ಅಮೆರಿಕ ತನ್ನ ವಸ್ತುಗಳನ್ನು ನಾಶ ಮಾಡಲೆಂದೇ ಸ್ವಯಂ ದಾಳಿ ನಡೆಸಿದೆ: ತಾಲಿಬಾನ್

ಅಮೆರಿಕ ತನ್ನ ವಸ್ತುಗಳನ್ನು ನಾಶ ಮಾಡಲೆಂದೇ ಸ್ವಯಂ ಬಾಂಬ್ ದಾಳಿ ನಡೆಸಿದೆ ಎಂದು ಆಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಂಡಿರುವ ತಾಲಿಬಾನ್ ಹೇಳಿದೆ.
ಕಾಬುಲ್ ವಿಮಾನ ನಿಲ್ಗಾಣದ ಬಳಿ ಸ್ಫೋಟ
ಕಾಬುಲ್ ವಿಮಾನ ನಿಲ್ಗಾಣದ ಬಳಿ ಸ್ಫೋಟ

ಕಾಬೂಲ್: ಅಮೆರಿಕ ತನ್ನ ವಸ್ತುಗಳನ್ನು ನಾಶ ಮಾಡಲೆಂದೇ ಸ್ವಯಂ ಬಾಂಬ್ ದಾಳಿ ನಡೆಸಿದೆ ಎಂದು ಆಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಂಡಿರುವ ತಾಲಿಬಾನ್ ಹೇಳಿದೆ.

ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಸಂಭವಿಸಿದ ಸ್ಫೋಟಗಳಲ್ಲಿ ಅಮೆರಿಕ ಸೈನಿಕರೂ ಸೇರಿದಂತೆ 60 ಕ್ಕೂ ಹೆಚ್ಚು ಮಂದಿಯ ಜೀವಗಳನ್ನು ಬಲಿ ತೆಗೆದುಕೊಂಡಿದ್ದು, ಅಮೆರಿಕ ಪಡೆಗಳ ವಸ್ತುಗಳನ್ನು ನಾಶಮಾಡಲು ಈ ದಾಳಿ ನಡೆಸಲಾಗಿದೆ ಎಂದು ತಾಲಿಬಾನ್ ವಕ್ತಾರರು ಹೇಳಿದ್ದಾರೆ.

"ಕಾಬೂಲ್‌ನಲ್ಲಿ ಸಂಜೆ ಹಲವಾರು ಸ್ಫೋಟಗಳು ಕೇಳಿಬಂದವು. ಕಾಬೂಲ್ ವಿಮಾನ ನಿಲ್ದಾಣದ ಒಳಗೆ ಅಮೆರಿಕ ಪಡೆಗಳ ವಸ್ತುಗಳನ್ನು ನಾಶ ಮಾಡಲು ಸ್ಫೋಟಗಳನ್ನು ನಡೆಸಿದ್ದವು.  ಈ ಸ್ಫೋಟದಿಂದ ಕಾಬೂಲ್ ನಿವಾಸಿಗಳು ಚಿಂತಿಸಬೇಡಿ" ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಟ್ವೀಟ್ ಮಾಡಿದ್ದಾರೆ.

ವಿಮಾನ ನಿಲ್ದಾಣದ ಹೊರಗೆ ಅವಳಿ ಆತ್ಮಹತ್ಯಾ ಬಾಂಬ್ ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಕಾಬೂಲ್ ನಗರದಲ್ಲಿ ಕನಿಷ್ಠ ಏಳು ಕಡೆಗಳಲ್ಲಿ ಸ್ಫೋಟಗಳು ಸಂಭವಿಸಿವೆ. ಇದು ಅಮೆರಿಕ ಸೈನಿಕರು ಸೇರಿದಂತೆ 60 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತು.

ಇನ್ನು ಮೊದಲ ಸ್ಫೋಟ ಸಂಭವಿಸಿದ ಕೆಲವೇ ನಿಮಿಷಗಳ ಅಂತರದಲ್ಲಿ 2ನೇ ಸ್ಫೋಟ ಸಂಭವಿಸಿದ್ದು, ಇದರ ಬೆನ್ನಲ್ಲೇ ಮತ್ತೆ 6 ಸ್ಫೋಟಗಳು ವಿವಿಧೆಡೆಯಿಂದ ವರದಿಯಾಗಿದೆ. ನಾನು ಇದನ್ನು ಬರೆಯುತ್ತಿರುವಾಗ ಇನ್ನೊಂದು ಅಂದರೆ 7ನೇ ಸ್ಫೋಟದ ಶಬ್ಧ ಕೇಳಿಸಿತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಗುರುವಾರ ನಡೆದ ಅವಳಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಪೈಕಿ ನಾಲ್ಕು ಅಮೆರಿಕ ನೌಕಾಪಡೆ ಸೈನಿಕರು ಸೇರಿದ್ದಾರೆ. ಮೊದಲ ಸ್ಫೋಟವು ಕಾಬೂಲ್ ವಿಮಾನ ನಿಲ್ದಾಣದ ಅಬ್ಬೆ ಗೇಟ್‌ನಲ್ಲಿ ವರದಿಯಾದರೆ, ಎರಡನೆಯದು ಬ್ಯಾರನ್ ಹೋಟೆಲ್ ಬಳಿ ಸಂಭವಿಸಿತು.

ಇದೇ ವಿಚಾರವಾಗಿ ಮಾಹಿತಿ ನೀಡಿದ್ದ ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಜಾನ್ ಕಿರ್ಬಿ ಅವರು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಇಂದು ನಡೆದ ಉಗ್ರರ ಸ್ಫೋಟ ದಾಳಿಯಲ್ಲಿ "ಹಲವಾರು ಅಮೆರಿಕನ್ ಸೈನಿಕರು" ಸಾವನ್ನಪ್ಪಿದ್ದಾರೆ ಎಂದು ಹೇಳಿದರು.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು, ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದರು ಮತ್ತು ಸ್ಫೋಟದ ಸಂತ್ರಸ್ತರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com