ಶ್ರೀಲಂಕಾ: ಸಾರ್ವಜನಿಕ ಸ್ಥಳಗಳಲ್ಲಿ ಲಸಿಕೆ ಕಾರ್ಡ್ ಕಡ್ಡಾಯ: ಅಧ್ಯಕ್ಷ ಘೋಷಣೆ

ಶ್ರೀಲಂಕಾದ 2.1 ಕೋಟಿ ಜನಸಂಖ್ಯೆಯಲ್ಲಿ 1.5 ಕೋಟಿ ಜನರು ಲಸಿಕೆ ಪಡೆದಿರುವುದಾಗಿ ಅವರು ಇದೇ ವೇಳೆ ಬಹಿರಂಗಪಡಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಲಂಬೊ: ಸಾರ್ವಜನಿಕ ಪ್ರದೇಶಗಳಲ್ಲಿ ಜನರು ಕೊರೊನಾ ಲಸಿಕೆ ಕಾರ್ಡ್ ಗಳನ್ನು ಹೊಂದಿರಬೇಕು ಎಂದು ಅಧ್ಯಕ್ಷ ಗೊಟಬಯ ರಾಜಪಕ್ಸ ಘೋಷಿಸಿದ್ದಾರೆ.

ಲಸಿಕೆ ಪಡೆದಿಲ್ಲದವರನ್ನು ಸಾರ್ವಜನಿಕ ಪ್ರದೇಶಗಳಿಂದ ದೂರವಿಡುವ ಬಗ್ಗೆ ಕಾನೂನು ಸಲಹೆ ಪಡೆಯುತ್ತಿರುವುದಾಗಿ ಇದೇ ವೇಳೆ ಅವರು ತಿಳಿಸಿದ್ದಾರೆ. 

ಎರಡೂ ಡೋಸ್ ಲಸಿಕೆ ಪಡೆದವರಿಗೆ ಮಾತ್ರವೇ ಲಸಿಕೆ ಕಾರ್ಡ್ ಗಳನ್ನು ಈಗ ನೀಡಲಾಗುತ್ತಿದೆ. ಶ್ರೀಲಂಕಾದ 2.1 ಕೋಟಿ ಜನಸಂಖ್ಯೆಯಲ್ಲಿ 1.5 ಕೋಟಿ ಜನರು ಲಸಿಕೆ ಪಡೆದಿರುವುದಾಗಿ ಅವರು ಇದೇ ವೇಳೆ ಬಹಿರಂಗಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com