ಡಾ.ಕೆ. ಸುಧಾಕರ್
ಡಾ.ಕೆ. ಸುಧಾಕರ್

'ಕೋವಿಡ್ ಸೋಂಕಿನ ಅಂತ್ಯದ ದಿನ ಆರಂಭ'; ಕ್ರಿಸ್ ಮಸ್ ವೇಳೆಗೆ ಟಫ್ ರೂಲ್ಸ್ ಬಗ್ಗೆ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿಕೆ

ಕೋವಿಡ್-19 ಸೋಂಕಿನ ಅಂತ್ಯದ ದಿನಗಳು ಆರಂಭವಾಗಿದ್ದು, ರಾಜ್ಯದಲ್ಲಿ ವಿಶೇಷ ಲಸಿಕಾ ಅಭಿಯಾನ ನಡೆಸಲಾಗುತ್ತದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
Published on

ಬೆಂಗಳೂರು: ಕೋವಿಡ್-19 ಸೋಂಕಿನ ಅಂತ್ಯದ ದಿನಗಳು ಆರಂಭವಾಗಿದ್ದು, ರಾಜ್ಯದಲ್ಲಿ ವಿಶೇಷ ಲಸಿಕಾ ಅಭಿಯಾನ ನಡೆಸಲಾಗುತ್ತದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.

ಓಮಿಕ್ರಾನ್ ಹರಡುವ ಬಗ್ಗೆ ಎಚ್ಚರಗೊಂಡಿರುವ ರಾಜ್ಯ ಸರ್ಕಾರ ಲಸಿಕೆ ಡ್ರೈವ್ ಅನ್ನು ತೀವ್ರಗೊಳಿಸಲು ಮುಂದಾಗಿದೆ. ಈ ಕುರಿತು ಬೆಂಗಳೂರಿನ ಸದಾಶಿವನಗರದಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ.ಸುಧಾಕರ್, 'ರಾಜ್ಯದಲ್ಲಿ ಇವತ್ತು ವಿಶೇಷ ಲಸಿಕೆ ಅಭಿಯಾನವನ್ನು ಆಯೋಜನೆ ಮಾಡಲಾಗಿದೆ. ಇದಕ್ಕಾಗಿ 1200 ಕಡೆ ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಈವರೆಗೆ ರಾಜ್ಯದಲ್ಲಿ  7 ಕೋಟಿ 80 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಶೇ. 68 ರಷ್ಟು ಜನರು ಎರಡು ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಹೇಳಿದರು.

ಕೋವಿಡ್ ನಿರ್ವಹಣೆಯಲ್ಲಿ ಇತರೆ ರಾಜ್ಯಗಳಿಗೆ ಕರ್ನಾಟಕ ಮಾದರಿ
ಅಂತೆಯೇ ರಾಜ್ಯದ ಜನತೆ ಉತ್ಸಾಹದಿಂದಲೇ ಲಸಿಕೆ ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ನಮ್ಮಲ್ಲಿ ಅಳವಡಿಸಿಕೊಂಡಿರುವ ಮಾದರಿಯನ್ನು ಎಲ್ಲಾ ರಾಜ್ಯಗಳು ಅಳವಡಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಕೋವಿಡ್ ಟಾಸ್ಕ್ ಫೋರ್ಸ್ ಕೂಡ ಇತರೆ ರಾಜ್ಯಗಳಿಗೆ ಸಲಹೆ ನೀಡಿದೆ ಎಂದು ಹೇಳಿದರು.

ಇತಿಹಾಸದ ಸಾಂಕ್ರಾಮಿಕ ರೋಗ ನೋಡಿದ್ರೆ 2ನೇ ಅಲೆ ತೀವ್ರವಾಗಿ ಇರುತ್ತೆ. ಬಳಿಕ 3 ಮತ್ತು 4 ನೇ ಅಲೆ ತೀವ್ರತೆ ಕಡಿಮೆ ಇರುತ್ತೆ ಎಂದು ಹೇಳಲಾಗಿತ್ತು. ಹಾಗಾಂತ ಯಾರು ನಿರ್ಲಕ್ಷ್ಯವಹಿಸಬಾರದು. ಮಾಸ್ಕ್ ಹಾಕಬೇಕು, ಲಸಿಕೆ ಪಡೆದುಕೊಳ್ಳಬೇಕು. ಕೊರೊನಾದಿಂದ ದೇಶ ಮುಕ್ತವಾಗುವ ಕೊನೆ ದಿನಗಳು ಕಂಡುಬರುತ್ತಿವೆ. ಆದರೆ ಹಾಗಂತ ಯಾರು ಉದಾಸೀನ ಮಾಡಬಾರದು. ಆದಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸುಧಾಕರ್ ತಿಳಿಸಿದರು.

ಕೊವಿಡ್ ಸೋಂಕಿನ ಅಂತ್ಯದ ದಿನಗಳು ಆರಂಭವಾಗಿದೆ
ಅಂತೆಯೇ ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಕೊರೊನಾ ಸ್ಫೋಟಗೊಳ್ಳುತ್ತಿದೆ. ಶಾಲಾ-ಕಾಲೇಜಿನ ಮಕ್ಕಳಲ್ಲಿ ಸೋಂಕು ಹೆಚ್ಚಾಗಿ ಪತ್ತೆಯಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಕೂಡ ಚರ್ಚೆ ನಡೆಸಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಇದೇ ವಿಚಾರವಾಗಿ ಮಾತನಾಡಿದ ಅವರು, 'ಇದು ಕೊವಿಡ್ ಸೋಂಕಿನ ಅಂತ್ಯದ ದಿನಗಳು ಆರಂಭ ಎಂದು ಹೇಳಿದ ಅವರು, ಈ ಬಗ್ಗೆ ನಿಖರವಾಗಿ ಸಮಯ ಹೇಳುವುದಕ್ಕೆ ಈಗ ಆಗಲ್ಲ. ರಾಜ್ಯಕ್ಕೆ 3, 4ನೇ ಅಲೆ ಬಂದರೂ ದೊಡ್ಡ ಪರಿಣಾಮವಾಗಲ್ಲ. ಆದರೂ ನಾವು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು.  ಈಗಾಗಲೇ 7 ಕೋಟಿ 80 ಲಕ್ಷ ಡೋಸ್ ಲಸಿಕೆಯನ್ನು ನೀಡಲಾಗಿದೆ. ಕರ್ನಾಟಕದಲ್ಲಿ ಕೊರೊನಾ ತಡೆಗೆ ಕೈಗೊಂಡ ಕ್ರಮಗಳು ಸಮಯೋಚಿತವಾಗಿದೆ. ನಾವು ಕೈಕೊಂಡ ಕ್ರಮಗಳನ್ನು ಇತರರು ಅನುಸರಿಸಬೇಕು. ಒಮಿಕ್ರಾನ್ ಬಗ್ಗೆ ಯಾರೂ ಉದಾಸೀನ ಮಾಡಬಾರದು. ಇದು ಹೊಸ ಪ್ರಭೇದವಾಗಿದ್ದು ತಕ್ಷಣಕ್ಕೆ ಗೊತ್ತಾಗಲ್ಲ ಅಧ್ಯಯನ ಬೇಕು ಎಂದು ಹೇಳಿದರು.

ಹೊಸವರ್ಷ, ಕ್ರಿಸ್‌ಮಸ್ ಆಚರಣೆಗೆ ಗೈಡ್‌ಲೈನ್ಸ್ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸಚಿವರು, ಈ ಬಗ್ಗೆ ಸಿಎಂ ಬೊಮ್ಮಾಯಿ ಚರ್ಚೆಗಳನ್ನು ನಡೆಸುತ್ತಿದ್ದಾರೆ. ಸಿಎಂ ಬೊಮ್ಮಾಯಿ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.

ಕ್ರಿಸ್ ಮಸ್ ವೇಳೆಗೆ ಟಫ್ ರೂಲ್ಸ್?
ಕ್ರಿಸ್ ಮಸ್ ಮತ್ತು ಹೊಸ ವರ್ಷಕ್ಕೆ ಟಫ್ ರೂಲ್ಸ್ ಜಾರಿಗೆ ತರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಚರ್ಚೆ ಮಾಡ್ತಿದ್ದಾರೆ. ಆದಷ್ಟು ಬೇಗ ಸಿಎಂ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ. ನಾಳೆಯೂ ಕೂಡ ಕೋವಿಡ್ ಮುಂಜಾಗ್ರತೆ ಬಗ್ಗೆ ಸಭೆ ಆಯೋಜನೆಗೊಂಡಿದ್ದು, ಈ ಸಭೆಯಲ್ಲೂ ಹೊಸ ವರ್ಷಕ್ಕೆ ಟಫ್ ರೂಲ್ಸ್ ಜಾರಿಗೆ ತರುವ ಬಗ್ಗೆ ಚರ್ಚೆ ಆಗಲಿದೆ. ಆ ನಂತರ ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಅಂತಾ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com