Year 2022 ಗೆ ನ್ಯೂಜಿಲೆಂಡ್ ಸ್ವಾಗತ! ಹೊಸ ವರ್ಷವನ್ನು ಸ್ವಾಗತಿಸುವ ಮೊದಲ ದೇಶ ಯಾವುದು ಗೊತ್ತಾ?
2021 ಕೊನೆಗೊಳ್ಳಲು ಇನ್ನು ಕೆಲವೇ ಗಂಟೆಗಳು ಬಾಕಿ ಇರುವಂತೆಯೇ ಅತ್ತ ನ್ಯೂಜಿಲೆಂಡ್ ನಲ್ಲಿ ಅದ್ದೂರಿಯಾಗಿ ಹೊಸ ವರ್ಷ 2022ರನ್ನು ಸ್ವಾಗತಿಸಲಾಗಿದೆ.
Published: 31st December 2021 04:50 PM | Last Updated: 31st December 2021 05:54 PM | A+A A-

ನ್ಯೂಜಿಲೆಂಡ್ ನ ಆಕ್ಲೆಂಡ್ ನಲ್ಲಿ ಹೊಸ ವರ್ಷದ ಸಂಭ್ರಮ
ಆಕ್ಲೆಂಡ್: 2021 ಕೊನೆಗೊಳ್ಳಲು ಇನ್ನು ಕೆಲವೇ ಗಂಟೆಗಳು ಬಾಕಿ ಇರುವಂತೆಯೇ ಅತ್ತ ನ್ಯೂಜಿಲೆಂಡ್ ನಲ್ಲಿ ಅದ್ದೂರಿಯಾಗಿ ಹೊಸ ವರ್ಷ 2022ರನ್ನು ಸ್ವಾಗತಿಸಲಾಗಿದೆ.
#WATCH New Zealand's Auckland welcomes the new year 2022 with fireworks https://t.co/kNOsxyniQl
— ANI (@ANI) December 31, 2021
ನ್ಯೂಜಿಲೆಂಡ್ ನ ಆಕ್ಲೆಂಡ್ ನಲ್ಲಿ ಸಿಡಿಮದ್ದು ಮತ್ತು ದೀಪಾಲಂಕಾರಗಳ ಮೂಲಕ 2022ರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಯಾವ ದೇಶದಲ್ಲಿ ಹೊಸ ವರ್ಷ ಮೊದಲು ಬರುತ್ತದೆ?
ವಿಶ್ವದಲ್ಲಿ ಮೊದಲು ಹೊಸ ವರ್ಷವನ್ನು ಎದುರುಗೊಳ್ಳುವುದು ಒಸಿಯಾನಿಯಾದ ಜನರು. ಹೌದು. ಟೊಂಗಾ, ಸಮೊವಾ, ಕಿರಬಾಸ್ ದೇಶಗಳು ಹೊಸ ವರ್ಷವನ್ನು ಮೊದಲು ಸ್ವಾಗತಿಸುತ್ತಾರೆ. ಈ ಸಮಯದಲ್ಲಿ ಭಾರತದಲ್ಲಿ ಡಿಸೆಂಬರ್ 31ರ ಮಧ್ಯಾಹ್ನ 3.30 ಆಗಿರುತ್ತದೆ.
ಬ್ರಿಟನ್ನಲ್ಲಿ ಇನ್ನೂ ಡಿಸೆಂಬರ್ 31ರ ಮುಂಜಾವಿನ 10 ಗಂಟೆಯಾಗಿರುತ್ತದೆ. ದ್ವೀಪ ರಾಷ್ಟ್ರಗಳಲ್ಲಿ ಹೊಸ ವರ್ಷ ಆಗಮಿಸಿದ ಐದೇ ನಿಮಿಷಕ್ಕೆ ನ್ಯೂಜಿಲೆಂಡ್ ದೇಶ ಹೊಸ ವರ್ಷವನ್ನು ಎದುರುಗೊಳ್ಳುತ್ತದೆ (ಭಾರತೀಯ ಕಾಲಮಾನ ಡಿ.31ರ ಮಧ್ಯಾಹ್ನ 3.35). ಮೂರು ಗಂಟೆಗಳ ನಂತರ ಆಸ್ಟ್ರೇಲಿಯಾದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಪ್ರಾರಂಭವಾಗುತ್ತದೆ (ಭಾರತೀಯ ಕಾಲಮಾನ ಡಿ.31ರ ಸಂಜೆ 6.30).
ಹೊಸ ವರ್ಷವನ್ನು ಕೊನೆಗೆ ಸ್ವಾಗತಿಸುವ ರಾಷ್ಟ್ರಗಳು ಯಾವುವು?
ಅಮೇರಿಕಾ ಸಂಯುಕ್ತ ಸಂಸ್ಥಾನದ ಸಮೀಪವಿರುವ ದ್ವೀಪ ರಾಷ್ಟ್ರಗಳಾದ ಹೋಲ್ಯಾಂಡ್ ಮತ್ತು ಬೇಕಲ್ ಐಲ್ಯಾಂಡ್ ಹೊಸ ವರ್ಷಾಚರಣೆಯನ್ನು ಕೊನೆಯದಾಗಿ ಆಚರಿಸುತ್ತವೆ. ಅವು ಹೊಸ ವರ್ಷ ಸ್ವಾಗತಿಸುವಾಗ ಭಾರತದಲ್ಲಿ ಜನವರಿ 1ರ ಸಂಜೆ 5.30 ಆಗಿರುತ್ತದೆ. ಅಚ್ಚರಿಯ ಸಂಗತಿಯೆಂದರೆ ಕಡೆಯದಾಗಿ ಹೊಸ ವರ್ಷ ಸ್ವಾಗತಿಸುವ ಎರಡನೇ ರಾಷ್ಟ್ರ ‘ಅಮೇರಿಕನ್ ಸಮೋವಾ’. ಇದಕ್ಕೂ ಮೊದಲು ಹೊಸ ವರ್ಷ ಸ್ವಾಗತಿಸುವ ಟೊಂಗಕ್ಕೂ ಕೇವಲ 558 ಮೈಲುಗಳ ದೂರವಷ್ಟೇ ಅಂತರವಿದೆ ಎನ್ನಲಾಗಿದೆ.
ಅರ್ಥಾತ್ ಟೊಂಗಾ ಮೊದಲಾದ ಒಸಿಯಾನಿಯಾದ ದ್ವೀಪ ರಾಷ್ಟ್ರಗಳು ಹೊಸ ವರ್ಷ ಸ್ವಾಗತಿಸಿದ ಬರೋಬ್ಬರಿ ಒಂದು ದಿನದ ನಂತರ ಅಮೇರಿಕಾದ ಸಮೀಪದ ಹೋಲ್ಯಾಂಡ್ ದ್ವೀಪಗಳು ಹೊಸ ವರ್ಷವನ್ನು ಎದುರುಗೊಳ್ಳುತ್ತವೆ!