ಬಾಗ್ದಾದ್ ನಲ್ಲಿ ಈದ್ ಗೂ ಮುನ್ನ ರಸ್ತೆ ಬದಿ ಬಾಂಬ್ ಸ್ಫೋಟ: 25 ಮಂದಿ ಸಾವು 

 ಬಾಗ್ದಾದ್ ನ ಉಪನಗರವನ್ನು ಗುರಿಯಾಗಿರಿಸಿಕೊಂಡು ರಸ್ತೆ ಬದಿಯಲ್ಲಿ ನಡೆಸಿದ ಬಾಂಬ್ ಸ್ಫೋಟಕ್ಕೆ 25 ಮಂದಿ ಬಲಿಯಾಗಿದ್ದಾರೆ. 

Published: 20th July 2021 12:53 AM  |   Last Updated: 20th July 2021 03:12 AM   |  A+A-


People and security forces gather at the site of a bombing in Wahailat market in Sadr City, Iraq. (Photo| AP)

ಬಾಗ್ದಾದ್ ನಲ್ಲಿ ಬಾಂಬ್ ಸ್ಫೋಟಗೊಂಡ ಪ್ರದೇಶ

Posted By : Srinivas Rao BV
Source : The New Indian Express

ಬಾಗ್ದಾದ್: ಬಾಗ್ದಾದ್ ನ ಉಪನಗರವನ್ನು ಗುರಿಯಾಗಿರಿಸಿಕೊಂಡು ರಸ್ತೆ ಬದಿಯಲ್ಲಿ ನಡೆಸಿದ ಬಾಂಬ್ ಸ್ಫೋಟಕ್ಕೆ 25 ಮಂದಿ ಬಲಿಯಾಗಿದ್ದಾರೆ. 

ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಇರಾಕ್ ನ ಭದ್ರತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈದ್ ಆಚರಣೆಯ ಹಿನ್ನೆಲೆಯಲ್ಲಿ ಜನತೆ ವಸ್ತುಗಳ ಖರೀದಿಯಲ್ಲಿ  ಸದರ್ ನಗರದ ವಹೈಲತ್ ಮಾರ್ಕೆಟ್ ನಲ್ಲಿ ಈ ಘಟನೆ ನಡೆದಿದೆ.

ಘಟನೆಗೆ ಯಾವುದೇ ಸಂಘಟನೆ ಹೊಣೆ ಹೊತ್ತುಕೊಂಡಿಲ್ಲ. ಆದರೆ ಇದೇ ಪ್ರದೇಶಗಳಲ್ಲಿ ಈ ಹಿಂದೆ ಇಸ್ಲಾಮಿಕ್ ಸ್ಟೇಟ್ ಇಂತಹ ಸ್ಫೋಟಗಳನ್ನು ನಡೆಸಿದೆ. 

ಈ ವರ್ಷದಲ್ಲಿ ಜನನಿಬಿಡ ಮಾರುಕಟ್ಟೆಯಲ್ಲಿ ಸಂಭವಿಸಿರುವ ಮೂರನೇ ಸ್ಫೋಟ ಪ್ರಕರಣ ಇದಾಗಿದ್ದು, ಮಾರುಕಟ್ಟೆ ಪ್ರದೇಶದಲ್ಲಿ ಜವಾಬ್ದಾರಿ ಹೊಂದಿದ್ದ ಫೆಡರಲ್ ಪೊಲೀಸ್ ರೆಜಿಮೆಂಟ್ ನ ಕಮಾಂಡರ್ ನ್ನು ಬಂಧಿಸಿ ವಿಚಾರಣೆ ನಡೆಸುವುದಕ್ಕೆ ಪ್ರಧಾನಿ ಮುಸ್ತಫಾ-ಅಲ್-ಕಧಿಮಿ ಆದೇಶಿಸಿದ್ದಾರೆ. 


Stay up to date on all the latest ಅಂತಾರಾಷ್ಟ್ರೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp