ ಕಾಲ ಅಧ್ಯಯನ ಮಾಡಿದ್ದಾರೆ. ಆದಾಗ್ಯೂ, ಮೂಲ ಆಯಾಮಗಳು ಸ್ಪಷ್ಟವಾಗಿವೆ ಮತ್ತು ಇರಾಕ್‌ನಲ್ಲಿ ನಡೆದಂತೆ ಭಿನ್ನವಾಗಿಲ್ಲ. ಪಡೆಗಳು ಟೊಳ್ಳಾಗಿ ಬದಲಾಗಿದ್ದು, ಯುದ್ಧ ಪ್ರೇರಣೆಯ ನಿರ್ಣಾಯಕ ಅಂಶವನ್ನು ಹೆಚ್ಚಾಗಿ ಕಳೆದುಕೊಂಡಿವೆ.

ಹಣವು ಇಚ್ಛೆಯನ್ನು ಖರೀದಿಸಲು ಸಾಧ್ಯವಿಲ್ಲ. ನೀವು ನಾಯಕತ್ವವನ್ನು ಖರೀದಿಸಲು ಸಾಧ್ಯವಿಲ್ಲ ಎಂದು  ರಕ್ಷಣಾ ಕಾರ್ಯದರ್ಶಿ ಮುಖ್ಯ ವಕ್ತಾರ ಲಾಯ್ಡ್ ಆಸ್ಟಿನ್  ಜಾನ್ ಕಿರ್ಬಿ ಸೋಮವಾರ ಹೇಳಿದರು. ಅಫ್ಘಾನಿಸ್ತಾನ ಪುನರ್ ರಚನೆ ವಿಶೇಷ ಇನ್ಸ್ ಪೆಕ್ಟರ್ ಜನರಲ್ ಪ್ರಕಾರ, ಅಫ್ಘಾನಿಸ್ತಾನ ಸೇನೆ ಮತ್ತು ಪೊಲೀಸ್ ಪಡೆ ಅಭಿವೃದ್ಧಿಗಾಗಿ ಕಳೆದ 20 ವರ್ಷಗಳಲ್ಲಿ  83 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚ ಮಾಡಲಾಗಿದೆ.  

ಯುಎಸ್ ತರಬೇತುದಾರರು ಅಫ್ಘಾನ್ ಪಡೆಗಳ ಮೇಲೆ ಪಾಶ್ಚಿಮಾತ್ಯ ಮಾರ್ಗಗಳನ್ನು ಹೇರಲು ಪ್ರಯತ್ನಿಸಿದರು, ಅಫ್ಘಾನ್ ಸೇನಾ ಕಾರ್ಯದಕ್ಷತೆ ಮೇಲೆ ಅಮೆರಿಕ ಯುದ್ಧ ತಂತ್ರ ಅವಲಂಬಿತವಾಗಿತ್ತು ಆದಾಗ್ಯೂ, ಅಫ್ಘಾನ್ ಪಡೆಗಳು ತಮ್ಮ ಸರ್ಕಾರಕ್ಕೆ ಪ್ರಾಣ ಕೊಡಲು ಸಿದ್ಧರಿದ್ದಾರೆಯೇ ಎಂಬ ಪ್ರಶ್ನೆಯ ಕಡೆಗೆ ಪೆಂಟಗಾನ್ ಗಮನ ನೀಡಿತ್ತು ಎಂದು ದಿ ಅಫ್ಘಾನಿಸ್ತಾನ ಪೇಪರ್ಸ್" ಎಂಬ ತನ್ನ ಪುಸ್ತಕದಲ್ಲಿ, ಪತ್ರಕರ್ತ ಕ್ರೇಗ್ ವಿಟ್ಲಾಕ್ ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com