ಒಮಿಕ್ರಾನ್ ಸೋಂಕಿತ ಪರಾರಿ ಪ್ರಕರಣ: ಆಫ್ರಿಕಾ ಪ್ರಜೆ, ಸ್ಟಾರ್ ಹೊಟೆಲ್ ವಿರುದ್ಧ ಬಿಬಿಎಂಪಿ ಎಫ್ಐಆರ್ ದಾಖಲು

ಓಮಿಕ್ರಾನ್ ಕೋವಿಡ್ ರೂಪಾಂತರ ಸೋಂಕಿಗೆ ತುತ್ತಾಗಿದ್ದ ಆಫ್ರಿಕನ್ ಪ್ರಜೆ ಮತ್ತು ಆತನಿಗೆ ರೂಮ್ ನೀಡಿದ್ದ ಸ್ಟಾರ್ ಹೊಟೆಲ್ ವಿರುದ್ಧ ಇದೀಗ ಬಿಬಿಎಂಪಿ ಕರ್ನಾಟಕ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯಡಿ ಎಫ್ ಐಆರ್ ದಾಖಲಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಓಮಿಕ್ರಾನ್ ಕೋವಿಡ್ ರೂಪಾಂತರ ಸೋಂಕಿಗೆ ತುತ್ತಾಗಿದ್ದ ಆಫ್ರಿಕನ್ ಪ್ರಜೆ ಮತ್ತು ಆತನಿಗೆ ರೂಮ್ ನೀಡಿದ್ದ ಸ್ಟಾರ್ ಹೊಟೆಲ್ ವಿರುದ್ಧ ಇದೀಗ ಬಿಬಿಎಂಪಿ ಕರ್ನಾಟಕ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯಡಿ ಎಫ್ ಐಆರ್ ದಾಖಲಿಸಿದೆ.

ಕೊರೊನಾ ರೂಪಾಂತರಿ ಓಮಿಕ್ರಾನ್ ಸೋಂಕಿದ್ದರೂ ಆಫ್ರಿಕಾ ಪ್ರಜೆ ದೇಶ ತೊರೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ಸ್ಚಾರ್ ಹೊಟೆಲ್ ಶಾಂಗ್ರಿ-ಲಾ ಆಡಳಿತ ಮಂಡಳಿ ಮತ್ತು ಆಫ್ರಿಕಾ ಪ್ರಜೆ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಿಬಿಎಂಪಿ ಆರೋಗ್ಯ ಅಧಿಕಾರಿ ಡಾ.ನವೀನ್ ದೂರು ಸಲ್ಲಿಸಿದ್ದು, ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಮೂಲಗಳ ಪ್ರಕಾರ ಐಪಿಸಿ ಸೆಕ್ಷನ್ 269, 271, 114 ಹಾಗೂ ಕರ್ನಾಟಕ ಎಪಿಡೆಮಿಕ್ ಡಿಸಿಸ್ ಆ್ಯಕ್ಟ್ ಅಡಿ ಎಫ್ಐಆರ್ ದಾಖಲಾಗಿದೆ.

ಏನಿದು ಪ್ರಕರಣ?
ನವೆಂಬರ್ 20ರಂದು ಬೆಂಗಳೂರಿಗೆ ಬಂದಿದ್ದ ಆಫ್ರಿಕಾ ಪ್ರಜೆಯನ್ನು ಏರ್​ಪೋರ್ಟ್​ನಲ್ಲಿ​ ಟೆಸ್ಟ್ ಮಾಡಿದಾಗ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆ ಶಾಂಗ್ರಿಲಾ ಹೊಟೇಲ್​ನಲ್ಲಿ 14 ದಿನಗಳ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ನವೆಂಬರ್ 27ಕ್ಕೆ ಹೋಟೆಲ್ ತೊರೆದು ದೇಶ ಬಿಟ್ಟು ಪರಾರಿಯಾಗಿದ್ದಾನೆ. ಆದರೆ ಈ ಬಗ್ಗೆ ಶಾಂಗ್ರಿ-ಲಾ ಹೋಟೆಲ್ ಆಡಳಿತ ಮಂಡಳಿ ಮಾಹಿತಿ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ. ಇದೇ ಕಾರಣಕ್ಕೆ ಇದೀಗ ಆಫ್ರಿಕನ್ ಪ್ರಜೆ ಮತ್ತು ಶಾಂಗ್ರಿ ಲಾ ಆಡಳಿತ ಮಂಡಳಿಯ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ.

ಬಿಬಿಎಂ ನೋಟಿಸ್
ಒಮಿಕ್ರಾನ್ ಸೋಂಕಿತ ವಿದೇಶಕ್ಕೆ ಹೇಗೆ ಎಸ್ಕೇಪ್ ಆದ? ಹೋಟೆಲ್ ಸಿಬ್ಬಂದಿ ಯಾವ ಕಾರಣಕ್ಕೆ ಹೊರಗೆ ಕಳಿಸಿದರು? ಜಿನೋಮಿಕ್ ಸೀಕ್ವೆನ್ಸ್​ಗೂ ಮೊದಲೇ ಹೇಗೆ ಹೊರಗೆ ಬಿಟ್ರಿ? ಯಾವ ಕಾರಣಕ್ಕೆ ಆತನನ್ನು ಕ್ವಾರಂಟೈನ್ ಮಾಡಿಲ್ಲ? ಕಾರಣ ಹೇಳಿ ಸ್ಪಷ್ಟನೆ ನೀಡುವಂತೆ ಬಿಬಿಎಂಪಿ ಹೋಟೆಲ್ ಮಾಲೀಕರಿಗೆ ನೋಟಿಸ್​ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com