ಅಮೆರಿಕಕ್ಕೆ ಸಹಾಯ ಮಾಡಿದವರನ್ನು ತಾಲಿಬಾನ್ ಬೇಟೆಯಾಡುತ್ತಿದೆ: ವಿಶ್ವ ಸಂಸ್ಥೆ ವರದಿ ಬಹಿರಂಗ

ಅಮೆರಿಕ ಮತ್ತು ರಷ್ಯಾ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಹೋರಾಟ ಮಾಡಿರುವ ರಾಷ್ಟ್ರಗಳಾಗಿವೆ. ಮೂರು ಬಲಾಢ್ಯ ದೇಶಗಳಲ್ಲಿ ತಾಲಿಬಾನ್ ವಿರುದ್ಧ ಇದುವರೆಗೂ ಕಾದಾಡದ ದೇಶವೆಂದರೆ ಚೀನಾ. ಹೀಗಾಗಿ ಚೀನಾ ತಾಲಿಬಾನ್ ಜೊತೆ ಉತ್ತಮ ಬಾಂಧವ್ಯ ಹೊಂದುವ ಸಾಧ್ಯತೆ ಹೆಚ್ಚಾಗಿದೆ
ಕಾಬೂಲಿನಲ್ಲಿ ತಾಲಿಬಾನಿಗಳ ಕಾವಲು
ಕಾಬೂಲಿನಲ್ಲಿ ತಾಲಿಬಾನಿಗಳ ಕಾವಲು

ಜಿನೇವಾ: ಅಫ್ಘಾನಿಸ್ತಾನದಲ್ಲಿ ಕಳೆದ 20 ವರ್ಷಗಳಿಂದ ನೆಲೆಸಿದ್ದ ಅಮೆರಿಕ ಸೈನಿಕರಿಗೆ ಸಹಾಯ ಮಾಡಿದ ಸ್ಥಳೀಯರನ್ನು ತಾಲಿಬಾನ್ ಬೇಟೆಯಾಡುತ್ತಿರುವುದಾಗಿ ವಿಶ್ವಸಂಸ್ಥೆಯ ಗೌಪ್ಯ ವರದಿ ತಿಳಿಸಿದೆ. ಕಳೆದ ಭಾನುವಾರ ತಾಲಿಬಾನ್ ಕಾಬೂಲ್ ಅನ್ನು ವಶಪಡಿಸಿಕೊಳ್ಳುತ್ತಲೇ ದೇಶ ತೊರೆಯಲು ನಾಗರಿಕರು ಮುಂದಾಗಿದ್ದು, ಈಗಲೂ ಪರಿಸ್ಥಿತಿ ಮುಂದುವರಿದಿದೆ. ತಾಲಿಬಾನ್ ಸರ್ಪಗಾವಲಿನ ನಡುವೆಯೂ ನಾಗರಿಕರು ವಿಮಾನನಿಲ್ದಾಣಕ್ಕೆ ಕಾಲ್ನಡಿಗೆಯಲ್ಲಿ ಧಾವಿಸುತ್ತಿದ್ದಾರೆ. ದೇಶ ತೊರೆಯುವ ಸಣ್ಣ ಅವಕಾಶವಾದರೂ ಸಿಕ್ಕಿತೇನೋ ಎಂಬ ಆಸೆಯಿಂದ.

ಕಳೆದ ಭಾನುವಾರದಿಂದ ಇಂದಿನವರೆಗೆ 12 ಮಂದಿಯನ್ನು ತಾಲಿಬಾನ್ ಕೊಂದು ಹಾಕಿದೆ ಎಂದು ತಿಳಿದುಬಂದಿದೆ. ಅಲ್ಲದೆ ಕಳೆದ ೫ ದಿನಗಳ ಅವಧಿಯಲ್ಲಿ 18,000 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಗುರುವಾರ ದೇಶಾದ್ಯಂತ ತಾಲಿಬಾನ್ ಸ್ವಾತಂತ್ರ್ಯ ದಿನವನ್ನು ಆಚರಿಸಿದೆ. ಈ ಸಂಭ್ರಮಾಚರಣೆಯಲ್ಲಿ ತಾನು ಜಗತ್ತಿನ ಬಲಾಢ್ಯ ಶಕ್ತಿಯನ್ನು ಮಣಿಸಿದೆ ಎಂದು ಘೋಷಿಸಿಕೊಂಡಿದೆ. ಇದೇ ವೇಳೆ ಚೀನಾ ಮಾಧ್ಯಮದೊಂದಿಗೆ ಮಾತನಾಡಿದ ತಾಲಿಬಾನ್ ವಕ್ತಾರ ಸುಹೈಲ್ ಶಹೀನ್, ಚೀನಾ ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಗೆ ಸಕಾರಾತ್ಮಕ ಕೆಲಸ ನಿರ್ವಹಿಸಿದೆ ಎಂದಿದ್ದಾರೆ.

ಪ್ರಸ್ತುತ ಸಂದರ್ಭ ಅಮೆರಿಕ ಮತ್ತು ರಷ್ಯಾಗೆ ಹೋಲಿಸಿದಲ್ಲಿ ಚೀನಾ ತಾಲಿಬಾನ್ ಜೊತೆ ಉತ್ತಮ ಬಾಂಧವ್ಯ ಹೊಂದುವ ಸಾಧ್ಯತೆ ಹೆಚ್ಚಾಗಿದೆ ಎಂದು ರಾಜಕೀಯ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಅಮೆರಿಕ ಮತ್ತು ರಷ್ಯಾ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಹೋರಾಟ ಮಾಡಿರುವ ರಾಷ್ಟ್ರಗಳಾಗಿವೆ. ಮೂರು ಬಲಾಢ್ಯ ದೇಶಗಳಲ್ಲಿ ತಾಲಿಬಾನ್ ವಿರುದ್ಧ ಇದುವರೆಗೂ ಕಾದಾಡದ ದೇಶವೆಂದರೆ ಚೀನಾ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com