ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೇಸ್ಬುಕ್ ಖಾತೆ 2 ವರ್ಷಗಳ ಕಾಲ ಅಮಾನತು!
ಅಮೆರಿಕಾದ ಕ್ಯಾಪಿಟಲ್ ಕಟ್ಟನದ ಮೇಲೆ ಜನವರಿ 6ರಂದು ನಡೆದ ದಂಗೆಗೂ ಮುನ್ನ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ್ದ ಫೇಸ್ ಬುಕ್ ಪೋಸ್ಟ್ ಗಳು ಪ್ರಚೋನಕಾರಿಯಾಗಿದ್ದವು ಎಂಬ ಕಾರಣ ನೀಡಿ ಫೇಸ್ ಬುಕ್ ಸಂಸ್ಥೆ ಟ್ರಂಪ್ ಖಾತೆಯನ್ನು 2 ವರ್ಷಗಳ ಕಾಲ ಬ್ಯಾನ್ ಮಾಡಿದೆ.
Published: 05th June 2021 01:01 AM | Last Updated: 05th June 2021 01:01 AM | A+A A-

ವಾಷಿಂಗ್ಟನ್: ಅಮೆರಿಕಾದ ಕ್ಯಾಪಿಟಲ್ ಕಟ್ಟನದ ಮೇಲೆ ಜನವರಿ 6ರಂದು ನಡೆದ ದಂಗೆಗೂ ಮುನ್ನ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ್ದ ಫೇಸ್ ಬುಕ್ ಪೋಸ್ಟ್ ಗಳು ಪ್ರಚೋನಕಾರಿಯಾಗಿದ್ದವು ಎಂಬ ಕಾರಣ ನೀಡಿ ಫೇಸ್ ಬುಕ್ ಸಂಸ್ಥೆ ಟ್ರಂಪ್ ಖಾತೆಯನ್ನು 2 ವರ್ಷಗಳ ಕಾಲ ಬ್ಯಾನ್ ಮಾಡಿದೆ.
ಡೊನಾಲ್ಡ್ ಟ್ರಂಪ್ ನಡೆಯು ಫೇಸ್ ಬುಕ್ ಸಂಸ್ಥೆಯ ಹೊ ಸ ನಿಯಮಾವಳಿಗಳನ್ನು ಮುರಿದಿದೆ. ಸಂಸ್ಧೆಯ ಮಾನದಂಡಗಳ ಅನ್ವಯ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು 2023ರ ಜನವರಿವರೆಗೆ ಅಮಾನತು ಮಾಡಲಾಗಿದೆ ಎಂದು ಫೇಸ್ ಬುಕ್ ತಿಳಿಸಿದೆ.
ಈ ಅವಧಿಯ ಕೊನೆಯಲ್ಲಿ, ಸಾರ್ವಜನಿಕ ಸುರಕ್ಷತೆಗೆ ಅಪಾಯವು ಕಡಿಮೆಯಾಗಿದೆ ಎಂದು ನಿರ್ಣಯಿಸಲು ನಾವು ತಜ್ಞರನ್ನು ಸಂಪರ್ಕಿಸುತ್ತೇವೆ. ಹಿಂಸಾಚಾರದ ನಿದರ್ಶನಗಳು, ಶಾಂತಿಯುತ ಸಭೆ ಮತ್ತು ನಾಗರಿಕ ಅಶಾಂತಿಯ ಇತರ ಗುರುತುಗಳು ಸೇರಿದಂತೆ ಬಾಹ್ಯ ಅಂಶಗಳನ್ನು ನಾವು ಮೌಲ್ಯಮಾಪನ ಮಾಡುತ್ತೇವೆ ಎಂದು ಫೇಸ್‌ಬುಕ್‌ನ ಜಾಗತಿಕ ವ್ಯವಹಾರಗಳ ಉಪಾಧ್ಯಕ್ಷ ನಿಕ್ ಕ್ಲೆಗ್ ಶುಕ್ರವಾರ ಬ್ಲಾಗ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಫೇಸ್‌ಬುಕ್‌ನಲ್ಲಿ ಟ್ರಂಪ್‌ರ ಅಮಾನತು ಎಂದರೆ ಅವರ ಖಾತೆಯು ಮೂಲಭೂತವಾಗಿ 'ಫೇಸ್‌ಬುಕ್ ಜೈಲಿನಲ್ಲಿದ್ದಂತೆ. ಅಲ್ಲಿ ಇತರರು ಹಿಂದಿನ ಪೋಸ್ಟ್‌ಗಳನ್ನು ಓದಬಹುದು ಮತ್ತು ಕಾಮೆಂಟ್ ಮಾಡಬಹುದು. ಆದರೆ ಟ್ರಂಪ್ ಮತ್ತು ಖಾತೆ ನಿರ್ವಹಿಸುವ ಇತತರು ಹೊಸ ವಿಷಯಗಳನ್ನು ಪೋಸ್ಟ್ ಮಾಡಲು ಸಾಧ್ಯವಾಗುವುದಿಲ್ಲ. ಫೇಸ್ ಬುಕ್ ಟ್ರಂಪ್ ಖಾತೆಯನ್ನು ಅಮಾನತು ಮಾಡಿದ್ದರೆ ಟ್ವಿಟರ್ ಮಾತ್ರ ಶಾಶ್ವತವಾಗಿ ಅವರ ಖಾತೆಯನ್ನು ಅಳಿಸಿ ಹಾಕಿದೆ.
ಟ್ರಂಪ್ ಖಾತೆಯನ್ನು ಅಮಾನತು ಮಾಡಿರುವ ಫೇಸ್ ಬುಕ್ ನಡೆಯನ್ನು ಹಲವರು ಸ್ವಾಗತಿಸಿದ್ದಾರೆ. ಆದರೆ ರಿಪಬ್ಲಿಕನ್ ಶಾಸಕರು, ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ನ್ಯಾಯವಾದಿಗಳು ಟ್ರಂಪ್ ಖಾತೆ ಮೇಲಿನ ನಿರ್ಬಂಧವನ್ನು ವಿರೋಧಿಸಿದ್ದಾರೆ.