
ಸಂಗ್ರಹ ಚಿತ್ರ
ಮಾಸ್ಕೋ: 17 ಜನರಿದ್ದ ರಷ್ಯಾದ ಪ್ರಯಾಣಿಕರ ವಿಮಾನವೊಂದು ಸೈಬೀರಿಯಾದಲ್ಲಿ ಹಾರಾಟ ನಡೆಸುತ್ತಿದ್ದಾಗ ನಾಪತ್ತೆಯಾಗಿದೆ.
ಪಶ್ಚಿಮ ಸೈಬೀರಿಯಾದ ಟಾಮ್ಸ್ಕ್ ಪ್ರದೇಶದಲ್ಲಿ An-28 ವಿಮಾನ ಕಣ್ಮರೆಯಾಗಿದೆ ಎಂದು ರಷ್ಯಾದ ತುರ್ತು ಸಚಿವಾಲಯದ ಪ್ರಾದೇಶಿಕ ಶಾಖೆ ತಿಳಿಸಿದೆ.
ವಿಮಾನದಲ್ಲಿ ನಾಲ್ಕು ಮಕ್ಕಳು, ಮತ್ತು ಮೂವರು ಸಿಬ್ಬಂದಿ ಹಾಗೂ 14 ಪ್ರಯಾಣಿಕರನ್ನು ಕರೆದೊಯ್ಯಲಾಗಿದೆ ಎಂದು ಕಚೇರಿ ಹೇಳಿದೆ.
ಸ್ಥಳದಲ್ಲಿ ಹಲವಾರು ಹೆಲಿಕಾಪ್ಟರ್‌ಗಳನ್ನು ಬಳಸಿ ಶೋಧ ಕಾರ್ಯ ನಡೆದಿದೆ.
An-28 ಎನ್ನುವುದು ಒಂದು ಚಿಕ್ಕ ಕಡಿಮೆ ದರ್ಜೆಯ ಸೋವಿಯತ್ ವಿನ್ಯಾಸದ ಟರ್ಬೊಪ್ರೊಪ್, ಇದನ್ನು ರಷ್ಯಾ ಮತ್ತು ಇತರ ಕೆಲವು ದೇಶಗಳಲ್ಲಿ ಅನೇಕ ಸಣ್ಣ ವಾಯುಯಾನ ಸಂಸ್ಥೆಗಳು ಬಳಸಿಕೊಳ್ಳುತ್ತದೆ.
ನಾಪತ್ತೆಯಾದ ವಿಮಾನ ಸ್ಥಳೀಯ ಸಿಲಾ ವಿಮಾನಯಾನ ಸಂಸ್ಥೆಗೆ ಸೇರಿದ್ದು, ಕೆಡ್ರೊವೊಯ್ ಪಟ್ಟಣದಿಂದ ಟಾಮ್ಸ್ಕ್ ನಗರಕ್ಕೆ ಹಾರುತ್ತಿತ್ತು ವಿಮಾನ ಕಣ್ಮರೆಯಾಗುವ ಮೊದಲು ವಿಮಾನ ಸಿಬ್ಬಂದಿ ಯಾವುದೇ ಸಮಸ್ಯೆ ಬಗೆಗೆ ಬಹಿರಂಗಪಡಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ವಿಮಾನದ ತುರ್ತು ಬೀಕನ್ ಸಕ್ರಿಯಗೊಂಡಿದೆ, ವಿಮಾನವು ಬಲವಂತದ ಲ್ಯಾಂಡಿಂಗ್ ಅಥವಾ ಕ್ರ್ಯಾಶ್ ಆಗಿರುವುದನ್ನು ಇದು ಸಂಕೇತಿಸುತ್ತದೆ.
ರಷ್ಯಾದ ದೂರದ ಈಸ್ಟ್ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ಕೆಟ್ಟ ಹವಾಮಾನದ ವರದಿಯಾಗಿದ್ದು ಅಲ್ಲಿ ಇಳಿಯುವ ತಯಾರಿ ನಡೆಸುತ್ತಿದ್ದಾಗ ರಷ್ಯಾದ ಮತ್ತೊಂದು ವಿಮಾನ ಅಪಘಾತಕ್ಕೀಡಾದ 10 ದಿನಗಳ ನಂತರ ವಿಮಾನದ ಕಣ್ಮರೆ ಸಂಭವಿಸಿದೆ. ಹಿಂದಿನ ಘಟನೆಯಲ್ಲಿ ವಿಮಾನದಲ್ಲಿದ್ದ ಎಲ್ಲಾ 28 ಜನರು ಸಾವನ್ನಪ್ಪಿದ್ದಾರೆ. An-26 ವಿಮಾನಾಪಘಾತದ ಬಗ್ಗೆ ತನಿಖೆ ಮುಂದುವರೆದಿದೆ.