ವಂಚನೆ ಪ್ರಕರಣ: ಮಹಾತ್ಮ ಗಾಂಧಿ ಮರಿ ಮೊಮ್ಮಗಳಿಗೆ ದಕ್ಷಿಣ ಆಫ್ರಿಕಾದಲ್ಲಿ ಜೈಲು ಶಿಕ್ಷೆ

ಆರು ದಶಲಕ್ಷ ರ್ಯಾಂಡ್ ವಂಚನೆ ಮತ್ತು ಖೋಟಾ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಹಾತ್ಮ ಗಾಂಧಿಯವರ ಮರಿ ಮೊಮ್ಮಗಳಿಗೆ ಡರ್ಬನ್ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಮಹಾತ್ಮ ಗಾಂಧಿ
ಮಹಾತ್ಮ ಗಾಂಧಿ

ಡರ್ಬನ್: ಆರು ದಶಲಕ್ಷ ರ್ಯಾಂಡ್ ವಂಚನೆ ಮತ್ತು ಖೋಟಾ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಹಾತ್ಮ ಗಾಂಧಿಯವರ ಮರಿ ಮೊಮ್ಮಗಳಿಗೆ ಡರ್ಬನ್ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಆಶಿಶ್ ಲತಾ ರಾಮ್‌ಗೋಬಿನ್ (56) ಅವರನ್ನು ನ್ಯಾಯಾಲಯ ಸೋಮವಾರ ತಪ್ಪಿತಸ್ಥರೆಂದು ಪರಿಗಣಿಸಿದೆ.

ಭಾರತದಿಂದ ಅಕ್ರಮವಾಗಿ ಸಾಗಾಟಕ್ಕೆ ಅನುವಾಗಲು ಆಮದು ಮತ್ತು ಕಸ್ಟಮ್ಸ್ ಸುಂಕವನ್ನು ತೆರವುಗೊಸುವ ಬಗ್ಗೆ ಉದ್ಯಮಿ ಎಸ್.ಆರ್. ಮಹಾರಾಜ್ ಅವರಿಗೆ ಲಾಭದ ಪಾಲು ನೀಡುವ ಭರವಸೆ ನೀಡಿದ ಆರೋಪ ಆಕೆಯ ಮೇಲಿದೆ.

ಖ್ಯಾತ ಸಾಮಾಜಿಕ ಹಕ್ಕುಗಳ ಕಾರ್ಯಕರ್ತರಾದ ಎಲಾ ಗಾಂಧಿ ಮತ್ತು ದಿವಂಗತ ಮೇವಾ ರಾಮ್‌ಗೋಬಿಂದ್ ಅವರ ಪುತ್ರಿ ಲತಾ ರಾಮ್‌ಗೋಬಿನ್ ಅವರಿಗೆ ಶಿಕ್ಷೆ ವಿಧಿಸಿರುವ ನ್ಯಾಯಾಲಯ ಮೇಲ್ಮನವಿ ಸಲ್ಲಿಸಲು ಅವಕಾಶ ನಿರಾಕರಿಸಿತು.

2015 ರಲ್ಲಿ ಲತಾ ರಾಮ್‌ಗೋಬಿನ್ ವಿರುದ್ಧದ ಪ್ರಕರಣದ ವಿಚಾರಣೆ ಪ್ರಾರಂಭವಾದಾಗ, ನ್ಯಾಷನಲ್ ಪ್ರಾಸಿಕ್ಯೂಟಿಂಗ್ ಪ್ರಾಧಿಕಾರದ (ಎನ್‌ಪಿಎ) ಬ್ರಿಗೇಡಿಯರ್ ಹಂಗ್ವಾನಿ ಮುಲಾಡ್ಜಿ ಅವರು ಭಾರತದಿಂದ ಮೂರು ಲಿನಿನ್ ಕಂಟೇನರ್‌ಗಳನ್ನು ಸಾಗಿಸಲಾಗುತ್ತಿದೆ ಎಂದು ಸಂಭಾವ್ಯ ಹೂಡಿಕೆದಾರರಿಗೆ ಮನವರಿಕೆ ಮಾಡಲು ನಕಲಿ ಇನ್‌ವಾಯ್ಸ್ ಮತ್ತು ದಾಖಲೆಗಳನ್ನು ಒದಗಿಸಿದ್ದಾರೆ ಎಂದು ಹೇಳಿದ್ದರು

ಆ ಸಮಯದಲ್ಲಿ, ಲತಾ ರಾಮ್‌ಗೋಬಿನ್ 50,000 ರಾಂಡ್‌ನ ಜಾಮೀನಿನ ಮೇಲೆ ಬಿಡುಗಡೆಯಾದರು. ಸೋಮವಾರ, ವಿಚಾರಣೆಯ ಸಮಯದಲ್ಲಿ ನ್ಯಾಯಾಲಯಕ್ಕೆ ಲತಾ ರಾಮ್‌ಗೋಬಿನ್ ಅವರು 2015 ರ ಆಗಸ್ಟ್‌ನಲ್ಲಿ ನ್ಯೂ ಆಫ್ರಿಕಾ ಅಲೈಯನ್ಸ್ ಪಾದರಕ್ಷೆಗಳ ವಿತರಕರ ನಿರ್ದೇಶಕ ಮಹಾರಾಜ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿಸಲಾಯಿತು. ಕಂಪನಿಯು ಬಟ್ಟೆ, ಲಿನಿನ್ ಮತ್ತು ಪಾದರಕ್ಷೆಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡುತ್ತದೆ.

ಮಹಾರಾಜ್ ಅವರ ಕಂಪನಿಯು ಇತರ ಕಂಪನಿಗಳಿಗೆ ಲಾಭ-ಷೇರು ಆಧಾರದ ಮೇಲೆ ಹಣಕಾಸು ಒದಗಿಸುತ್ತದೆ. 

ದಕ್ಷಿಣ ಆಫ್ರಿಕಾದ ಹಾಸ್ಪಿಟಲ್ ಗ್ರೂಪ್ ನೆಟ್‌ಕೇರ್‌ಗಾಗಿ ಮೂರು ಕಂಟೇನರ್ ಲಿನಿನ್ ಆಮದು ಮಾಡಿಕೊಂಡಿದ್ದಾಗಿ ಲತಾ ರಾಮ್‌ಗೋಬಿನ್ ಮಹಾರಾಜ್‌ಗೆ ತಿಳಿಸಿದ್ದರು. "ಆಮದು ವೆಚ್ಚ ಮತ್ತು ಕಸ್ಟಮ್ಸ್ ಗಾಗಿ ಗಿ ಪಾವತಿಸಲು ಅವರು ಹಣಕಾಸಿನ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಬಂದರಿನಲ್ಲಿ ಸರಕುಗಳನ್ನು ತೆರವುಗೊಳಿಸಲು ಅವರಿಗೆ ಹಣದ ಅವಶ್ಯಕತೆಯಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com