ಕೋವಿಡ್ ರೂಪಾಂತರ ಓಮಿಕ್ರಾನ್ ನಿಂದ ಡೆಲ್ಟಾಗಿಂತ 3 ಪಟ್ಟು ಹೆಚ್ಚು ಮರುಸೋಂಕು ಸಾಧ್ಯತೆ: ಅಧ್ಯಯನ

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿ ಜಗತ್ತಿನಾದ್ಯಂತ ವ್ಯಾಪಿಸುತ್ತಿರುವ ಕೋರೋನಾ ವೈರಸ್ ನ ನೂತನ ರೂಪಾಂತರ ಓಮಿಕ್ರಾನ್, ಈ ಹಿಂದಿನ ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಮರು ಸೋಂಕು ಉಂಟುಮಾಡಬಹುದು ಎಂದು ತಜ್ಞರು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿ ಜಗತ್ತಿನಾದ್ಯಂತ ವ್ಯಾಪಿಸುತ್ತಿರುವ ಕೋರೋನಾ ವೈರಸ್ ನ ನೂತನ ರೂಪಾಂತರ ಓಮಿಕ್ರಾನ್, ಈ ಹಿಂದಿನ ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಮರು ಸೋಂಕು ಉಂಟುಮಾಡಬಹುದು ಎಂದು ತಜ್ಞರು ಹೇಳಿದ್ದಾರೆ.

ಗುರುವಾರ ಪ್ರಕಟವಾದ ದಕ್ಷಿಣ ಆಫ್ರಿಕಾದ ವಿಜ್ಞಾನಿಗಳ ಪ್ರಾಥಮಿಕ ಅಧ್ಯಯನವು ಡೆಲ್ಟಾ ಅಥವಾ ಬೀಟಾ ತಳಿಗಳಿಗೆ ಹೋಲಿಸಿದರೆ ಓಮಿಕ್ರಾನ್ ರೂಪಾಂತರವು ಮರು ಸೋಂಕುಗಳನ್ನು ಉಂಟುಮಾಡುವ ಸಾಧ್ಯತೆ ಮೂರು ಪಟ್ಟು ಹೆಚ್ಚು ಎಂದು ಹೇಳಲಾಗಿದೆ. ಸಂಶೋಧನಾಕಾರರು ದಕ್ಷಿಣ ಆಫ್ರಿಕಾದ ಆರೋಗ್ಯ ವ್ಯವಸ್ಥೆಯಿಂದ ಸಂಗ್ರಹಿಸಿದ ದತ್ತಾಂಶವನ್ನು ಆಧರಿಸಿ ಈ ಸಂಶೋಧನೆ ನಡೆಸಿದ್ದು, ಮೊದಲಿನ ಸೋಂಕಿನಿಂದ ವಿನಾಯಿತಿಯನ್ನು ತಪ್ಪಿಸುವ ಓಮಿಕ್ರಾನ್ ಸಾಮರ್ಥ್ಯದ ಬಗ್ಗೆ ಮೊದಲ ಸೋಂಕುಶಾಸ್ತ್ರದ ಪುರಾವೆಗಳನ್ನು ಒದಗಿಸುತ್ತದೆ. ಈ ಸಂಶೋಧನಾ ವರದಿಯನ್ನು ವೈದ್ಯಕೀಯ ಪ್ರಿಪ್ರಿಂಟ್ ಸರ್ವರ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು ಇದನ್ನು ಪ್ರೀ-ರಿವ್ಯೂ ಮಾಡಲಾಗಿಲ್ಲ.

ನವೆಂಬರ್ 27 ರವರೆಗೆ 2.8 ಮಿಲಿಯನ್ ಕೋವಿಡ್ ಪರೀಕ್ಷೆಗಳಲ್ಲಿ 35,670  ವ್ಯಕ್ತಿಗಳಲ್ಲಿ ಶಂಕಿತ ಮರು ಸೋಂಕುಗಳು ಕಂಡುಬಂದಿವೆ. ಅವರು 90 ದಿನಗಳ ಅಂತರದಲ್ಲಿ ಧನಾತ್ಮಕ ಪರೀಕ್ಷೆ ಮಾಡಿದರೆ ಪ್ರಕರಣಗಳನ್ನು ಮರು ಸೋಂಕು ಎಂದು ಪರಿಗಣಿಸಲಾಗುತ್ತದೆ ಎಂದು ತಜ್ಞರೊಬ್ಬರು ಹೇಳಿದ್ದಾರೆ.

ಇನ್ನು ಸಂಶೋಧನಾ ತಂಡದಲ್ಲಿದ್ದ ಕ್ಷಿಣ ಆಫ್ರಿಕಾದ DSI-NRF ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಎಪಿಡೆಮಿಯೋಲಾಜಿಕಲ್ ಮಾಡೆಲಿಂಗ್ ಮತ್ತು ಅನಾಲಿಸಿಸ್‌ನ ನಿರ್ದೇಶಕ ಜೂಲಿಯೆಟ್ ಪುಲ್ಲಿಯಂ ಅವರು ಇದೀ ವಿಚಾರವಾಗಿ ಟ್ವೀಟ್ ಮಾಡಿದ್ದು, 'ಎಲ್ಲಾ ಅಲೆಗಳಲ್ಲಿ ಪ್ರಾಥಮಿಕ ಸೋಂಕುಗಳು ಸಂಭವಿಸಿದ ವ್ಯಕ್ತಿಗಳಲ್ಲಿ ಇತ್ತೀಚಿನ ಮರು ಸೋಂಕುಗಳು ಸಂಭವಿಸಿವೆ. ಹೆಚ್ಚಿನವರು ಡೆಲ್ಟಾ ರೂಪಾಂತರದಲ್ಲೇ ತಮ್ಮ ಪ್ರಾಥಮಿಕ ಸೋಂಕನ್ನು ಹೊಂದಿದ್ದಾರೆ. ಅಂತೆಯೇ ಈ ಸಂಶೋಧನೆಯಲ್ಲಿ ವ್ಯಾಕ್ಸಿನೇಷನ್ ಸ್ಥಿತಿಯ ಬಗ್ಗೆ ಮಾಹಿತಿಯನ್ನು ಹೊಂದಿಲ್ಲ ಮತ್ತು ಆದ್ದರಿಂದ ಓಮಿಕ್ರಾನ್ ಲಸಿಕೆ-ಪ್ರೇರಿತ ಪ್ರತಿರಕ್ಷೆಯನ್ನು ತಪ್ಪಿಸುತ್ತದೆ ಎಂಬುದನ್ನು ನಿರ್ಣಯಿಸಲು ಸಾಧ್ಯವಿಲ್ಲ. ಮುಂಚಿನ ಸೋಂಕಿನ ಇತಿಹಾಸ ಹೊಂದಿರುವ ವ್ಯಕ್ತಿಗಳನ್ನು ಒಳಗೊಂಡಂತೆ ಓಮಿಕ್ರಾನ್ ಸೋಂಕಿನೊಂದಿಗೆ ಸಂಬಂಧಿಸಿದ ರೋಗದ ತೀವ್ರತೆಯ ಮೇಲೆ ದತ್ತಾಂಶ ಪರಿಶೀಲೆಯ ತುರ್ತು ಅಗತ್ಯವಿದೆ ಎಂದು ಪುಲ್ಲಿಯಂ ಎಚ್ಚರಿಸಿದ್ದಾರೆ.  

ಘಾತೀಯ ಏರಿಕೆ
ಇದಕ್ಕೂ ಮೊದಲು, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಕಮ್ಯುನಿಕೆಬಲ್ ಡಿಸೀಸ್‌ನ ಪರಿಣಿತ ದಕ್ಷಿಣ ಆಫ್ರಿಕಾದ ಉನ್ನತ ವಿಜ್ಞಾನಿ ಅನ್ನಿ ವಾನ್ ಗಾಟ್‌ಬರ್ಗ್ ಅವರು,  'ದೇಶದ ಎಲ್ಲಾ ಪ್ರಾಂತ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಘಾತೀಯವಾಗಿ ಹೆಚ್ಚಾಗುತ್ತದೆ. ಲಸಿಕೆಗಳು ಇನ್ನೂ ತೀವ್ರವಾದ ಕಾಯಿಲೆಯಿಂದ ರಕ್ಷಿಸುತ್ತವೆ ಎಂದು ನಾವು ನಂಬುತ್ತೇವೆ. ಲಸಿಕೆಗಳು ಯಾವಾಗಲೂ ಗಂಭೀರವಾದ ಕಾಯಿಲೆ, ಆಸ್ಪತ್ರೆಗೆ ದಾಖಲು ಮತ್ತು ಸಾವಿನ ವಿರುದ್ಧ ರಕ್ಷಣೆ ನೀಡುತ್ತವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com