ನಾಪತ್ತೆಯಾಗಿದ್ದ ರಷ್ಯಾ ವಿಮಾನ ಎಎನ್-26 ಸಮುದ್ರಕ್ಕೆ ಬಿದ್ದು ಪತನ, 28 ಮಂದಿ ನಾಪತ್ತೆ

ರಷ್ಯಾದ ಪೂರ್ವವಲಯದ ಕಮ್‌ಚಾಟ್ಕಾದಿಂದ ನಾಪತ್ತೆಯಾಗಿದ್ದ ಎಎನ್-26 ವಿಮಾನ ಸಮುದ್ರದಲ್ಲಿ ಪತನವಾಗಿದ್ದು ವಿಮಾನದಲ್ಲಿದ್ದ 28 ಮಂದಿ ನಾಪತ್ತೆಯಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಾಸ್ಕೋ: ರಷ್ಯಾದ ಪೂರ್ವವಲಯದ ಕಮ್‌ಚಾಟ್ಕಾದಿಂದ ನಾಪತ್ತೆಯಾಗಿದ್ದ ಎಎನ್-26 ವಿಮಾನ ಸಮುದ್ರದಲ್ಲಿ ಪತನವಾಗಿದ್ದು ವಿಮಾನದಲ್ಲಿದ್ದ 28 ಮಂದಿ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಡಬಲ್ ಇಂಜಿನ್ ಟರ್ಬೋ ಪ್ರಾಪ್ ಮಾದರಿಯ ವಿಮಾನದ ದ ಭಗ್ನಾವಶೇಷಗಳು ಒಕೋಸ್ಕ್‌ ಸಮುದ್ರ ತೀರದ ವಿಮಾನ ನಿಲ್ದಾಣದ ರನ್‌ವೇಯ ಐದು ಕಿ.ಮೀ.ದೂರದಲ್ಲಿ ಮಂಗಳವಾರ ಪತ್ತೆಯಾಗಿದೆ.

ಆಂಟನಿ ಎಎನ್‌-26 ವಿಮಾನದಲ್ಲಿ ಮಗು ಸೇರಿ 22 ಪ್ರಯಾಣಿಕರು, ಆರು ಮಂದಿ ಸಿಬ್ಬಂದಿ ಇದ್ದರು. ವಿಮಾನ ಕಮ್‌ಚಾಟ್ಕಾದಿಂದ ಪಲಾನಾ ಪಟ್ಟಣಕ್ಕೆ ತೆರಳಬೇಕಿತ್ತು. ಮಾರ್ಗ ಮಧ್ಯೆ ವಿಮಾನ ಸಂಪರ್ಕ ಕಳೆದುಕೊಂಡಿತ್ತು. ಹೀಗಾಗಿ ವಿಮಾನದ ಪತ್ತೆಯಾಗಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಇದೀಗ  ವಿಮಾನದ ಭಗ್ನಾವಶೇಷಗಳು ಸಮುದ್ರದಲ್ಲಿ ಪತ್ತೆಯಾಗಿದೆ. 

ಕಮ್‌ಚಾಟ್ಕಾದ ಗವರ್ನರ್‌ ವಾಡಿಮಿರ್ ಸೊಲೊಡೊವ್ ಪ್ರಕಾರ, ವಿಮಾನದ ಪ್ರಮುಖ ಭಾಗ ಸಮುದ್ರ ತೀರದಲ್ಲಿ, ಉಳಿದ ಅವಶೇಷಗಳು ಸ್ವಲ್ಪದೂರದಲ್ಲಿ ಪತ್ತೆಯಾಗಿವೆ. ಯಾರೊಬ್ಬರೂ ಬದುಕುಳಿದಿರುವ ಸಂಭವವಿಲ್ಲ ಎಂದು ಹೇಳಲಾಗಿದೆ. 

ಈ ಆಂಟೊನೊವ್ ಸಣ್ಣ ಮಿಲಿಟರಿ ಮತ್ತು ನಾಗರಿಕ ವಿಮಾನವನ್ನು 1969-1986ರ ನಡುವೆ ಉತ್ಪಾದಿಸಲಾಗಿತ್ತು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com