ಅಮೆರಿಕಾದಲ್ಲಿ ಮೊದಲ ಓಮಿಕ್ರಾನ್ ಪ್ರಕರಣ ಪತ್ತೆ: ದಕ್ಷಿಣ ಆಫ್ರಿಕಾದಿಂದ ವಾಪಸಾದ ವ್ಯಕ್ತಿಯಲ್ಲಿ ಸೋಂಕು!
ಅಮೆರಿಕದಲ್ಲಿ ಮೊದಲ ಓಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು, ಪ್ರತಿಯೊಬ್ಬ ನಾಗರಿಕನೂ ಲಸಿಕೆ ಪಡೆಯುವಂತೆ ವೈಟ್‌ಹೌಸ್ ಮನವಿ ಮಾಡಿದೆ.
Published: 02nd December 2021 10:14 AM | Last Updated: 02nd December 2021 01:47 PM | A+A A-

ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಅಮೆರಿಕದಲ್ಲಿ ಮೊದಲ ಓಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು, ಪ್ರತಿಯೊಬ್ಬ ನಾಗರಿಕನೂ ಲಸಿಕೆ ಪಡೆಯುವಂತೆ ವೈಟ್‌ಹೌಸ್ ಮನವಿ ಮಾಡಿದೆ. ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿದ್ದ ಕೋವಿಡ್ ರೂಪಾಂತರಿ 'ಒಮಿಕ್ರೋನ್' ಅಮೆರಿಕಾದಲ್ಲೂ ಪತ್ತೆಯಾಗಿದೆ.
ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದ ವ್ಯಕ್ತಿಯಲ್ಲಿ ಓಮಿಕ್ರಾನ್ ಪತ್ತೆಯಾಗಿದೆ ಎಂದು ಅಮೆರಿಕಾ ದೃಢಪಡಿಸಿದೆ. ಅಮೆರಿಕಾದಲ್ಲಿ ಓಮಿಕ್ರಾನ್ ಕಂಡುಬಂದ ಬೆನ್ನಲ್ಲೆ ಶ್ವೇತ ಭವನ ಪ್ರಕಟಣೆ ಹೊರಡಿಸಿದ್ದು, ದೇಶವಾಸಿಗಳು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದೆ.
ಓಮಿಕ್ರಾನ್ ರೂಪಾಂತರಿ ವಿಶ್ವದಾದ್ಯಂತ ಭೀತಿ ಮೂಡಿಸಿದ್ದು, ಈ ಸೋಂಕು ಹರಡುವುದನ್ನು ತಡೆಯಲು ಎಲ್ಲ ದೇಶಗಳು ಕಠಿಣ ಕ್ರಮ ಕೈಗೊಳ್ಳುತ್ತಿವೆ. ಕ್ಯಾಲಿಫೋರ್ನಿಯಾದಲ್ಲಿರುವ ವ್ಯಕ್ತಿಯಲ್ಲಿ ಹೊಸ ರೂಪಾಂತರಿ ಕಂಡುಬಂದಿದೆ. ಸೋಂಕಿತ ಈಗಾಗಲೇ ಕೋವಿಡ್ ಲಸಿಕೆ ಪಡೆದಿದ್ದಾರೆ ಎಂದು ಯುಎಸ್ ಅಧ್ಯಕ್ಷರ ಮುಖ್ಯ ವೈದ್ಯಕೀಯ ಸಲಹೆಗಾರ ಡಾ.ಆಂಥೋನಿ ಪೌಸಿ ಮಾಹಿತಿ ನೀಡಿದ್ದಾರೆ.
ಈ ಸೋಂಕಿತ ನ.22 ರಂದು ದಕ್ಷಿಣ ಆಫ್ರಿಕಾದಿಂದ ಬಂದಿದ್ದು, ನ.19 ರಂದು ಕೋವಿಡ್ ಪಾಸಿಟಿವ್ ಕಂಡುಬಂದಿತ್ತು. ಸೋಂಕಿತ ಸ್ವಯಂ ಕ್ವಾರಂಟೈನ್ ಆಗಿದ್ದಾರೆ. ಇವರ ಸಂಪರ್ಕಿತರ ವರದಿ ನೆಗೆಟಿವ್ ಬಂದಿದೆ ಎಂದು ಇವರು ತಿಳಿಸಿದ್ದಾರೆ. ಕೊರೊನಾ ಹೊಸ ರೂಪಾಂತರವಾದ ಓಮಿಕ್ರಾನ್, ಬ್ರಿಟನ್, ಆಸ್ಟ್ರೇಲಿಯಾ, ಜರ್ಮನಿ ಸೇರಿದಂತೆ 13 ದೇಶಗಳನ್ನು ತಲುಪಿದ್ದು ಭೀತಿ ಸೃಷ್ಟಿಸಿದೆ.