ತಾಲಿಬಾನ್ ಮುಷ್ಟಿಯಲ್ಲಿರುವ ಕಾಬೂಲ್ ನಿಂದ ಹೊರಟಿದ್ದ ಯುಕ್ರೇನ್ ವಿಮಾನ ಇರಾನ್ ಗೆ ಹೈಜಾಕ್!

ಸ್ಥಳಾಂತರ ಕಾರ್ಯಾಚರಣೆಗೆಂದು ತೆರಳಿದ್ದ ತಮ್ಮ ದೇಶದ ವಿಮಾನವನ್ನು ಮೊದಲು ಹೈಜಾಕ್ ಮಾಡಿ ಕಳವು ಮಾಡಲಾಗಿದೆಯೆಂದು ಯುಕ್ರೇನ್ ಡೆಪ್ಯುಟಿ ವಿದೇಶಾಂಗ ಸಚಿವರು ಆರೋಪಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಟೆಹ್ರಾನ್: ಕಾಬೂಲಿನಲ್ಲಿ ಸಿಲುಕಿಕೊಂಡಿದ್ದ ತನ್ನ ನಾಗರಿಕರನ್ನು ಸ್ವದೇಶಕ್ಕೆ ಕರೆತರುತ್ತಿದ್ದ ಯುಕ್ರೇನ್ ವಿಮಾನವನ್ನು ಹೈಜಾಕ್ ಮಾಡಲಾಗಿದೆ ಎನ್ನುವ ಸುದ್ದಿ ಆತಂಕ ಸೃಷ್ಟಿಸಿದೆ.  

ವಿಮಾನದಲ್ಲಿ ಎಷ್ಟು ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿಲ್ಲ. ಅಲ್ಲದೆ ಯಾವೆಲ್ಲ ದೇಶಗಳ ನಾಗರಿಕರು ವಿಮಾನದಲ್ಲಿದ್ದರು ಎನ್ನುವುದೂ ಬಹಿರಂಗವಾಗಿಲ್ಲ. ಹೈಜಾಕ್ ಮಾಡಲಾದ ವಿಮಾನವನ್ನು ಇರಾನಿನಲ್ಲಿ ಇಳಿಸಲಾಗಿದೆ ಎನ್ನುವ ಮಾಹಿತಿಯಷ್ಟೇ ಸದ್ಯ ಲಭ್ಯವಾಗಿದೆ. 

ಘಟನೆಯ ಕುರಿತು ಇಂದು ಯುಕ್ರೇನ್ ಡೆಪ್ಯುಟಿ ವಿದೇಶಾಂಗ ಸಚಿವ ಯೆನಿನ್ ಅವರು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ. ಭಾನುವಾರ ಯುಕ್ರೇನ್ ನಾಗರಿಕರನ್ನು ಸ್ಥಳಾಂತರ ಮಾಡಲು ವಿಮಾನ ಕಾಬೂಲ್ ತಲುಪಿತ್ತು. ಯುಕ್ರೇನ್ ನಾಗರಿಕರಿಗೆ ಬದಲಾಗಿ ಅಪರಿಚಿತ ಪ್ರಯಾಣಿಕರು ವಿಮಾನದೊಳಕ್ಕೆ ನುಗ್ಗಿದ್ದರು. ನಂತರ ವಿಮಾನವನ್ನು ಇರಾನಿಗೆ ಕೊಂಡೊಯ್ಯಲಾಯಿತು. 

ಇದೀಗ ವಿಮಾನ ಎಲ್ಲಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ ಎಂದು ಸಚಿವರು ಹೇಳಿದ್ದಾರೆ. ತಮ್ಮ ದೇಶದ ವಿಮಾನವನ್ನು ಮೊದಲು ಹೈಜಾಕ್ ಮಾಡಿ ಕಳವು ಮಾಡಲಾಗಿದೆಯೆಂದು ಅವರು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com