ಸಾಂಕ್ರಾಮಿಕ ಅಂತ್ಯವನ್ನು ಜಗತ್ತು ಹೇಗೆ ನಿರ್ಧರಿಸುತ್ತದೆ?

ಕೋವಿಡ್-18 ಸಾಂಕ್ರಾಮಿಕ ಯಾವಾಗ ಆರಂಭವಾಯಿತು, ಯಾವಾಗ ಅಂತ್ಯಗೊಳ್ಳುತ್ತದೆ ಮತ್ತು ದೇಶಗಳಿಂದ ಹರಡಿ ಜಾಗತಿಕವಾಗಿ ಹೇಗೆ ಭೀತಿಯನ್ನುಂಟು ಮಾಡಿತ್ತು ಎಂಬುದಕ್ಕೆ ಸ್ಪಷ್ಟ ವ್ಯಾಖ್ಯಾನ ಇಲ್ಲ. ಕೋವಿಡ್ ಅಂತ್ಯವನ್ನು ಜಗತ್ತು ಹೇಗೆ ನಿರ್ಧರಿಸುತ್ತದೆ?
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್:  ಕೋವಿಡ್-18 ಸಾಂಕ್ರಾಮಿಕ ಯಾವಾಗ ಆರಂಭವಾಯಿತು, ಯಾವಾಗ ಅಂತ್ಯಗೊಳ್ಳುತ್ತದೆ ಮತ್ತು ದೇಶಗಳಿಂದ ಹರಡಿ ಜಾಗತಿಕವಾಗಿ ಹೇಗೆ ಭೀತಿಯನ್ನುಂಟು ಮಾಡಿತ್ತು ಎಂಬುದಕ್ಕೆ ಸ್ಪಷ್ಟ ವ್ಯಾಖ್ಯಾನ ಇಲ್ಲ. ಕೋವಿಡ್ ಅಂತ್ಯವನ್ನು ಜಗತ್ತು ಹೇಗೆ ನಿರ್ಧರಿಸುತ್ತದೆ?

ಇದು ಕೇವಲ ಪ್ರಕರಣಗಳ ಸಂಖ್ಯೆ ಅಲ್ಲ, ಇದು ಸಾಂಕ್ರಾಮಿಕದ ತೀವ್ರತೆ ಮತ್ತು ಅದರ ಪರಿಣಾಮದ ಬಗ್ಗೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಮರ್ಜೆನ್ಸಿ ಚೀಪ್ ಮೈಕೆಲ್ ರಯಾನ್ ಹೇಳುತ್ತಾರೆ. ಅಂತಾರಾಷ್ಟ್ರೀಯ ಹಿತದೃಷ್ಟಿಯಿಂದ ಜನವರಿ 2020ರಲ್ಲಿ ಸಾಂಕ್ರಾಮಿಕವನ್ನು ಜಾಗತಿಕ ಆರೋಗ್ಯ ಬಿಗ್ಗಟ್ಟು ಎಂದು ಘೋಷಿತ್ತು. 

ಒಂದೆರಡು ತಿಂಗಳ ನಂತರ ಮಾರ್ಚ್‌ನಲ್ಲಿ, ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆ ಏಕಾಏಕಿ 'ಸಾಂಕ್ರಾಮಿಕ' ಎಂದು ಕರೆದಿತ್ತು. ಈ ವೈರಸ್ ಪ್ರತಿಯೊಂದು ಖಂಡಕ್ಕೂ ಹರಡಿದೆ ಎಂಬ ಅಂಶವನ್ನು ಪ್ರತಿಬಿಂಬಿಸಿತ್ತು.  ಇದೇ ರೀತಿಯಲ್ಲಿ  ಹಲವಾರು ಇತರ ಆರೋಗ್ಯ ಅಧಿಕಾರಿಗಳು ಹೇಳುತ್ತಿರುವುದಾಗಿ ಹೇಳಿತ್ತು. 

ವೈರಸ್ ಇನ್ನು ಮುಂದೆ ಅಂತರರಾಷ್ಟ್ರೀಯ ಕಾಳಜಿಯ ತುರ್ತುಸ್ಥಿತಿಯಲ್ಲ ಎಂದು ಡಬ್ಲ್ಯೂಹೆಚ್ ಒ ನಿರ್ಧರಿಸಿದಾಗಅದರ ತಜ್ಞರ ಸಮಿತಿಯು ಪ್ರತಿ ಮೂರು ತಿಂಗಳಿಗೊಮ್ಮೆ ಮರುಮೌಲ್ಯಮಾಪನ ಮಾಡುತ್ತಿದೆ. ಆದರೆ ದೇಶಗಳಲ್ಲಿ ಬಿಕ್ಕಟ್ಟಿನ ಅತ್ಯಂತ ತೀವ್ರವಾದ ಹಂತಗಳು ಬದಲಾಗಬಹುದು.

ಯಾರೋ ಒಬ್ಬರು ಸಾಂಕ್ರಾಮಿಕ ಮುಗಿಯಿತು ಎಂದು ಹೇಳಿದರೆ ಒಂದೇ ದಿನಕ್ಕೆ ಅದು ಹೋಗುವುದಿಲ್ಲ ಎಂದು ಡ್ಯೂಕ್ ವಿವಿಯ ಸಾಂಕ್ರಾಮಿಕ ರೋಗ ತಜ್ಞ ಕ್ರಿಸ್ ವುಡ್ಸ್ ಹೇಳಿದ್ದಾರೆ.  ಆದಾಗ್ಯೂ. ಈ ಹಂತವನ್ನು ಎಲ್ಲರೂ ಒಪ್ಪಿಲ್ಲ, ದೇಶಗಳು ಕಾಲಾನಂತರದಲ್ಲಿ ಪ್ರಕರಣಗಳಲ್ಲಿ ನಿರಂತರ ಇಳಿಕೆಯನ್ನು ಹುಡುಕುವ ಸಾಧ್ಯತೆಯಿರುವುದಾಗಿ ಅವರು ಹೇಳಿದ್ದಾರೆ.

ಕೋವಿಡ್-19 ಸೀಸನಲ್ ಆಗಿ ಸಮಸ್ಯೆಗೆ ಕಾರಣವಾಗಬಹುದು ಆದರೆ, ಇದೀಗ ಹೆಚ್ಚಿನ ಪ್ರಮಾಣದಲ್ಲಿ ಪ್ರಕರಣಗಳ ಸಂಖ್ಯೆ ಕಂಡುಬರುವುದಿಲ್ಲ, ಆದಾಗ್ಯೂ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವಿಕೆಯಂತಹ ಕ್ರಮಗಳನ್ನು ಕೈಬಿಡಬಾರದು, ಅವುಗಳನ್ನು ಮುಂದುವರೆಸಬೇಕು, ಸಾಂಕ್ರಾಮಿಕ ಅಂತ್ಯಗೊಂಡ ನಂತರವೂ ಕೋವಿಡ್ ನಮ್ಮೊಂದಿಗೆ ಇರಲಿದೆ ಎಂದು ವುಡ್ಸ್  ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com